ETV Bharat / city

ಅಕ್ರಮ ಸ್ಪಾಗಳ ಮೇಲೆ ಸಿಸಿಬಿ ದಾಳಿ : ಇಬ್ಬರ ಬಂಧನ, 13 ಮಹಿಳೆಯರ ರಕ್ಷಣೆ, 9 ಮಂದಿಯ ವಿರುದ್ಧ FIR - ಬೆಂಗಳೂರಿನಲ್ಲಿ ಅಕ್ರಮ ಮಸಾಜ್​ ಸೆಂಟರ್​ಗಳು

ಬೆಂಗಳೂರಿನ ರಾಯಲ್ ಸ್ಪಾ ಅಂಡ್ ಸಲೂನ್, ಅಸ್ತೇಟಿಕ್ ಯೂನಿಸೆಕ್ಸ್ ಸೆಲೂನ್ ಅಂಡ್​​ ಸ್ಪಾ, ನಿಸರ್ಗ ಆಯುರ್ವೇದಿಕ್ ಕ್ಲಿನಿಕ್​ನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ನಿಖರ ಮಾಹಿತಿ ಮೇರೆಗೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ದಾಳಿ ನಡೆಸಿದ್ದಾರೆ..

ccb
ಸಿಸಿಬಿ
author img

By

Published : Feb 5, 2022, 7:43 PM IST

ಬೆಂಗಳೂರು : ಅಕ್ರಮ ಚಟುವಟಿಕೆ ನಡೆಸುತ್ತಿದ್ದ ನಗರದ ಮೂರು ಸ್ಪಾಗಳ (ಮಸಾಜ್​ ಪಾರ್ಲರ್​) ಮೇಲೆ ದಾಳಿ ನಡೆಸಿರುವ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ, ಉತ್ತರ ಭಾರತ ಮೂಲದ ದೇವೆಂದರ್, ಅಭಿಜಿತ್ ಎನ್ನುವವರನ್ನು ಬಂಧಿಸಿದ್ದಾರೆ. ವಿದೇಶಿಯರು ಸೇರಿ 13 ಮಂದಿ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

ಮಹಿಳೆಯರಿಗೆ ಕೆಲಸದ ಆಮಿಷ ತೋರಿಸಿ ಸ್ಪಾಗಳಲ್ಲಿ ಅವರನ್ನು ಅಕ್ರಮ ಚಟುವಟಿಕೆಗಳಿಗೆ ದೂಡಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಅಧರಿಸಿ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ಫೆಬ್ರವರಿ 3 ಹಾಗೂ 4ರಂದು ರಾಯಲ್ ಸ್ಪಾ ಅಂಡ್ ಸಲೂನ್, ಅಸ್ತೇಟಿಕ್ ಯೂನಿಸೆಕ್ಸ್ ಸಲೂನ್ ಅಂಡ್​​ ಸ್ಪಾ, ನಿಸರ್ಗ ಆಯುರ್ವೇದಿಕ್ ಕ್ಲಿನಿಕ್ ಮೇಲೆ ದಾಳಿ ನಡೆಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆ : ಇಬ್ಬರ ಬಂಧನ 15 ಲಕ್ಷ ರೂ. ವಶ

ಈ ದಾಳಿಯಲ್ಲಿ ಸ್ಪಾಗಳಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ, ಟರ್ಕಿ ದೇಶದ ಇಬ್ಬರು ಮಹಿಳೆಯರು, ನಾಗಾಲ್ಯಾಂಡ್‌ನ ಇಬ್ಬರು, ಅಸ್ಸಾಂನ ಮೂವರು ಮಹಿಳೆಯರು, ದೆಹಲಿಯ ಒಬ್ಬರು, ಪಶ್ಚಿಮ ಬಂಗಾಳದ ಮೂವರು ಹಾಗೂ ಸ್ಥಳೀಯ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯ ವಿರುದ್ಧ ಎಚ್‌ಎಸ್‌ಆರ್ ಲೇಔಟ್, ಅಶೋಕನಗರ ಹಾಗೂ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.