ETV Bharat / city

ಕರೆಂಟ್ ಶಾಕ್ ಆಯ್ತು ಇದೀಗ ಕಾವೇರಿ ನೀರಿನ ಸರದಿ.. ಸರ್ಕಾರ ಅಸ್ತು ಅಂದರೆ ಜನಸಾಮಾನ್ಯರು ಸುಸ್ತು.. - Bengaluru Water Board

ಬೆಂಗಳೂರಿನಲ್ಲಿ 2014ರಿಂದ ನೀರಿನ ದರ ಏರಿಕೆ ಮಾಡಿಲ್ಲ. 8 ವರ್ಷದಲ್ಲಿ 8 ಬಾರಿ ಕರೆಂಟ್ ದರ ಪರಿಷ್ಕರಣೆ ಆಗಿದೆ. ಪ್ರತಿ ತಿಂಗಳು 80-90 ಕೋಟಿ ಕರೆಂಟ್ ಬಿಲ್ ಅನ್ನು ಬೆಸ್ಕಾಂಗೆ ಜಲಮಂಡಳಿ ಪಾವತಿ ಮಾಡಬೇಕು. ನಿರ್ವಹಣೆ ಸವಾಲು ಆಗಿರೋದರಿಂದ ನೀರಿನ ದರ ಪರಿಷ್ಕರಣೆ ಅನಿವಾರ್ಯ ಅಂತಾ ಮಂಡಳಿ ಹೇಳಿಕೊಂಡಿದೆ..

Cauvery water bill likely to be rise in Bangalore
ಕಾವೇರಿ ನೀರಿನ ದರ ಏರಿಕೆ ಸಾಧ್ಯತೆ
author img

By

Published : May 15, 2022, 1:45 PM IST

ಬೆಂಗಳೂರು : ದಿನಬಳಕೆ ವಸ್ತುಗಳ ದರ ಏರಿಕೆ ಜನಸಾಮಾನ್ಯರಿಗೆ ಶಾಕ್​ ಕೊಟ್ಟಿದೆ. ಕರೆಂಟ್ ದರವೂ ಹೆಚ್ಚಾಗಿ ಜನರ ಮೇಲೆ ಹೊರೆಯಾಗಿದೆ. ಇದೀಗ ದುಬಾರಿ ದುನಿಯಾದಲ್ಲಿ ಮತ್ತೊಂದು ದರ ಏರಿಕೆ ಶಾಕ್​ಗೆ ರೆಡಿಯಾಗಬೇಕಿದೆ. ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಏರಿಕೆ ಆಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಕಾರಣ, ಬೆಂಗಳೂರು ಜಲಮಂಡಳಿಯು ನೀರಿನ ದರ ಪರಿಷ್ಕರಣೆಗೆ ಮತ್ತೆ ಪ್ರಸ್ತಾವನೆ ಸಲ್ಲಿಸಿದೆ. 8 ವರ್ಷದ ಬಳಿಕ ಕಾವೇರಿ ನೀರಿನ ದರ ಪರಿಷ್ಕರಣೆಗೆ ಸರ್ಕಾರ ಅಸ್ತು ಅನ್ನುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಗೃಹ ಬಳಕೆಯ ನೀರಿಗೆ ಶೇ.16ರಷ್ಟು ಹಾಗೂ ವಾಣಿಜ್ಯ ಬಳಕೆಗೆ ಶೇ.21ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಹೋಗಿದೆ. ಕರೆಂಟ್ ಬಿಲ್ ಹೆಚ್ಚಳ ಬೆನ್ನಲ್ಲೇ ನೀರಿನ ದರ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ. ಜಲಮಂಡಳಿ ನಿರ್ವಹಣೆ ವೆಚ್ಚ ಅಧಿಕವಾದ ಕಾರಣದಿಂದ ಆದ ನಷ್ಟವನ್ನು ಸರಿದೂಗಿಸಲು ನೀರಿನ ದರ ಪ್ರಸ್ತಾವನೆ ಮಾಡಲಾಗಿದೆ.

ಇದನ್ನೂ ಓದಿ: ಪರಿಷತ್ ಸ್ಥಾನಕ್ಕೆ ಕೋರ್ ಕಮಿಟಿಯಿಂದ ಹೆಸರು ಶಿಫಾರಸು : ಸಂತಸ ವ್ಯಕ್ತಪಡಿಸಿದ ವಿಜಯೇಂದ್ರ

ಬೆಂಗಳೂರಿನಲ್ಲಿ 2014ರಿಂದ ನೀರಿನ ದರ ಏರಿಕೆ ಮಾಡಿಲ್ಲ. 8 ವರ್ಷದಲ್ಲಿ 8 ಬಾರಿ ಕರೆಂಟ್ ದರ ಪರಿಷ್ಕರಣೆ ಆಗಿದೆ. ಪ್ರತಿ ತಿಂಗಳು 80-90 ಕೋಟಿ ಕರೆಂಟ್ ಬಿಲ್ ಅನ್ನು ಬೆಸ್ಕಾಂಗೆ ಜಲಮಂಡಳಿ ಪಾವತಿ ಮಾಡಬೇಕು. ನಿರ್ವಹಣೆ ಸವಾಲು ಆಗಿರೋದರಿಂದ ನೀರಿನ ದರ ಪರಿಷ್ಕರಣೆ ಅನಿವಾರ್ಯ ಅಂತಾ ಮಂಡಳಿ ಹೇಳಿಕೊಂಡಿದೆ.

ಹೀಗಾಗಿ, ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟರೆ ಬೆಂಗಳೂರಿನಲ್ಲಿ ಕಾವೇರಿ ನೀರಿನ ದರ ಪರಿಷ್ಕರಣೆ ಆಗೋದು ಗ್ಯಾರೆಂಟಿ. ಈಗಾಗಲೇ ನಾಲೈದು ಬಾರಿ ದರ ಪರಿಷ್ಕರಣೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು.‌ ಇದೀಗ 5ನೇ ಬಾರಿ ದರ ಪರಿಷ್ಕರಣೆ ಮಾಡುವಂತೆ ಪ್ರಸ್ತಾಪ ಸಲ್ಲಿಸಿದ್ದು, ಸರ್ಕಾರ ಅಸ್ತು ಎಂದರೆ ಜನರು ಮತ್ತೊಂದು ದರ ಏರಿಕೆ ಹೊರೆಯನ್ನು ಅನುಭವಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.