ETV Bharat / city

ಕೋವಿಡ್​ ವಿಚಾರದಲ್ಲಿ ಕಾಂಗ್ರೆಸ್ ​ಮುಖಂಡರಿಂದ ಕೀಳುಮಟ್ಟದ ರಾಜಕಾರಣ: ಸಚಿವ ಸುಧಾಕರ್

ಕಾಂಗ್ರೆಸ್​ನವರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ದೇಶದಲ್ಲಿ ಯಾರೂ ಕೂಡ ಕೋವಿಡ್ ವಿಚಾರದಲ್ಲಿ ರಾಜಕಾರಣ ಮಾಡಿಲ್ಲ. ದುರಾದೃಷ್ಟವಶಾತ್, ಪಾಪ ಅವರಿಗೆ ಬೇರೆ ವಿಷಯ ಸಿಕ್ಕಿಲ್ಲ. ರಾಜಕೀಯದಲ್ಲಿ ಉಳಿದುಕೊಳ್ಳಬೇಕು ಎಂದು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದು ದುರಂತ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ವ್ಯಂಗ್ಯವಾಡಿದ್ದಾರೆ.

sudhakar
ಸಚಿವ ಸುಧಾಕರ್
author img

By

Published : Jul 21, 2020, 3:34 PM IST

ಬೆಂಗಳೂರು : ನಿನ್ನೆ ಅಪೂರ್ಣವಾಗಿದ್ದ ಟಾಸ್ಕ್​ಫೋರ್ಸ್ ಸಭೆ ಇಂದು ಮುಂದುವರಿಯಿತು. ವಿಧಾನಸೌಧದ ಕ್ಯಾಬಿನೆಟ್ ಹಾಲ್​ನಲ್ಲಿ ಆರಂಭವಾದ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಆರೋಗ್ಯ ಸಚಿವ ಶ್ರೀರಾಮುಲು, ಡಿಸಿಎಂ ಡಾ. ಅಶ್ವತ್ಥನಾರಾಯಣ ಸೇರಿದಂತೆ ಟಾಸ್ಕ್​ಫೋರ್ಸ್ ಸಮಿತಿಯ ಸದಸ್ಯರು ಭಾಗವಹಿಸಿದರು.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಟಾಸ್ಕ್​ಫೋರ್ಸ್ ಸಭೆ ನಿನ್ನೆ ಅಪೂರ್ಣವಾಗಿತ್ತು. ಇಂದು ಸಭೆ ಮುಂದುವರೆಯುತ್ತಿದೆ. ಏಳೆಂಟು ವಿಷಯಗಳಿವೆ. ಆ್ಯಂಟಿಜೆನ್ ಟೆಸ್ಟ್ ವಿಚಾರವಾಗಿ ಚರ್ಚೆ ನಡೆಸುತ್ತಿದ್ದೇವೆ. ಪ್ಲಾಸ್ಮಾ ಬ್ಯಾಂಕ್ ಮಾಡಬೇಕಿದೆ. ಖಾಸಗಿ ಸಹಭಾಗಿತ್ವದಲ್ಲಿ ಇಂದು ಸ್ಥಾಪನೆಯಾಗಲಿದೆ ಎಂದು ಹೇಳಿದರು.

ನಾಳೆಯಿಂದ ಲಾಕ್​ಡೌನ್ ತೆರವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಮಾರ್ಗಸೂಚಿ ಬಿಡುಗಡೆ ಮಾಡುತ್ತಿದ್ದಾರೆ. ಜನನಿಬಿಡ ಪ್ರದೇಶಗಳಲ್ಲಿ ಪ್ರತ್ಯೇಕ ಮಾರ್ಗಸೂಚಿ ರಚಿಸಲಿದ್ದಾರೆ. ಮಾರ್ಕೆಟ್ ಪ್ರದೇಶಗಳಿಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟವಾಗಲಿದೆ ಎಂದರು.

ಕೋವಿಡ್ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಗಳಿಗೆ ನಿನ್ನೆ ಸಚಿವ ಶ್ರೀರಾಮುಲು ಹಾಗೂ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಅವರು ಸರ್ಕಾರದಿಂದ ಎಲ್ಲವನ್ನೂ ಹೇಳಿದ್ದಾರೆ. 290 ಕೋಟಿಯಷ್ಟು ಪರಿಕರ ಇದುವರೆಗೂ ಖರೀದಿಯಾಗಿದೆ. ಇದರಲ್ಲಿ 33 ಕೋಟಿ ರೂ. ನಷ್ಟು ವೈದ್ಯಕೀಯ ಇಲಾಖೆಯಿಂದ ಖರೀದಿಸಲಾಗಿದೆ. ಒಂದೂವರೆ ಗಂಟೆಗಳ ಕಾಲ ಅಂಕಿ-ಅಂಶಗಳ ಸಮೇತ ಅವರು ತಿಳಿಸಿದ್ದಾರೆ. ಏನಾದರೂ ತಪ್ಪಾಗಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ. ಮಂತ್ರಿಯಾದವರು ಇದಕ್ಕಿಂತ ಇನ್ನೇನು ಹೇಳಲು ಸಾಧ್ಯ? ಎಂದರು.

ಸಚಿವ ಡಾ. ಕೆ. ಸುಧಾಕರ್

33 ಕೋಟಿಗೆ 33 ಪ್ರಶ್ನೆ ಕೇಳಿದರೆ ಹೇಗೆ ಕೆಲಸ ಮಾಡುವುದು? ಎಂದು ಖಾರವಾಗಿ ಉತ್ತರಿಸಿದ ಅವರು, ವೆಂಟಿಲೇಟರ್ ಇಲ್ಲ, ಅದಿಲ್ಲ, ಇದಿಲ್ಲ ಅಂತ ಹೇಳ್ತಾರೆ. ಮಾಡೋಕೆ ಹೋದರೆ ಈ ರೀತಿ ಹೇಳುತ್ತಾರೆ. ಕಾಂಗ್ರೆಸ್​ನವರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ದೇಶದಲ್ಲಿ ಯಾರೂ ಕೂಡ ಕೋವಿಡ್ ವಿಚಾರದಲ್ಲಿ ರಾಜಕಾರಣ ಮಾಡಿಲ್ಲ. ದುರದೃಷ್ಟವಶಾತ್ ಪಾಪ ಅವರಿಗೆ ಬೇರೆ ವಿಷಯ ಇಲ್ಲ. ರಾಜಕೀಯದಲ್ಲಿ ಉಳಿದುಕೊಳ್ಳಬೇಕು ಎಂದು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಇದು ದುರಂತ ಎಂದು ವ್ಯಂಗ್ಯವಾಡಿದರು.

ಇದೇ ಸಂದರ್ಭದಲ್ಲಿ ಸಚಿವ ಶ್ರೀರಾಮುಲು ಮಾತನಾಡಿ, 5 ಲಕ್ಷ ಆ್ಯಂಟಿಜೆನ್ ಟೆಸ್ಟ್ ಕಿಟ್​ಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಮುಂದೆ ಟೆಸ್ಟ್​ಗಳನ್ನು ಹೆಚ್ಚು ಮಾಡುತ್ತೇವೆ. ಬೆಂಗಳೂರಿನಲ್ಲಿ ಶೇ. 50 ರಷ್ಟು ಟೆಸ್ಟ್ ಮಾಡುತ್ತೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.