ETV Bharat / city

ಮೈಸೂರು ಡಿಸಿಯಾಗಿ ಬಿ.ಶರತ್ ಮರು ನೇಮಕಕ್ಕೆ ಸಿಎಟಿ ನಿರ್ದೇಶನ - IAS officer rohini sinduri news

ಮೈಸೂರು ಡಿಸಿಯಾಗಿ ಬಿ.ಶರತ್ ಮರು ನೇಮಕಕ್ಕೆ ಸಿಎಟಿ ನಿರ್ದೇಶನ

author img

By

Published : Dec 15, 2020, 7:35 PM IST

Updated : Dec 15, 2020, 8:50 PM IST

19:31 December 15

ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ವಿವಾದ

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ಈ ಮೊದಲು ಇದ್ದ ಐಎಎಸ್ ಅಧಿಕಾರಿ ಬಿ. ಶರತ್ ಅವರನ್ನು ಮರು ನಿಯೋಜಿಸುವಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣವು ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದೆ. ಶರತ್​ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಆ ಜಾಗಕ್ಕೆ ರೋಹಿಣಿ ಸಿಂದೂರಿ ಅವರನ್ನ ನೇಮಕ ಮಾಡಿತ್ತು. 

ತಮ್ಮನ್ನು ಅವಧಿಪೂರ್ವ ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮ ನಿಯಮಬಾಹಿರ ಎಂದು ಆರೋಪಿಸಿ ಐಎಎ ಅಧಿಕಾರಿ ಬಿ. ಶರತ್ ಸಲ್ಲಿಸಿದ್ದ ಅರ್ಜಿಯನ್ನು ಸಿಎಟಿ ವಿಚಾರಣೆ ನಡೆಸಿತು. ಈ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಅವರು, ಸರ್ಕಾರದ ವರ್ಗಾವಣೆ ಕ್ರಮವನ್ನು ಸಮರ್ಥಿಸಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧಿಕರಣ, ಅಧಿಕಾರಿಗಳ ವರ್ಗಾವಣೆಗೆ ಸಾಕಷ್ಟು ನೀತಿ-ನಿಯಮಗಳಿವೆ. ಆದರೆ, ಸರ್ಕಾರ ಯಾವುದೇ ಸೂಕ್ತ ಕಾರಣ ನೀಡದೆ ಅಧಿಕಾರಿಯನ್ನು ವರ್ಗಾವಣೆ ಮಾಡಿರುವ ಕ್ರಮ ಸರಿಯೆನ್ನಿಸುತ್ತಿಲ್ಲ. ಹೀಗಾಗಿ ಅಧಿಕಾರಿ ಬಿ. ಶರತ್ ಅವರನ್ನು ಮತ್ತೆ ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲು ತಿಳಿಸಿ. ವರ್ಗಾವಣೆ ಮಾಡಲು ಸಾಧ್ಯವಿದೆಯೇ ಎಂಬ ಕುರಿತು ಸರ್ಕಾರದ ನಿಲುವು ಪಡೆದು ತಿಳಿಸಿ ಎಂದು ಸೂಚಿಸಿತು.

ಅಲ್ಲದೇ, ಸರ್ಕಾರ ಬಿ. ಶರತ್ ಅವರನ್ನು ವರ್ಗಾವಣೆ ಮಾಡುವ ಕುರಿತು ತನ್ನ ನಿಲುವನ್ನು ಡಿ.22ರೊಳಗೆ ತಿಳಿಸಬೇಕು. ಇಲ್ಲದಿದ್ದರೆ ಈ ಸಂಬಂಧ ನ್ಯಾಯಾಧಿಕರಣವೇ ಡಿ.22ರಂದು ಸೂಕ್ತ ಆದೇಶ ಹೊರಡಿಸಲಿದೆ ಎಂಬ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ: ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡುವ ಉದ್ದೇಶದಿಂದಲೇ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಬಿ. ಶರತ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಆಗಸ್ಟ್ 29ರಂದು ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದ ಶರತ್ ಅವರನ್ನು ಸೆಪ್ಟೆಂಬರ್ 27ರಂದು ಒಂದು ತಿಂಗಳು ತುಂಬುವ ಮುನ್ನವೇ ವರ್ಗಾವಣೆ ಮಾಡಿ ಆದೇಶಿಸಿತ್ತು. ಸರ್ಕಾರದ ಈ ಕ್ರಮಕ್ಕೆ ಆಕ್ಷೇಪಿಸಿ ಸ್ಥಳೀಯ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬಳಿಕ ಆಕ್ಟೋಬರ್ ಮೊದಲ ವಾರದಲ್ಲಿ ಬಿ. ಶರತ್ ಸಿಎಟಿ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಮೈಸೂರ್​ ಈಸ್​ ದಿ ಲವ್ಲಿ ಸಿಟಿ.. ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಣ್ಣನೆ

Last Updated : Dec 15, 2020, 8:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.