ಬೆಂಗಳೂರು: ಕೊರೊನಾ ಲಸಿಕೆ ವಿತರಣೆಗೆ ಕೇಂದ್ರ ಆರೋಗ್ಯ ಇಲಾಖೆ ಗೈಡ್ಲೈನ್ಸ್ ಬಿಡುಗಡೆ ಮಾಡಿದ್ದು, ಕೋವಿಡ್ ವ್ಯಾಕ್ಸಿನ್ ಹೇಗೆ ಕೊಡಬೇಕು, ಹೇಗೆ ನಿರ್ವಹಣೆ ಮಾಡಬೇಕು, ಒಂದು ಸೆಷನ್ ನಲ್ಲಿ ಎಷ್ಟು ಜನರಿಗೆ ಕೊಡಬೇಕು ಎಂಬುದರ ಕುರಿತು ವಿವರಣೆ ನೀಡಿದೆ. ಅಲ್ಲದೇ ಎಲ್ಲ ರಾಜ್ಯಗಳು ವ್ಯಾಕ್ಸಿನ್ ಗೈಡ್ಲೈನ್ಸ್ನ್ನು ಪಾಲಿಸಬೇಕು ಎಂದು ತಿಳಿಸಿದೆ.
ವಿವಿಧ ಮಾರ್ಗಸೂಚಿಗಳನ್ನು ನೀಡಿರುವ ಕೇಂದ್ರ ಆರೋಗ್ಯ ಇಲಾಖೆ ವ್ಯಾಕ್ಸಿನ್ ಬಳಕೆ ಮತ್ತು ಬಳಸುವ ವ್ಯಕ್ತಿಗಳು ಯಾವ ರೀತಿಯಲ್ಲಿ ಅದನ್ನು ಉಪಯೋಗಿಸಬೇಕು ಎಂದು ತಿಳಿಸಿದೆ. ಅಲ್ಲದೆ ಲಸಿಕೆ ಪಡೆಯಲು ವಿವಿಧ ರೀತಿಯ ಗುರುತಿನ ಚೀಟಿಗಳನ್ನು ನಿಗದಿ ಪಡಿಸಿದ್ದು, ಅವುಗಳನ್ನು ತೋರಿಸಿದ ನಂತರವೇ ವ್ಯಾಕ್ಸಿನ್ ಪಡೆಯಬಹುದಾಗಿದೆ.
ಕೋವಿಡ್ ವ್ಯಾಕ್ಸಿನ್ ಗೈಡ್ ಲೈನ್ಸ್ ನಲ್ಲಿ ಏನಿದೆ..?
- ಒಂದು ಸೆಷನ್ ನಲ್ಲಿ 100 ರಿಂದ 200 ಜನರಿಗೆ ವ್ಯಾಕ್ಸಿನ್ ಕೊಡಬೇಕು.
- ವ್ಯಾಕ್ಸಿನ್ ಕೊಟ್ಟ ಬಳಿಕ 30 ನಿಮಿಷಗಳ ಕಾಲ ವ್ಯಕ್ತಿಯನ್ನು ನಿಗಾದಲ್ಲಿ ಇಡಬೇಕು, ಏನಾದರೂ ವ್ಯತಿರಿಕ್ತ ತೊಂದರೆ ಆಗುವ ಬಗ್ಗೆ ಎಚ್ಚರ ವಹಿಸಬೇಕು.
- ವ್ಯಾಕ್ಸಿನ್ ವಿತರಿಸುವ ತಂಡದಲ್ಲಿ 5 ಮಂದಿ ಇರಬೇಕು.
- ಗುಂಪು ನಿಯಂತ್ರಿಸಲು ವ್ಯಾಕ್ಸಿನ್ ಕೇಂದ್ರದಲ್ಲಿ ವೈಟಿಂಗ್ ಲಾಂಜ್ ಹಾಗೂ ನಿಗಾ ವಹಿಸುವ ಲಾಂಜ್ ಇರಬೇಕು.
- ಕೋವಿಡ್ ವ್ಯಾಕ್ಸಿನ್ ಇಂಟಲಿಜೆನ್ಸ್ ನೆಟ್ ವರ್ಕ್ - (Cowin) ಸಾಪ್ಟ್ವೇರ್ ನಲ್ಲಿ ವ್ಯಾಕ್ಸಿನ್ ಪಡೆದವರ ಮಾಹಿತಿ ಅಪ್ಡೇಟ್ ಮಾಡಬೇಕು.
- ವ್ಯಾಕ್ಸಿನ್ ಪಡೆಯಲು 12 ರೀತಿಯ ಗುರುತಿನ ಚೀಟಿ ಕಡ್ಡಾಯ ಮಾಡಲಾಗಿದೆ.
- ಆಧಾರ್, ವೋಟರ್ ಐಡಿ, ಪಾಸ್ ಪೋರ್ಟ್, ರೇಷನ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ನರೇಗಾ ಜಾಬ್ ಕಾರ್ಡ್, ಕಾರ್ಮಿಕ ಇಲಾಖೆಯ ಹೆಲ್ತ್ ಇನ್ಯೂರೆನ್ಸ್ ಕಾರ್ಡ್, ಬ್ಯಾಂಕ್/ಪೋಸ್ಟ್ ಆಫೀಸ್ ಪಾಸ್ ಬುಕ್, ಪಿಂಚಣಿ ದಾಖಲಾತಿ, ಸರ್ಕಾರಿ ಉದ್ಯೋಗಿ ಐಡಿ ಕಾರ್ಡ್ ಇರಬೇಕು.
- ಪ್ರಾಥಮಿಕ ಹಂತದಲ್ಲಿ ನೋಂದಣಿ ಮಾಡಿಕೊಂಡಿರುವವರಿಗೆ ವ್ಯಾಕ್ಸಿನ್ ನೀಡಬೇಕು.
- ಮೊದಲ ಹಂತದಲ್ಲಿ ಆನ್ ಸ್ಪಾಟ್ ವ್ಯಾಕ್ಸಿನ್ ನೀಡಲು ಅವಕಾಶ ಇಲ್ಲ.
- ಸೂರ್ಯನ ಶಾಖ ತಾಗದಂತೆ ವ್ಯಾಕ್ಸಿನ್ ಕ್ಯಾರಿಯರ್ ಗಳು, ಹಾಗೂ ವ್ಯಾಕ್ಸಿನ್ ವಯಲ್ ಗಳಿಗೆ ಐಸ್ ಬಳಸಬೇಕು ಎಂದು ತಿಳಿಸಿದೆ. ಕೊರೊನಾ ವ್ಯಾಕ್ಸಿನ್ ವಿತರಣೆಯನ್ನು ಚುನಾವಣಾ ಸಿದ್ಧತೆ ರೀತಿಯಲ್ಲಿ, ನಡೆಸಲು ತಿಳಿಸಿದೆ.