ETV Bharat / city

ಬೆಂಗಳೂರಲ್ಲಿ ಡ್ರಗ್ಸ್ ಪಾರ್ಟಿ ಮೇಲೆ ದಾಳಿ: ಬಾಲಿವುಡ್‌ ಖ್ಯಾತ ನಟಿಯ ಸಹೋದರ ಡ್ರಗ್ಸ್ ಸೇವನೆ ದೃಢ! - ಬೆಂಗಳೂರಲ್ಲಿ ಬಾಲಿವುಡ್ ನಟ ಶಕ್ತಿ ಕಪೂರ್ ಪುತ್ರ ಪೊಲೀಸ್ ವಶಕ್ಕೆ

ಡ್ರಗ್ಸ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಆರೋಪದ ಮೇಲೆ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಪುತ್ರ ಸಿದ್ಧಾಂತ ಕಪೂರ್ ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.

ಬಾಲಿವುಡ್‌ ಹಿರಿಯ ನಟನ ಪುತ್ರ
ಬಾಲಿವುಡ್‌ ಹಿರಿಯ ನಟನ ಪುತ್ರ
author img

By

Published : Jun 13, 2022, 9:53 AM IST

Updated : Jun 13, 2022, 1:04 PM IST

ಬೆಂಗಳೂರು: ನಗರದ ಪಂಚತಾರಾ ಹೋಟೆಲ್​​ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ಹಲಸೂರು ಠಾಣಾ ಪೊಲೀಸರು ತಡರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಪುತ್ರ ಹಾಗೂ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಸೇರಿ 35 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಲಸೂರು ಠಾಣಾ ವ್ಯಾಪ್ತಿಯ ಜಿ.ಟಿ ಮಾಲ್ ಮುಂಭಾಗದಲ್ಲಿರುವ ದಿ ಪಾರ್ಕ್ ಹೋಟೆಲ್‌ನಲ್ಲಿ ಡ್ರಗ್ಸ್ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಮಾಹಿತಿ ಮೇರೆಗೆ ರಾತ್ರಿ 12 ಗಂಟೆಯ ಸುಮಾರಿಗೆ 25 ಕ್ಕೂ ಹೆಚ್ಚು ಪೊಲೀಸರ ತಂಡ ದಾಳಿ ಮಾಡಿದೆ. ಈ ವೇಳೆ ಪಾರ್ಟಿಯಲ್ಲಿ ತೊಡಗಿದ್ದ ಬಾಲಿವುಡ್‌ನ ಹಿರಿಯ ನಟ ಶಕ್ತಿ ಕಪೂರ್ ಪುತ್ರ ಹಾಗೂ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್ ಸೇರಿದಂತೆ 100ಕ್ಕೂ ಹೆಚ್ಚು ಜನ ಸಿಕ್ಕಿಬಿದ್ದಿದ್ದಾರೆ. ಆ ಬಳಿಕ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಸಿದ್ಧಾಂತ್ ಕಪೂರ್ ಸೇರಿ ಐವರು ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದೆ.

(ಇದನ್ನೂ ನೋಡಿ: ಆಕ್ಷೇಪಾರ್ಹ ಪೋಸ್ಟ್​​ ಹಂಚಿಕೊಂಡ ಮೂವರ ವಿರುದ್ಧ ದೂರು ದಾಖಲು: ಮುಖ- ಮೂತಿ ನೋಡದೇ ಕ್ರಮ ಎಂದ ಪೊಲೀಸ್​ )

ನಟ ಸಿದ್ದಾಂತ್ ಕಪೂರ್, ಅಕಿಲ್ ಸೋನಿ, ಹರ್ಜೋತ್ ಸಿಂಗ್, ಅಕಿಲ್ ಹಾಗೂ ಹನಿ ಎಂಬುವರು ಡ್ರಗ್ಸ್ ಸೇವನೆ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನುಳಿದವರು ವೈದ್ಯಕೀಯ ಪರೀಕ್ಷೆ ಬಳಿಕ ಡ್ರಗ್ಸ್ ಸೇವನೆ ಬಗ್ಗೆ ಗೊತ್ತಾಗಲಿದೆ.

ಡಿಸಿಪಿ ಪ್ರತಿಕ್ರಿಯೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್, ನಿನ್ನೆ ರಾತ್ರಿ ಹೋಟೆಲ್​ನಲ್ಲಿ ನಡೆಯುತಿದ್ದ ಪಾರ್ಟಿ ಮೇಲೆ ರೇಡ್ ಮಾಡಲಾಗಿತ್ತು. 100 ಕ್ಕೂ ಹೆಚ್ಚು ಜನ ಪಾರ್ಟಿಯಲ್ಲಿದ್ದರು. ಅದರಲ್ಲಿ ಭಾಗಿಯಾಗಿದ್ದ ಕೆಲವರನ್ನ ಡ್ರಗ್ಸ್ ಟೆಸ್ಟ್​ಗೆ ಒಳಪಡಿಸಲಾಗಿತ್ತು.
ಐವರಿಗೆ ಪಾಸಿಟಿವ್ ಬಂದಿತ್ತು.‌ ಈ ಪೈಕಿ ಮೂವರು ರಾಜ್ಯದಲ್ಲಿ ವಾಸವಾಗಿದ್ದಾರೆ. ಪಾರ್ಟಿ ಓಪನ್ ಫಾರ್ ಪಬ್ಲಿಕ್ ಆಗಿದೆ‌. ಡಸ್ಟ್ ಬಿನ್ ಬಳಿ 7 ಎಂಡಿಎಂಎ, ಗಾಂಜಾ ಸಿಕ್ಕಿದೆ. ನಟ ಸಿದ್ಧಾಂತ್ ಕಪೂರ್ ಡ್ರಗ್ಸ್ ತೆಗೆದುಕೊಂಡಿದ್ದರು. ಅಲ್ಲದೇ ಪಾರ್ಟಿ ಡಿಜೆಗೂ ಪಾಸಿಟಿವ್ ಕಂಡುಬಂದಿದೆ. ಪಾರ್ಟಿಯಲ್ಲಿ ಉತ್ತರ ಭಾರತದವರು ಜಾಸ್ತಿಯಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಡ್ರಗ್ಸ್ ಪಾರ್ಟಿ ಮೇಲೆ ಪೊಲೀಸ್ ದಾಳಿ

Last Updated : Jun 13, 2022, 1:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.