ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಡೀಲ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಸಿಸಿಬಿ ಅಧಿಕಾರಿಗಳು ಬರೋಬ್ಬರಿ 2,900 ಪುಟಗಳ ಚಾರ್ಜ್ ಶೀಟ್‌ನ್ನ ಸಲ್ಲಿಸಿದ್ದಾರೆ. ತನಿಖಾ ಅಧಿಕಾರಿಗಳು ಕೋರ್ಟ್‌ಗೆ ಎನ್‌ಡಿಪಿಎಸ್ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಡ್ರಗ್ಸ್ ಕೇಸ್‌ನಲ್ಲಿ ತನಿಖೆ ಮಾಡುತ್ತಿದ್ದ ತನಿಖಾಧಿಕಾರಿ ಪುನೀತ್ ಅವರಿಂದ ಕೇಸ್ನ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಒಟ್ಟು 25 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, 180 ಸಾಕ್ಷಿಗಳ ಹೇಳಿಕೆಗಳನ್ನ ಸಿಸಿಬಿ ಅಧಿಕಾರಿಗಳು ದಾಖಲಿಸಿದ್ದಾರೆ. ಕಾಟನ್ ಪೇಟೆ ಪೊಲೀಸರ ಮೂಲಕ ಆರೋಪ ಪಟ್ಟಿಯನ್ನ ಸಲ್ಲಿಸಲಾಗಿದೆ. ಈ ಕೇಸ್‌ನಲ್ಲಿ ಮೂವರು ಆರೋಪಿಗಳು ಮಾತ್ರ ಇನ್ನೂ ಸಿಕ್ಕಿಲ್ಲ. ಹೀಗಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ಹೆಸರುಗಳು ಕೂಡ ಚಾರ್ಜ್ ಶೀಟ್ನಲ್ಲಿ ಉಲ್ಲೇಖವಾಗಿವೆ.
ಇದನ್ನೂ ಓದಿ.. ಸಿಸಿಬಿಗೂ ಚಾರ್ಜ್ಶೀಟ್ ಸಲ್ಲಿಸುವ ಅಧಿಕಾರ ನೀಡಿದ ಸರ್ಕಾರ
ರಾಗಿಣಿ, ಸಂಜನಾ, ರಾಹುಲ್, ವಿರೇನ್ ಖನ್ನಾ, ಆದಿತ್ಯಾ ಆಳ್ವಾ, ವೈಭವ್ ಇವರ ಹೆಸರುಗಳು ಪ್ರಮುಖವಾಗಿ ಉಲ್ಲೇಖವಾಗಿಬೆ. ಆಫ್ರಿಕಾ ಮೂಲದ 4 ಮಂದಿ ಆರೋಪಿಗಳು, ಡ್ರಗ್ಸ್ ಸೇವನೆ ಜೊತೆಗೆ ಪೆಡ್ಲಿಂಗ್ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಪ್ರಾಥಮಿಕ ಚಾರ್ಜ್ ಶೀಟ್ ಸಲ್ಲಿಸಿ ಸಿಸಿಬಿ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.