- 2017ರಲ್ಲಿ ಸದಾಶಿವನಗರದ ಮನೆ ಮೇಲೆ ದಾಳಿ ನಡೆದಿತ್ತು. ಆ ಬಳಿಕ ಗುಜರಾತ್ ಚುನಾವಣೆ ವೇಳೆಯೂ ದಾಳಿ ಆಗಿತ್ತು. ಈ ಸಂದರ್ಭದಲ್ಲಿ ಕೂಡ ನನ್ನ ಬಂಧನ ಆಗುತ್ತದೆ ಎಂಬ ನಿರೀಕ್ಷೆ ಇತ್ತು: ಡಿಕೆಶಿ
- ಆ ಬಳಿಕ ನನ್ನ ಮೇಲೆ ಕೇಸ್ ಆಯಿತು. ಅರ್ಥಿಕ ಅಪರಾಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಯಿತು. ಆಮೇಲೆ ಮತ್ತೆ ಜಾಮೀನಿ ತಗೊಂಡು ಹೊರ ಬಂದೆ: ಶಿವಕುಮಾರ್
- ಅದಾದ ನಂತರ ಜಾರಿ ನಿರ್ದೇಶನಾಲಯ ದಾಳಿ ಮಾಡಿ ನನ್ನನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿದರು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು ಡಿಕೆಗೆ ಈ ರೀತಿಯಾಗಬಾರದೆಂದು ಹೋರಾಟ ನಡೆಸಿದ್ದರು ಎಂದು ನೆನೆದರು.
- ಸಾವಿರ ಜನ ನನಗೋಸ್ಕರ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಮಿಷನರ್, ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಿದ್ದರು.
- ಡಿಕೆಶಿ ಬೆಂಬಲಿಗರು ಶಾಂತಿ ಪ್ರಿಯರು ಇದನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
- ಎಲ್ಲಾ ಧರ್ಮದ ಹಿರಿಯರು ಆಶೀರ್ವಾದ ಮಾಡಿದ್ದಾರೆ. ಕುಟುಂಬಕ್ಕೆ ಶಕ್ತಿ ನೀಡಿದ್ದಾರೆ. ಸೋನಿಯಾ ಗಾಂಧಿಯವರು ನನಗೆ ಶಕ್ತಿ ತುಂಬಿದ್ದಾರೆ. ಜೈಲಿಂದ ಬಂದ ಬಳಿಕ ನನಗೆ ಜವಾಬ್ದಾರಿ ಕೊಟ್ಟರು: ಕೆಪಿಸಿಸಿ ಅಧ್ಯಕ್ಷ
- ನಾನು ನೊಂದು- ಬೆಂದು ಬಂದಿದ್ದೇನೆ. ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಕೊಟ್ಟಿದ್ದಾರೆ. ಪಕ್ಷದ ಮುಖಂಡರು ಬೆಂಬಲಿಸಿ ಜವಾಬ್ದಾರಿ ಕೊಟ್ಟಿದ್ದಾರೆ. ಕೊರೊನಾ ಬಂದಿದೆ, ಜನರು ಸಂಕಷ್ಟದಲ್ಲಿದ್ದಾರೆ: ಡಿಕೆಶಿ
ಬೆಂಗಳೂರು: ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ನಮ್ಮ ಮನೆ ಮೇಲೆ ಕೇಂದ್ರ ಸರ್ಕಾರ ಹಿಂದೆ ನಿಂತು ಸಿಬಿಐಯಿಂದ ದಾಳಿ ನಡೆಸುತ್ತಿದೆ ಎಂದು ಸಂಸದ ಡಿಕೆ ಸುರೇಶ್ ಆರೋಪಿಸಿದರು.
ತಮ್ಮ ಮನೆ ಹಾಗೂ ಕಚೇರಿ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿಯ ಬಗ್ಗೆ ಡಿಕೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಜಂಟಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಈ ವೇಳೆ ಡಿಕೆ ಸುರೇಶ್ ಮಾತನಾಡಿ, ಕೇಂದ್ರ ತನಿಖಾ ಸಂಸ್ಥೆಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಯಾವುದೇ ದಾಳಿ ನಡೆಸಿದರೂ ಬಿಜೆಪಿಯ ಕುತಂತ್ರಕ್ಕೆ ನಾವು ಬಗ್ಗುವುದಿಲ್ಲ ಎಂದರು.
ನಮ್ಮನ್ನು ಬೆಂಬಲಿಸುತ್ತಿರುವ ಅಭಿಮಾನಿಗಳ ಬಳಗಕ್ಕೆ ಧನ್ಯವಾದ. ಕಾರ್ಯಕರ್ತರ ಅಭಿಯಾನಕ್ಕೆ ನಾನು ಚಿರಋಣಿ. ಕುಟುಂಬ ಹಾಗೂ ಪಕ್ಷ ಅಭಿಮಾನಿಗಳಿಗೆ ನಾವು ತಲೆ ಬಾಗುತ್ತೇವೆ ಎಂದರು.
ನಿಮ್ಮ ಅಭಿಮಾನವೇ ನನಗೆ ಶಕ್ತಿ. ನಾನು ಎಂದಿಗೂ ಕಳಂಕ ತರುವ ಕೆಲಸ ಮಾಡಿಲ್ಲ. ಚುನಾವಣೆ ಮುಗಿಯುವ ತನಕ ಇಂತಹ ದಾಳಿ ನಡೆಯುತ್ತಲೇ ಇರುತ್ತವೆ. ಈ ಹಿಂದೆ ಐಟಿ ಹಾಗೂ ಇಡಿ ದಾಳಿ ಮಾಡಿತ್ತು. ಈಗ ಸಿಬಿಐ ದಾಳಿ ಮಾಡಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ನಾನು ತಿಹಾರ್ ಜೈಲಿನಲ್ಲಿ ಇದ್ದಾಗ ಐಟಿ ಅಧಿಕಾರಿಗಳು ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ನಾನು ತಪ್ಪು ಮಾಡಿದರೆ ತಾನೇ ಹೆದರುವ ಪ್ರಶ್ನೆ. ನಾನು ಯಾವುದೇ ತಪ್ಪು ಮಾಡಿಲ್ಲ. 2016ರಲ್ಲಿ ಗುಜರಾತ್ ಚುನಾವಣೆ ವೇಳೆ ಐಟಿಯಿಂದ ದಾಳಿ ಮಾಡಿಸಿದ್ದರು. ಮತ್ತೆ ಇಡಿ ದಾಳಿಮಾಡಿ ತಿಹಾರ್ ಜೈಲಿಗೆ ಕಳುಹಿಸಿದ್ದರು. ಈಗ ಉಪಚುನಾವಣೆ ಬರುತ್ತಿದೆ. ಹೀಗಾಗಿ, ಈಗ ಸಿಬಿಐ ದಾಳಿ ನಡೆದಿದೆ ಎಂದರು.
30 ವರ್ಷ ರಾಜಕಾರಣದಲ್ಲಿ ಯಾರೂ ನನ್ನನ್ನು ಭ್ರಷ್ಟ ಎಂದು ಕರೆದಿಲ್ಲ. ಆದರೆ ಸರ್ಕಾರ ಈ ಸಂದರ್ಭದಲ್ಲಿ ಈ ರೀತಿ ಮಾಡುವುದು ತಪ್ಪು. ಮನೆಯಲ್ಲಿ 50 ಲಕ್ಷ ರೂ., ಚಿನ್ನಾಭರಣ ದೊರೆಕಿದೆ ಎನ್ನುತ್ತಿದ್ದಾರೆ. ಇದೆಲ್ಲಾ ಸುಳ್ಳು. ರಾಜಕೀಯವಾಗಿ ನನಗೆ ತೊಂದರೆ ಕೊಡುತ್ತಿದ್ದೀರಾ. ನಾನು ಇದನ್ನು ಎದುರಿಸಲು ಸಿದ್ಧವಾಗಿದ್ದೇನೆ ಎಂದು ಹೇಳಿದರು.