ETV Bharat / city

ಮನೆಗಳ್ಳತನಕ್ಕೆ ತಂದೆಯಿಂದಲೇ ತರಬೇತಿ: ಸಿಸಿಬಿ ಬಲೆಗೆ ಬಿದ್ದ ಅಪ್ಪ- ಮಗ - ಮನೆಗಳ್ಳತನಕ್ಕೆ ಮಗನಿಗೆ ತಂದೆಯೇ ತರಬೇತಿ

ಪೊಲೀಸರ ವ್ಯೂಹ ಅರಿತಿದ್ದ ವ್ಯಕ್ತಿಯೊಬ್ಬ ತನ್ನ ಮಗನಿಗೆ ಕಳ್ಳತನದ ತರಬೇತಿ ನೀಡಿ ಮನೆಗಳನ್ನು ದೋಚಿಸುತ್ತಿದ್ದ. ಈ ಬಗ್ಗೆ ಅರಿತ ಸಿಸಿಬಿ ಪೊಲೀಸರು ದಾಳಿ ಮಾಡಿ ತಂದೆ- ಮಕ್ಕಳಿಬ್ಬರನ್ನೂ ಜೈಲಿಗಟ್ಟಿದ್ದಾರೆ.

ಮನೆಗಳ್ಳತನಕ್ಕೆ ತಂದೆಯಿಂದಲೇ ತರಬೇತಿ: ಸಿಸಿಬಿ ಬಲೆಗೆ ಬಿದ್ದ ಅಪ್ಪ- ಮಗ

author img

By

Published : Jul 2, 2022, 10:05 AM IST

ಬೆಂಗಳೂರು: ಕಳ್ಳತನ ಮಾಡಬಾರದು ಎಂದು ಮಗನಿಗೆ ತಂದೆ, ತಾಯಿಯಾದವರು ಹೇಳಿಕೊಡ್ತಾರೆ. ಆದರೆ, ಇಲ್ಲಿ ಅದು ಅಪವಾದ. ಪುತ್ರನಿಗೆ ತಂದೆಯೇ ಕಳ್ಳತನದ ತರಬೇತಿ ನೀಡಿ, ಹಲವು ಮನೆಗಳನ್ನು ದೋಚುತ್ತಿದ್ದರು. ಇದೀಗ ತಂದೆ - ಮಗ ಪೊಲೀಸರ ಅತಿಥಿಗಳಾಗಿದ್ದಾರೆ.

ತಂದೆಯಿಂದಲೇ ತರಬೇತಿ ಪಡೆದು ಮನೆಗಳ್ಳತನದಲ್ಲಿ ಕುಖ್ಯಾತನಾಗಿದ್ದ ಇಮ್ರಾನ್ ಅಲಿಯಾಸ್ ಚೋರ್ ಇಮ್ರಾನ್, ಈತನ ಅಪ್ಪ ಏಜಾಜ್ ಖಾನ್ ಬಂಧಿತ ಆರೋಪಿಗಳು. ಈ ಹಿಂದೆ ಕೆಲ ಕಾಲ ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದ ಎಜಾಜ್ ಖಾನ್​ ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ತಿಳಿದುಕೊಂಡಿದ್ದ.

ಇದರಿಂದಾಗಿ ತನ್ನ ಮಗನಿಗೇ ಪೊಲೀಸರ ಕಾರ್ಯಾಚರಣೆಗಳ ಬಗ್ಗೆ ತಿಳಿಸಿದ್ದಲ್ಲದೇ, ಆತನಿಗೇ ಚಿಕ್ಕವಯಸ್ಸಿನಲ್ಲೇ ಕಳ್ಳತನ ಮಾಡುವುದರ ಬಗ್ಗೆ ತರಬೇತಿ ನೀಡಿದ್ದ. ಅಪ್ಪನಿಂದ ಟ್ರೈನಿಂಗ್ ಪಡೆದಿದ್ದ ಮಗ ಚೋರ್ ಇಮ್ರಾನ್ ಎಂಥದ್ದೇ ಭದ್ರತೆ ಇರುವ ಮನೆಗಳಿಗೂ ನುಗ್ಗಿ ಕಳ್ಳತನ ಮಾಡಿ ಎಸ್ಕೇಪ್ ಆಗುವುದನ್ನು ಕರಗತ ಮಾಡಿಕೊಂಡಿದ್ದ.

ಕಳ್ಳತನ ಮಾಡಿದ ಬಳಿಕ ಅನುಮಾನ ಬಾರದಿರಲಿ ಎಂದು ಐಷಾರಾಮಿ ಹೋಟೆಲ್​ಗಳಲ್ಲಿ ಉಳಿದುಕೊಳ್ಳುತ್ತಿದ್ದ. ಸದ್ಯ ಅಪ್ಪ ಏಜಾಜ್ ಖಾನ್,‌ ಮಗ ಚೋರ್ ಇಮ್ರಾನ್​ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು 15 ವಿವಿಧ ಕಳ್ಳತನ ಪ್ರಕರಣಗಳಿಂದ 1.3 ಕೆ.ಜಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಓದಿ: ಮೈಸೂರು: ಆನೆ ಮರಿ ಬೇಟೆಯಾಡಿದ ಹುಲಿ!..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.