ETV Bharat / city

ಶ್ರೀ ಮುರುಘಾ ಶರಣರ ಜನ್ಮದಿನ ಇನ್ಮೇಲೆ ಸಮಾನತೆ ದಿನವಾಗಿ ಸರ್ಕಾರದಿಂದಲೇ ಆಚರಣೆ : ಸಿಎಂ ಘೋಷಣೆ - Celebration of Muruga Saranas birth as an Equality Day by the government

12ನೇ ಶತಮಾನದಲ್ಲಿ ಬಸವಣ್ಣ ಮಾಡಿದ್ದನ್ನ 21ನೇ ಶತಮಾನದಲ್ಲಿ ನಮ್ಮ ಮುರುಘಾ ಶರಣರು ಮಾಡುತ್ತಿದ್ದಾರೆ. ಸಾಕಷ್ಟು ಪ್ರತಿರೋಧದ ಮಧ್ಯೆ ಪರಿವರ್ತನೆ ಆಗುತ್ತಿದೆ. ಸರ್ವರಿಗೂ ಸಮಾನತೆ ಕೊಡುವ ತತ್ವವನ್ನ ಮಾಡುತ್ತಿದ್ದಾರೆ. ಆ ಸವಾಲನ್ನ ಅತ್ಯಂತ ಯಶಸ್ವಿಯಾಗಿ ಎದುರಿಸಿ ಕೆಲಸ ಮಾಡುತ್ತಿರುವ ಮುರುಘಾ ಶರಣರಿಗೆ ನನ್ನ ಭಕ್ತಿ ಪೂರ್ವ ಅಭಿನಂದನೆಗಳು ಎಂದು ಸಿಎಂ ಹೇಳಿದರು..

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Apr 11, 2022, 12:45 PM IST

ಬೆಂಗಳೂರು : ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರ ಜನ್ಮ ದಿನವನ್ನ ಸಮಾನತೆಯ ದಿನವನ್ನಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಇನ್ಮುಂದೆ ಮುರುಗಾ ಶರಣರ ಜನ್ಮದಿನವನ್ನು ಸಮಾನತೆ ದಿನವೆಂದು ಸರ್ಕಾರ ಆಚರಣೆ ಮಾಡಲಿದೆ ಎಂದು ಸಿಎಂ ತಿಳಿಸಿದರು.

ನಗರದ ಅರಮನೆ ಮೈದಾನದಲ್ಲಿ ಚಿತ್ರದುರ್ಗದ ಪರಿವರ್ತನ ಪರ ಧರ್ಮ ಸಂಸತ್ ಕಾರ್ಯಕ್ರಮ ನಡೆಯಿತು. ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ಜನ್ಮದಿನಾಚರಣೆ ಬದಲು ಅವರ ಸಮಾಜಮುಖಿ ಕಾರ್ಯಗಳ ಸಾಧನೆ ಅಂಗವಾಗಿ ಆಯೋಜಿಸಲಾಗಿದ್ದ ಸಮಾನತೆ ದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

Equality Day
ಸಮಾನತೆ ದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿ

ನಂತರ ಮಾತನಾಡಿದ ಸಿಎಂ, ವೈಚಾರಿಕತೆಯನ್ನ ಪುನಃ ಬಿತ್ತಲು ಕೈ ಹಾಕಿರುವ ಡಾ.ಶಿವಮೂರ್ತಿ ಮುರುಘಾ ಶರಣರು, ಸಮಾನತೆಯ ದಿನ ಅಂತಾ ಆಚರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಅತ್ಯಂತ ಖುಷಿಕೊಟ್ಟಿದೆ. ಬಸವಣ್ಣನ ವಿಚಾರಧಾರೆಗಳು ಇನ್ನು ಜೀವಂತವಾಗಿವೆ. 12ನೇ ಶತಮಾನದಲ್ಲಿ ಬಸವಣ್ಣನವರು ಕೊಟ್ಟ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ.

ಅಂದೇ ಅವರು ಅನಿಷ್ಠಗಳ ವಿರುದ್ಧ ಹೋರಾಟ ಮಾಡಿದ್ದರೂ ಇನ್ನೂ ಕೂಡ ಕೆಲವೆಡೆ ಅಂತಹ ಪದ್ಧತಿ ಪ್ರಚಲಿತವಾಗಿವೆ. ಇದರ ವಿರುದ್ಧ ನಿರಂತರ ಪರಿವರ್ತನ ಕೆಲಸಕ್ಕೆ ದಿಟ್ಟ ಹೆಜ್ಜೆ ಇಟ್ಟಿರುವುದು ನಮ್ಮ ಮುರುಘಾ ಶರಣರು. ಬಸವ ತತ್ವವನ್ನ ಬಿಡೋದಿಲ್ಲ ಅಂತಾ ಶರಣರು ಮಾಡುತ್ತಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿ ಕೊಡಲು, ಗುರುತು ಇಲ್ಲದೇ ಇರುವವರಿಗೆ ಗುರುತು ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಮಾನತೆ ದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿರುವುದು..

12ನೇ ಶತಮಾನದಲ್ಲಿ ಬಸವಣ್ಣ ಮಾಡಿದ್ದನ್ನ 21ನೇ ಶತಮಾನದಲ್ಲಿ ನಮ್ಮ ಮುರುಘಾ ಶರಣರು ಮಾಡುತ್ತಿದ್ದಾರೆ. ಸಾಕಷ್ಟು ಪ್ರತಿರೋಧದ ಮಧ್ಯೆ ಪರಿವರ್ತನೆ ಆಗುತ್ತಿದೆ. ಸರ್ವರಿಗೂ ಸಮಾನತೆ ಕೊಡುವ ತತ್ವವನ್ನ ಮಾಡುತ್ತಿದ್ದಾರೆ. ಆ ಸವಾಲನ್ನ ಅತ್ಯಂತ ಯಶಸ್ವಿಯಾಗಿ ಎದುರಿಸಿ ಕೆಲಸ ಮಾಡುತ್ತಿರುವ ಮುರುಘಾ ಶರಣರಿಗೆ ನನ್ನ ಭಕ್ತಿ ಪೂರ್ವ ಅಭಿನಂದನೆಗಳು ಎಂದರು.

ಕೇವಲ ವ್ಯಕ್ತಿಗಳಲ್ಲಿನ ಶಕ್ತಿಗಳಿಂದ ಸಮಾಜದ ಬದಲಾವಣೆ ಮಾಡಬೇಕು ಅನ್ನೋ ಧ್ಯೇಯ ಇಟ್ಟುಕೊಂಡ ಬುದ್ಧ, ಪೈಗಂಬರ್, ಮಹಾವೀರ್ ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳು ಸಮಾಜದಲ್ಲಿ ಬದಲಾವಣೆ ತಂದರು. ಏಕಚಿತ್ತದಿಂದ ಪರಿವರ್ತಕರಾಗಿ ಕ್ರಾಂತಿ ಮಾಡಿದರು. ಆದ್ದರಿಂದ ವ್ಯಕ್ತಿಗಳಲ್ಲಿರುವ ಶಕ್ತಿ ಇವತ್ತು ಮತ್ತೆ ಸಮಾಜ ಪರಿವರ್ತನೆಗೆ ನಿಲ್ಲಬೇಕಿದೆ. ದಾರ್ಶನಿಕ ವ್ಯಕ್ತಿಗಳೆಲ್ಲಾ ಸಮಾಜ ಪರಿವರ್ತನೆಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ್ದರು. ರಾಮಸೇತುವೆ ಕಟ್ಟಲು ಅಳಿಲು ರಾಮನಿಗೆ ಸಹಾಯ ಮಾಡಿದಂತೆ ನಾವೂ ಕೂಡ ಉತ್ತಮ ಸಮಾಜ ನಿರ್ಮಾಣಕ್ಕೆ ನಮ್ಮ ಚಿಕ್ಕ ಅಳಿಲು ಸೇವೆ ಕೊಡಬೇಕು ಎಂದು ಕರೆ ನೀಡಿದರು.

ಕನ್ನಡನಾಡಿನಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ, ಹಳೇ ಗನ್ನಡ, ಹೊಸ ಗನ್ನಡ, ಬಂಡಾಯ ಸಾಹಿತ್ಯವಿದ್ದು, ಇದು ನಮ್ಮ ಕನ್ನಡದ ಆಸ್ತಿ. ನಾವೂ ಪರಿವರ್ತನೆಗೆ ಚಿಂತನೆ ಮಾಡುವ ಕಾಲ ಬಂದಿದೆ. ಸರ್ಕಾರ, ಸಮಾಜ ಹೊಂದಾಣಿಕೆಯಿಂದ ಹೋಗಬೇಕು. ಪರಮಪೂಜ್ಯರ ನೇತೃತ್ವದಲ್ಲಿ ನಾವೆಲ್ಲರೂ ಸೇರಿ ಈ ಕೆಲಸ ಮಾಡೋಣ. ಮುರುಘಾ ಮಠಕ್ಕೆ ದಿವ್ಯ ಪರಂಪರೆಯಿದೆ.

ಒಂದು ಕಾಲದಲ್ಲಿ ಮೈಸೂರಿನ ಮಹಾರಾಜರಿಗೆ ಸಹಾಯ ಮಾಡಿದ ಮಠವಿದು. ಆ ಬೌದ್ಧಿಕ ಆಸ್ತಿ ಜೊತೆಗೆ ಈಗಿನ ಶರಣರು ಆಧ್ಯಾತ್ಮಿಕತೆ ಕಟ್ಟಿ ಕೊಟ್ಟಿದ್ದಾರೆ. ಶೈಕ್ಷಣಿಕ, ಆರೋಗ್ಯ ಕ್ರಾಂತಿಯನ್ನ ಈ ಮಠದಿಂದ ಮಾಡಲಾಗಿದೆ. ಮುರುಘಾ ಶರಣರ ಅನುಭವಗಳು ನಮ್ಮೆಲ್ಲರಿಗೂ ದಾರಿದೀಪ ಎಂದು ಸಿಎಂ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಇಂಧನ ಸಚಿವ ವಿ.ಸುನಿಲ್‌ಕುಮಾರ್, ಶಾಸಕ ರಾಜಶೇಖರ ಪಾಟೀಲ ತೇಲ್ಕೂರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ಚಿತ್ರದುರ್ಗದ ಮುರುಘಾ ಶರಣರು, ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಕುರಿತು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯಿಂದ ತನಿಖೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.