ETV Bharat / city

ಚಂದ್ರು ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿದ ಸಿಐಡಿ - ತನಿಖೆ ಚುರುಕುಗೊಳಿಸಿದ ಸಿಐಡಿ ತಂಡ

ಚಂದ್ರು ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರ ತಂಡ ಚುರುಕುಗೊಳಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮೂವರನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ತನಿಖಾಧಿಕಾರಿಗಳ ತಂಡ ವಿಚಾರಣೆ ಆರಂಭಿಸಿದೆ.

investigation
ಸಿಐಡಿ ತನಿಖೆ
author img

By

Published : Apr 19, 2022, 9:41 PM IST

ಬೆಂಗಳೂರು: ಜೆ.ಜೆ. ನಗರ ವ್ಯಾಪ್ತಿಯಲ್ಲಿ ನಡೆದ ಚಂದ್ರು ಹತ್ಯೆ ಪ್ರಕರಣದ ತನಿಖೆಗೆ ಸಿಐಡಿ ಪೊಲೀಸರ ತಂಡ ವೇಗ ನೀಡಿದೆ. ಚಂದ್ರು ಜೊತೆಗಿದ್ದ ಸೈಮನ್ ವಿಚಾರಣೆಯಲ್ಲಿ ಕಾರಣ ಬಯಲಾಗಿದ್ದು ಮತ್ತೊಂದೆಡೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಆರಂಭದಲ್ಲಿ ಉರ್ದು ಮಾತನಾಡದ ಕಾರಣಕ್ಕೆ ಚಂದ್ರು ಕೊಲೆಯಾಗಿದೆ ಎಂದಿದ್ದ. ಸೈಮನ್ ಸಿಐಡಿ ವಿಚಾರಣೆಯಲ್ಲಿ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆ ಆರಂಭವಾಯ್ತು, ಅವರು ಉರ್ದುವಿನಲ್ಲಿ ಬೈದ್ರು, ನಾವೂ ಬೈದ್ವಿ. ಆದರೆ ಗಲಾಟೆಗೆ ಕಾರಣ ಬೈಕ್ ಟಚ್ ಆಗಿದ್ದು ಎಂದು ಹೇಳಿದ್ದಾನೆ.

ಮತ್ತೊಂದೆಡೆ ಮೂವರೂ ಆರೋಪಿಗಳನ್ನು ಸಿಐಡಿ ವಶಕ್ಕೆ ಪಡೆದಿದೆ. ಜೆ.ಜೆ.ನಗರ ಪೊಲೀಸರಿಂದ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಶಾಹೀದ್, ಶಾಹೀದ್ ಹಾಗೂ ಮತ್ತೋರ್ವ ಅಪ್ರಾಪ್ತ ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ಸಿಐಡಿ ತನಿಖಾಧಿಕಾರಿಗಳ ತಂಡ ವಿಚಾರಣೆ ಆರಂಭಿಸಿದೆ.

ಸೈಮನ್ ಹೇಳಿಕೆಯಂತೆ ಬೈಕ್ ಟಚ್ ಆಗಿದ್ದಕ್ಕೆ ಗಲಾಟೆಯಾಗಿದೆಯಾ? ಹತ್ಯೆಗೆ ಕಾರಣಗಳೇನು? ಮಾರಕಾಸ್ತ್ರಗಳನ್ನು ಇಟ್ಟುಕೊಂಡಿದ್ದು ಯಾಕೆ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ವಿಚಾರಣಾ ಹಂತದಲ್ಲಿ ಘಟನಾ ಸ್ಥಳಕ್ಕೆ ಸಹ ಆರೋಪಿಗಳನ್ನು ಕರೆದೊಯ್ಯಲಿದ್ದು ಸಿಐಡಿ ತನ್ನ ಸ್ವಂತ ಮಹಜರ್ ಪ್ರಕ್ರಿಯೆ ನಡೆಸಲಿದೆ.

ಇದನ್ನೂ ಓದಿ: ಬೀದರ್​​​ನಲ್ಲಿ ಓದಿದ್ದ ವಿದ್ಯಾರ್ಥಿ ಈಗ ಪಂಜಾಬ್ ವಿಧಾನಸಭಾಧ್ಯಕ್ಷ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.