ಬೆಂಗಳೂರು: ರಾಜ್ಯಗಳಲ್ಲಿ ಮತೀಯ ಗಲಭೆ ಸೃಷ್ಟಿ ಮಾಡಲು ಸಂಚು ರೂಪಿಸಿದ್ದ ಆರೋಪಿಗಳನ್ನ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಸಿಸಿಬಿ ಪೊಲೀಸರು ಇಂದು ಎನ್ಐಎ ಕೋರ್ಟ್ಗೆ ಹಾಜರು ಪಡಿಸಿದ್ದರು. ಆದರೆ ಹೆಚ್ಚಿನ ವಿಚಾರಣೆ ಇರುವ ಹಿನ್ನಲೆ ಮೂವರನ್ನ ವಶಕ್ಕೆ ನೀಡುವಂತೆ ಸಿಸಿಬಿ ಮನವಿ ಮಾಡಿತು.
ಮೂವರು ಆರೋಪಿಗಳಾದ ಮೆಹಬೂಬ್ ಪಾಷ, ಮೊಹಮದ್ ಮನ್ಸೂರ್, ಸಯ್ಯದ್ ಅಜ್ಮುತ್ತುಲ್ಲ ನನ್ನು ಸಿಸಿಬಿ ಪೊಲೀಸರು ಇಂದು ಎನ್ಐಎ ಕೋರ್ಟ್ಗೆ ಹಾಜರುಪಡಿಸಿದ್ದರು. ಆದರೆ ಹೆಚ್ಚಿನ ವಿಚಾರಣೆ ಇರುವ ಹಿನ್ನಲೆ ಮೂವರನ್ನ ವಶಕ್ಕೆ ನೀಡುವಂತೆ ಮನವಿ ಮಾಡಿದ್ರು. ಸಿಸಿಬಿ ಮನವಿ ಆಲಿಸಿದ ನ್ಯಾಯಾಲಯ ಆರೋಪಿಗಳನ್ನು ಸಿಸಿಬಿ ವಶಕ್ಕೆ ನೀಡಿದೆ.
ಈ ಆರೋಪಿಗಳು ಕರ್ನಾಟಕ, ತಮಿಳುನಾಡಿನಲ್ಲಿ ಮತೀಯ ಗಲಭೆ, ವಿಧ್ವಂಸಕ ಕೃತ್ಯವೆಸಗಲು ಫ್ಲಾನ್ ಮಾಡಿದ್ದರು. ಹೀಗಾಗಿ ಸಿಸಿಬಿ ಪೊಲೀಸರು ಆರೋಪಿಗಳ ಹೆಡೆ ಮುರಿ ಕಟ್ಟಿ, ಹೆಚ್ವಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಮೆಹಬೂಬ್ ಪಾಷ ಪ್ರಮುಖ ಆರೋಪಿಯಾಗಿದ್ದು, ಈತನಿಂದ ಹಲವಾರು ಮಾಹಿತಿಗಳನ್ನ ಸಿಸಿಬಿ ಪಡೆಯಬೇಕಿದೆ. ಸಿಸಿಬಿ ವಿಚಾರಣೆ ನಡೆಸಿದ ನಂತ್ರ, ಬಾಡಿ ವಾರೆಂಟ್ ಮೂಲಕ ತಮಿಳುನಾಡು ಪೊಲೀಸರು ಕೂಡ ಆರೋಪಿಗಳನ್ನ ವಶಕ್ಕೆ ಪಡೆಯಲಿದ್ದಾರೆ.