ETV Bharat / city

ಸಿದ್ದರಾಮಯ್ಯ ಅವರೇನು ಸ್ವಾತಂತ್ರ ಹೋರಾಟಗಾರರಾ?: ಸಿ.ಟಿ.ರವಿ ಪ್ರಶ್ನೆ - ಬೆಂಗಳೂರು

ಕ್ರಾಂತಿಕಾರಿಗಳೂ ಸ್ವಾತಂತ್ರ್ಯ ಹೋರಾಟಗಾರರೇ, ಬ್ರಿಟೀಷರು ಹೆದರುತ್ತಿದ್ದದ್ದು ಅವರಿಗೆ. ದೇಶದ ನೈಜ ಇತಿಹಾಸವನ್ನು ಮುಚ್ಚಿಡಲು 1993ರಲ್ಲಿ ಕಾನೂನು ತಂದರು. ಇದರಿಂದ ಭಾರತೀಯರ ಮೆಲಾದ ದೌರ್ಜನ್ಯ ತಿಳಿಯದಂತಾಯಿತು ಎಂದು ಸಿ.ಟಿ.ರವಿ ಹೇಳಿದರು.

c t ravi
ಸಿ.ಟಿ.ರವಿ ಪ್ರಶ್ನೆ
author img

By

Published : May 21, 2022, 10:02 PM IST

Updated : May 21, 2022, 10:31 PM IST

ಬೆಂಗಳೂರು: ಹೆಡ್ಗೆವಾರ್ ಸ್ವಾತಂತ್ರ್ಯ ಹೋರಾಟ ಮಾಡಿದ್ರಾ ಎಂದು ಸಿದ್ದರಾಮಯ್ಯ ಕೇಳ್ತಾರೆ. ಹಾಗಾದರೆ ಸಿದ್ದರಾಮಯ್ಯ ಸ್ವಾತಂತ್ರ್ಯ ಹೋರಾಟ ಮಾಡಿದ್ರಾ. ಲಕ್ಷಾಂತರ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರು. ಕ್ರಾಂತಿಕಾರಿಗಳು ಸ್ವಾತಂತ್ರ್ಯ ಹೋರಾಟಗಾರರು. ಕಾಂಗ್ರೆಸ್ ಕಾರಣಕ್ಕೆ ದೇಶ ವಿಭಜನೆಯಾಯಿತು. ಸ್ವಾತಂತ್ರ್ಯ ಹೋರಾಟಗಾರರು ಅಂತ ಸ್ವತಂತ್ರ ಭಾರತವನ್ನು ಲೂಟಿ ಮಾಡಲು ಲೈಸೆನ್ಸ್ ಅಂತ ಅನ್ಕೊಂಡಿದ್ದಾರಾ?. ವಂಶಪಾರಂಪರ್ಯವಾಗಿ ಆಡಳಿತ ನಡೆಸೋದಕ್ಕೆ ಲೈಸೆನ್ಸ್ ಅಂತ ಭಾವಿಸಿದ್ದಾರೆ‌ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಬೆಂಗಳೂರಿನ‌ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಪಠ್ಯದಲ್ಲಿ ಹೆಡ್ಗೆವಾರ್ ಸೇರಿಸುವ ವಿಚಾರಕ್ಕೆ ಕಾಂಗ್ರೆಸ್ ವಿರೋಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ, ಖರ್ಗೆ ಕೂಪ ಮಂಡೂಕಗಳು ಅಲ್ಲ. ವಿಷಯ ತಿಳಿಯದೇ ಮಾತಾಡೋದು ಯಾಕೆ?. ಹೆಡ್ಗೆವಾರ್ ಬಗ್ಗೆ ಯಾಕೆ ಅಧ್ಯಯನ ಮಾಡಬಾರದು?. ಲೆನಿನ್ ಬಗ್ಗೆಯೆ ಓದಿದ್ದೇವೆ. ನಮ್ಮ ದೇಶದವರಲ್ಲದರ ಬಗ್ಗೆ ಓದಿದ್ದೇವೆ.

ಹೆಡ್ಗೆವಾರ್ ಬಗ್ಗೆ ಯಾಕೆ ಓದಬಾರದು?. ದೇಶದ ವಿರುದ್ಧ ದಂಗೆ ಬಂದವರದೆಲ್ಲಾ ಪಠ್ಯದಲ್ಲಿ ಓದಿದ್ದೇವೆ. ಹೆಡ್ಗೆವಾರ್ ಒಪ್ಪೋದು ಬಿಡೋದು ಅವರಿಗೆ ಬಿಟ್ಟದ್ದು. ಆದರೆ ಅಧ್ಯಯನ ಮಾಡಬಾರದು ಎಂದು ಯಾಕೆ ಹೇಳ್ತಾರೆ. ಈ ರೀತಿ ಹೇಳೋದು ಕೂಪ ಮಂಡುಕಗಳು ಮಾತ್ರ ಎಂದು ಟೀಕಿಸಿದರು.

ನಮ್ಮದು ತಿದ್ದುಪಡಿಯಾಗದಂತಾ ಸಂವಿಧಾನವಲ್ಲ: ಜ್ಞಾನವಾಪಿ ವಿಚಾರವಾಗಿ ಮಾತನಾಡಿದ ಅವರು, ನಮ್ಮದು ತಿದ್ದುಪಡಿ ಆಗದಂತ ಸಂವಿಧಾನ ಅಲ್ಲ. 1993ರಲ್ಲಿ ತಂದ ಕಾನೂನು ಅದು. ಬಹಳಷ್ಟು ವಿಚಾರ ಹೊರಗೆ ಬರಬಾರದು ಅಂತ ಅದನ್ನು ತಂದ್ರು. ಮುಸ್ಲಿಮರು ಮಾಡಿದ ಆಕ್ರಮಣ, ದೌರ್ಜನ್ಯ ಮುಚ್ಚಿಡಲು ಮಾಡಿದ್ರು.

ಹೇಳಬೇಕಿತ್ತು ಕುತುಬ್ ಐಬುದ್ದೀನ್, ನಳಂದ, ತಕ್ಷ ಶಿಲ ಯಾಕೆ ಸುಟ್ರು ಅನ್ನೋದನ್ನೂ ಹೇಳಬೇಕಿತ್ತು. ಸತ್ಯವನ್ನು ಹೇಳೋದನ್ನ ಮುಚ್ಚಿಡಲು ಈ ಆಕ್ಟ್ ತಂದಿದ್ದಾರೆ. ಆದರೆ, ನಾವು ಸತ್ಯವನ್ನ ಮುಚ್ಚಿಡಲು ಬಿಡೋದಿಲ್ಲ. ಎಲ್ಲವನ್ನೂ ಹೊರಗೆ ತರ್ತೀವಿ. ಅಹಿಂಸೆ ಹೋರಾಟ ಮಾಡ್ತಿದ್ದವರಿಗೆ ಬರೆಯಲು ಅವಕಾಶ ಇತ್ತು. ಆದರೆ, ಬ್ರಿಟಿಷರಿಗೆ ಸಿಂಹ ಸ್ವಪ್ನ ಆಗಿದ್ದು ಕ್ರಾಂತಿಕಾರಿಗಳು ಅನ್ನೋದನ್ನು ಮುಚ್ಚಿಟ್ಟರು ಎಂದರು.

ನಾಯಕತ್ವ ಬದಲಾವಣೆ ಸುಳ್ಳು ಸುದ್ದಿ: ನಾಯಕತ್ವ ಬದಲಾವಣೆ ವಿಚಾರ ಸುಳ್ಳು ಸುದ್ದಿ. ಕಾಫಿ ಪ್ಲಾಂಟರ್ ತರ, ಸುದ್ದಿ ಪ್ಲಾಂಟರ್‌ಗಳು ಹಬ್ಬಿಸಿರಬಹುದು ಎಂದು ನಾಯಕತ್ವ ಬದಲಾವಣೆಯನ್ನು ತಳ್ಳಿಹಾಕಿದರು. ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಇನ್ನೆರಡು ದಿನದಲ್ಲಿ ಬಿಡುಗಡೆಯಾಗೋ ಸಾಧ್ಯತೆ ಇದೆ. ಕೇಂದ್ರದ ನಾಯಕರು ರಾಜಸ್ಥಾನದಲ್ಲಿದ್ದರು ಹೀಗಾಗಿ ತಡವಾಗಿದೆ. ನಾಮಪತ್ರ ಸಲ್ಲಿಸಬೇಕಿರುವುದರಿಂದ ನಾಳೆಯೇ ಬಿಡುಗಡೆ ಆಗಬಹುದು ಎಂದರು.

ಇದನ್ನೂ ಓದಿ: ಪೆಟ್ರೋಲ್​, ಡೀಸೆಲ್​ ಕೊಡುಗೆ ಜೊತೆಗೆ ಗ್ಯಾಸ್​ ಸಿಲಿಂಡರ್​ಗಳಿಗೆ ₹200 ಸಬ್ಸಿಡಿ ಘೋಷಣೆ

Last Updated : May 21, 2022, 10:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.