ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಬಿ ಎನ್ ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನಕ್ಕಾಗಿ ಇಂದು ಚುನಾವಣೆ ನಡೆಸಲಾಗಿತ್ತು. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ 8 ಮತಗಟ್ಟೆಗಳನ್ನ ಸ್ಥಾಪನೆ ಮಾಡಲಾಗಿತ್ತು.
4 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಜಿಲ್ಲೆಯಲ್ಲಿ ಒಟ್ಟು 7416 ಮತದಾರರಿದ್ದು ಶೇ.58.49ರಷ್ಟು ಮತದಾನವಾಗಿದೆ. ಇಂದು ಸಂಜೆಯೇ ಮತಗಳ ಎಣಿಕೆ ಕಾರ್ಯ ನಡೆಯಿತು.
![ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಸಾಪ ಅಧ್ಯಕ್ಷರಾಗಿ ಬಿ.ಎನ್. ಕೃಷ್ಣಪ್ಪ ಆಯ್ಕೆ](https://etvbharatimages.akamaized.net/etvbharat/prod-images/kn-bng-03-kasappa-av-ka10057_21112021204508_2111f_1637507708_769.jpg)
ಈ ವೇಳೆ ನಿವೃತ್ತ ಪ್ರಾಂಶುಪಾಲರಾದ ಬಿ.ಎನ್.ಕೃಷ್ಣಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೂತನ ಜಿಲ್ಲಾ ಕಸಾಪ ಅಧ್ಯಕ್ಷರಾದ ಬಿ.ಎನ್.ಕೃಷ್ಣಪ್ಪ 1498 ಮತಗಳನ್ನ ಪಡೆದು ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿಗಳಾದ ಕೆ.ಮಹಾಲಿಂಗಯ್ಯ 1246 ಮತಗಳು, ಚಿ.ಮಾ.ಸುಧಾಕರ್ 1039, ಲಕ್ಷ್ಮಿ ಶ್ರೀನಿವಾಸ್ 496 ಮತಗಳನ್ನ ಪಡೆದಿದ್ದಾರೆ.