ಬೆಂಗಳೂರು: ಆಟೋ ಅಪಘಾತ ವಿಚಾರಕ್ಕಾಗಿ ಶಿವಾಜಿನಗರದ ನಡುರಸ್ತೆಯಲ್ಲಿ ಯುವಕರಿಬ್ಬರ ನಡುವೆ ಮಾರಾಮಾರಿ ನಡೆದಿದೆ.
ಆಟೋ ಚಾಲಕ ಬೈಕ್ಗೆ ಹಿಂಬದಿಯಿಂದ ಗುದ್ದಿದ ಎಂದು ಇಬ್ಬರು ಯುವಕರು ಪರಸ್ಪರ ಮಾತಿಗೆ ಇಳಿದಿದ್ದಾರೆ. ಮಾತಿನ ಚಕಮಕಿ ಹೆಚ್ಚಾಗುತ್ತಿದ್ದಂತೆ ನಡುರಸ್ತೆ ಎಂದು ನೋಡದೆ ಕಿತ್ತಾಡಿಕೊಂಡಿದ್ದಾರೆ.
ಗಲಾಟೆ ಹೆಚ್ಚಾಗುತ್ತಿದ್ದಂತೆ ಯುವಕ ಬೈಕ್ ಕೀ ಯಿಂದ ಆಟೊ ಚಾಲಕನಿಗೆ ಚುಚ್ಚಿದ್ದಾನೆ. ವಿಪರೀತಕ್ಕೆ ಹೋಗುತ್ತಿದ್ದ ಜಗಳವನ್ನು ಸ್ಥಳೀಯರು ಬಿಡಿಸಿ ಕಳುಹಿಸಿದ್ದಾರೆ.