ETV Bharat / city

ಆ್ಯಸಿಡ್ ದಾಳಿ ಆರೋಪಿ ನಾಗೇಶ್ ವಿರುದ್ಧ ಎಂಟು ದಿನಗಳ ಒಳಗೆ ಚಾರ್ಜ್​ಶೀಟ್ : ಕಮಲ್ ಪಂತ್

ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿ ನಾಗೇಶ್​​ ಮೇಲೆ ಎಂಟು ದಿನಗಳ ಒಳಗೆ ಚಾರ್ಜ್​ಶೀಟ್ ಹಾಕಲಾಗುವುದು. ಆದಷ್ಟು ಬೇಗ ಯುವತಿಗೆ ನ್ಯಾಯ ದೊರಕಿಸುವ ಕೆಲಸ ಮಾಡಲಾಗುವುದೆಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು..

Charge sheet will be filed against acid attack accused Nagesh: says kamal pant
ಬೆಂಗಳೂರು ಆ್ಯಸಿಡ್ ದಾಳಿ ಪ್ರಕರಣ
author img

By

Published : May 14, 2022, 2:00 PM IST

ಬೆಂಗಳೂರು : ನಗರದಲ್ಲಿ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿ ನಾಗೇಶ್​​ನನ್ನು ಬಂಧಿಸಿದ್ದು, ಕರ್ನಾಟಕಕ್ಕೆ ಕರೆತರಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು. ಇಂದು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 28ರಂದು ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿ ನಾಗೇಶ್​ನನ್ನು ಕಾಮಾಕ್ಷಿಪಾಳ್ಯ ಪೊಲೀಸರು ತಮಿಳುನಾಡಿನ ತಿರುವಣ್ಣಾಮಲೈ ಆಶ್ರಮದಲ್ಲಿ ಶುಕ್ರವಾರ ಸಂಜೆ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ. ಆರೋಪಿಯ ಮೇಲೆ ಎಂಟು ದಿನಗಳ ಒಳಗೆ ಚಾರ್ಜ್​ಶೀಟ್ ಹಾಕಲಾಗುವುದು. ಆದಷ್ಟು ಬೇಗ ಯುವತಿಗೆ ನ್ಯಾಯ ದೊರಕಿಸುವ ಕೆಲಸ ಮಾಡಲಾಗುವುದೆಂದು ಹೇಳಿದರು.

ಸ್ವಾಮೀಜಿ ವೇಷತೊಟ್ಟ ನಾಗೇಶ್ : ನಾಗೇಶ್ ಆ್ಯಸಿಡ್ ದಾಳಿ ನಡೆಸಿ ತಕ್ಷಣ ಅವನ ಸ್ನೇಹಿತ ಹಾಗೂ ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಅವರು ಪೊಲೀಸರಿಗೆ ಶರಣಾಗುವಂತೆ ತಿಳಿಸಿದ್ದಾರೆ. ಅದನ್ನು ಅಲ್ಲಗಳೆದು ನೇರವಾಗಿ ನ್ಯಾಯಾಲಯಕ್ಕೆ ಹೋಗಿ ಕೆಲ ವಕೀಲರನ್ನು ಸಂಪರ್ಕಿಸಿದ್ದಾನೆ. ಆದರೆ, ಅವರು ಪೊಲೀಸರಿಗೆ ವಿಷಯ ತಿಳಿಸುವಂತೆ ಹೇಳಿದಾಗ, ಅಲ್ಲಿಂದ ತಪ್ಪಿಸಿಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾನೆ. ಆದರೆ, ಆ ಯೋಜನೆ ಕೈಬಿಟ್ಟು ಅಲ್ಲಿಂದ ನೇರವಾಗಿ ತಿರುವಣ್ಣಾಮಲೈ ಆಶ್ರಮಕ್ಕೆ ಹೋಗಿ ಕಾವಿ ಬಟ್ಟೆ ತೊಟ್ಟು ಸ್ವಾಮೀಜಿ ಅಂತಾ ಪೂಜೆ ಹಾಗೂ ಧ್ಯಾನದಲ್ಲಿ ಮಗ್ನನಾಗಿದ್ದ ಎಂದು ಕಮಲ್ ಪಂತ್ ಮಾಹಿತಿ ನೀಡಿದರು.

ಆ್ಯಸಿಡ್ ದಾಳಿ ಕೇಸ್‌ನ ಆರೋಪಿ ನಾಗೇಶ್‌ ಬಂಧನ ಕುರಿತಂತೆ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಮಾಹಿತಿ ನೀಡಿರುವುದು..

ಮಾಹಿತಿ ನೀಡಿದ ಸಾರ್ವಜನಿಕರು : ಆರೋಪಿ ಸೆರೆಗೆ ಎಲ್ಲಾ ಕಡೆಗಳಲ್ಲಿ ಅವನ ಚಿತ್ರಗಳನ್ನು ಆಂಟಿಸಲಾಗಿತ್ತು. ಅದರಂತೆಯೇ ತಿರುವಣ್ಣಾಮಲೈ ಆಶ್ರಮದಲ್ಲಿ ಇದ್ದ ಕಾರಣ ಅದನ್ನು ಗಮನಿಸಿದ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರು ನೀಡಿದ ಮಾಹಿತಿ ಹಾಗೂ ಚಿತ್ರದ ಆಧಾರದಲ್ಲಿ ತಕ್ಷಣ ಸಮೀಪದಲ್ಲಿಯೇ ಇದ್ದ ಪೊಲೀಸರು ಸ್ಥಳಕ್ಕೆ ತೆರಳಿ ನೋಡಿದಾಗ ಅವನನ್ನು ಆರೋಪಿ ನಾಗೇಶ್ ಎಂದು ಖಚಿತಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.

ಪೂರ್ವನಿಯೋಜಿತ ಕೃತ್ಯ: ಕಳೆದ ಏಳು ವರ್ಷಗಳ ಹಿಂದೆ ಇಬ್ಬರು ಒಂದೇ ಕಟ್ಟಡದಲ್ಲಿ ವಾಸವಾಗಿದ್ದು, ಪ್ರೀತಿಸುವುದಾಗಿ ಯುವತಿಯನ್ನು ಪೀಡಿಸುತ್ತಿದ್ದ. ಆ ವಿಷಯವನ್ನು ಯುವತಿ ಮನೆಯವರೆಗೆ ತಿಳಿಸಿದಾಗ ಅವರು ಅವನನ್ನು ಅಲ್ಲಿಂದ ಹೊರ ಹೋಗುವಂತೆ ಒತ್ತಾಯಿಸಿದರು. ಆನಂತರವೂ ಸ್ನೇಹಿತನ ಸಹಾಯದಿಂದ ಆಕೆಯನ್ನು ಹಿಂಬಾಲಿಸುತ್ತಲೇ ಇದ್ದ. ಕಳೆದ ಸ್ವಲ್ಪ ದಿನಗಳ ಹಿಂದೆ ಸಂತ್ರಸ್ತೆಯ ಅಕ್ಕನಿಗೆ ಮದುವೆ ನಿಶ್ಚಯವಾಗಿದ್ದು, ಈಕೆಗೂ ಮದುವೆ ಮಾಡುವ ಯೋಚನೆ ಮಾಡುತ್ತಿದ್ದಾರೆ ಎನ್ನುವ ವಿಷಯ ತಿಳಿದು ಮತ್ತೊಂದು ಬಾರಿ ಅವಳನ್ನು ಒಪ್ಪಿಸಲು ಪ್ರಯತ್ನಿಸಿದ್ದಾನೆ. ಅದಕ್ಕೆ ಅವಳು ಖಡಾಖಂಡಿತವಾಗಿ ನಿರಾಕರಿಸಿದಾಗ ಈ ರೀತಿಯ ಕೃತ್ಯ ಎಸಗಿದ್ದಾನೆ.

ಇದನ್ನೂ ಓದಿ: ಬೆಳಗಾವಿ ಮೆಡಿಕಲ್​ ಕಾಲೇಜಲ್ಲಿ ಸೀನಿಯರ್ಸ್-ಜ್ಯೂನಿಯರ್ಸ್ ನಡುವೆ ಮಾರಾಮಾರಿ.. 15 ವಿದ್ಯಾರ್ಥಿಗಳು ಸಸ್ಪೆಂಡ್

ಆರೋಪಿ ನಾಗೇಶ್ 2020ರಲ್ಲಿ ಒಂದು ಬಾರಿ ಈ ರೀತಿಯ ಆ್ಯಸಿಡ್ ದಾಳಿ ನಡೆಸಲು ಯೋಚಿಸಿದ್ದು, ಕಾರಣಾಂತರಗಳಿಂದ ಅದನ್ನು ಕೈಬಿಟ್ಟಿದ್ದ. ಆದರೆ, ಈ ಬಾರಿ ಪೂರ್ವ ನಿಯೋಜಿಸಿಕೊಂಡಂತೆ, ಮೂರು ತಿಂಗಳ ಹಿಂದೆ ಊರಿನಲ್ಲಿದ್ದ ಜಮೀನನ್ನು ಮಾರಿ ಬೆಂಗಳೂರಿನಲ್ಲಿ ಒಂದು ಕಾರ್ಖಾನೆ ತೆರೆದಿದ್ದ. ಆದರೆ, ಏಪ್ರಿಲ್ 15ರಂದು ಆ ಕಾರ್ಖಾನೆಯ ಮಿಷಿನ್‌ಗಳನ್ನು ಮಾರಾಟ ಮಾಡಿ ಹಣ ಪಡೆದಿದ್ದ. ಅದರೊಂದಿಗೆ ಒಂದು ಪ್ರಿಂಟ್ ಮಾಡುವ ಕಂಪನಿಗೆ ಸೇರಿಕೊಂಡಿದ್ದು, ಅದರ ಲೆಟರ್ ಹೆಡ್ ಅಡಿಯಲ್ಲಿ ಸೆಲ್ಫರಿಕ್ ಆ್ಯಸಿಡ್ ಅನ್ನು ಖರೀದಿಸಿದ್ದ. ನಂತರ ಏಪ್ರಿಲ್ 28ರಂದು ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾನೆ ಎಂದು ಅವರು ಆರೋಪಿಯನ್ನು ವಿಚಾರಣೆ ನಡೆಸಿದ ಕುರಿತು ವಿವರಿಸಿದರು.

ಪೊಲೀಸರಿಗೆ 5 ಲಕ್ಷ ರೂ. ಅಭಿನಂದನಾ ಧನ : ಈ ಒಂದು ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ಕಳೆದ 15 ದಿನಗಳಿಂದ ಸುಮಾರು ನೂರಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಅಲ್ಲದೇ 50 ಮಂದಿ ಪೊಲೀಸ್ ಅಧಿಕಾರಿಗಳು ಎಲ್ಲೆಡೆ ಓಡಾಡುವ ಮೂಲಕ ಹಾಗೂ ತನಿಖೆಯ ಸಂಪೂರ್ಣ ಹುಡುಕಾಟವನ್ನು ಮಾಡಲು ಸತತವಾಗಿ ಕೆಲಸ ಮಾಡುತ್ತಿದ್ದರು. ಅವರ ಪರಿಶ್ರಮಕ್ಕೆ 5 ಲಕ್ಷ ರೂ.ಗಳನ್ನೂ ಅಭಿನಂದನೆಯ ರೂಪದಲ್ಲಿ ನೀಡಲಾಗುತ್ತದೆ ಎಂದು ಕಮಲ್ ಪಂತ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.