ಬೆಂಗಳೂರು: ಶಿವಾಜಿನಗರದ ಚಾಂದಿನಿ ಚೌಕ್ನಲ್ಲಿ ವಾಸಿಸುತ್ತಿದ್ದ 34 ವರ್ಷದ ವ್ಯಕ್ತಿಗೆ (ರೋಗಿ 653) ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಚಾಂದಿನಿ ಚೌಕ್ಅನ್ನು ಸೀಲ್ ಡೌನ್ ಮಾಡಲು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯನ್ನು ಆರೋಗ್ಯಾಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ಆದ್ರೆ ಇನ್ನೂ ಸೋಂಕಿನ ಮೂಲ ಪತ್ತೆಯಾಗಿಲ್ಲ.
ಈ ವ್ಯಕ್ತಿ ವಾಸಿಸುತ್ತಿದ್ದ ಚಾಂದಿನಿ ಚೌಕ್ನ ಅಪಾರ್ಟ್ಮೆಂಟ್ನಲ್ಲಿದ್ದ 75 ಜನರನ್ನು ನಿನ್ನೆ ರಾತ್ರಿಯಿಂದ ಕ್ವಾರಂಟೈನ್ ಮಾಡಲಾಗಿದೆ ಎಂದು ಬಿಬಿಎಂಪಿ ಶಿವಾಜಿನಗರದ ಆರೋಗ್ಯಾಧಿಕಾರಿ ಡಾ. ಶಿವೇಗೌಡ ಮಾಹಿತಿ ನೀಡಿದರು. ಅಲ್ಲದೆ ಈ ವ್ಯಕ್ತಿ ಶಿವಾಜಿನಗರದ ರಿಜೆಂಟಾ ಹೋಟೆಲ್ನಲ್ಲಿ ಔಟ್ ಸೋರ್ಸ್ ಆಗಿ ಕೆಲಸ ಮಾಡುತ್ತಿದ್ದು, ಲಾಂಡ್ರಿಯಲ್ಲಿ ದುಡಿಯುತ್ತಿದ್ದ. ಅದೇ ಹೋಟೆಲ್ನ ಹದಿನೆಂಟು ಜನರನ್ನು ಕೂಡಾ ಈಗ ಮತ್ತೆ ಕ್ವಾರಂಟೈನ್ ಮಾಡಲಾಗಿದೆ. ಶಿಫಾ ಆಸ್ಪತ್ರೆಯ ವೈದ್ಯರಿಗೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆ ಆ ಆಸ್ಪತ್ರೆಯ ನರ್ಸ್ (ರೋಗಿ-420) ಅನ್ನು ಕೂಡಾ ಇದೇ ರಿಜೆಂಟಾ ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಹೀಗಾಗಿ ಈ ವ್ಯಕ್ತಿಗೆ ಇದೇ ಮಹಿಳೆಯಿಂದ ಸೋಂಕು ಬಂದಿರಬಹುದೆಂಬ ಶಂಕೆ ಇದ್ದರೂ ಕೂಡಾ ಇನ್ನೂ ದೃಢಪಟ್ಟಿಲ್ಲ.
ರಿಜೆಂಟಾ ಹೋಟೆಲ್ನ ಕ್ವಾರಂಟೈನ್ ಅವಧಿ ಹದಿನಾಲ್ಕು ದಿನದ ಬಳಿಕ ಎಲ್ಲರ ಆರೋಗ್ಯ ಪರೀಕ್ಷೆ ಮಾಡಲಾಗಿದೆ. ಆ ವೇಳೆ ಆ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ 34 ವರ್ಷದ ವ್ಯಕ್ತಿಯನ್ನೂ ಆರೋಗ್ಯ ಟೆಸ್ಟ್ ಮಾಡಿದಾಗ, ಕೊರೊನಾ ಸೋಂಕು ದೃಢಪಟ್ಟಿದೆ. ಈಗ ಆತ ವಾಸಿಸುತ್ತಿದ್ದ ಚಾಂದಿನಿ ಚೌಕ್ ಜನರನ್ನು ಹಾಗೂ ಹೋಟೆಲ್ನ ಪ್ರೈಮರಿ ಕಾಂಟ್ಯಾಕ್ಟ್ಗಳನ್ನು ಕೂಡಾ ಕ್ವಾರಂಟೈನ್ ಮಾಡಲಾಗಿದೆ. ರೋಗಿಯ ಕೊರೊನಾ ಸೋಂಕಿನ ಹಿನ್ನಲೆ ಪತ್ತೆಹಚ್ಚಲಾಗುತ್ತಿದೆ.