ETV Bharat / city

ಡ್ರಗ್ಸ್ ಪಾರ್ಟಿಗಳಲ್ಲಿ ಭಾಗಿ ಶಂಕೆ: ಆರೋಪಿ ಸಂಬಂಧಿಕರ ಹೇಳಿಕೆ ದಾಖಲಿಸಿದ ಸಿಸಿಬಿ - ಮಾದಕ ವಸ್ತು ಖರೀದಿ ಹಾಗೂ ಮಾರಾಟ ದಂಧೆ ಪ್ರಕರಣ

ಸ್ಯಾಂಡಲ್​ವುಡ್​ ಡ್ರಗ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಆಪ್ತ ರವಿಶಂಕರ್ ಸಂಬಂಧಿಕರನ್ನು ಕರೆಯಿಸಿಕೊಂಡು ಸಿಸಿಬಿ ಹೇಳಿಕೆ ದಾಖಲಿಸಿಕೊಂಡಿದೆ.

ccb records the statements of relatives
ನಟಿ ರಾಗಿಣಿ ಆಪ್ತ ರccb records the statements of relativesಶಂಕರ್
author img

By

Published : Oct 15, 2020, 6:10 PM IST

ಬೆಂಗಳೂರು: ಮಾದಕ ವಸ್ತು ಖರೀದಿ ಹಾಗೂ ಮಾರಾಟ ದಂಧೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಆಪ್ತ ರವಿಶಂಕರ್ ಸಂಬಂಧಿಕರನ್ನು ಕರೆಯಿಸಿಕೊಂಡು ಸಿಸಿಬಿ ಹಿರಿಯ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ರವಿಶಂಕರ್ ಪತ್ನಿ ಅರ್ಚನಾ, ನಾದಿನಿಯರಾದ ಅಪೇಕ್ಷ ನಾಯಕ್, ಅಂಕಿತ ನಾಯಕ್​​ರಿಂದ‌ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಸಿಸಿಬಿ ಕಲೆ ಹಾಕಿದೆ. ಈಗಾಗಲೇ ಬಂಧಿತರಾಗಿರುವ ಪ್ರತೀಕ್ ಶೆಟ್ಟಿ, ರವಿಶಂಕರ್ ನಾದಿನಿ ಜೊತೆ ಸಂಪರ್ಕದಲ್ಲಿದ್ದು, ಪಾರ್ಟಿಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ‌.

ಈ‌ ಬಗ್ಗೆ ಹಲವು ಸಾಕ್ಷ್ಯಾಧಾರವನ್ನು ಸಿಸಿಬಿ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದರು. ಹೀಗಾಗಿ, ನಿನ್ನೆ ಕೂಡ ಅಧಿಕಾರಿಗಳು ರವಿಶಂಕರ್ ಸಂಬಂಧಿಕರನ್ನು ವಿಚಾರಣೆಗೊಳಪಡಿಸಿದ್ದರು. ಇಂದು ಸಹ ಕರೆಯಿಸಿಕೊಂಡು ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.