ETV Bharat / city

ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸು: ಖರೀದಿಸಿದ್ದು 90 ಬಸ್ಸು, ಓಡ್ತಿರೋದು ಮಾತ್ರ 26 - ಎರಡೇ ಚಾರ್ಜಿಂಗ್​ ಪಾಯಿಂಟ್

ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮತ್ತು ಪರಿಸರ ಮಾಲಿನ್ಯದ ಕಾರಣ ಎಲೆಕ್ಟ್ರಿಕ್​ ಬಸ್​ಗೆ ಬಿಎಂಟಿಸಿ ಮಣೆ ಹಾಕಿದರೂ ಅದರ ಸದ್ಬಳಕೆ ಮಾಡುತ್ತಿಲ್ಲ. ಮೊದಲನೇ ಹಂತದಲ್ಲಿ ಬಂದ 90 ಬಸ್​ಗಳಲ್ಲಿ ಕೇವಲ 26 ಮಾತ್ರ ಬಳಕೆಯಲ್ಲಿದೆ. ಎರಡನೇ ಹಂತದಲ್ಲಿ 300 ಬಸ್​ಗಳು ಬರಲಿದ್ದು ಅವುಗಳನ್ನು ಬಿಎಂಟಿಸಿ ಎಲ್ಲಿ ಬಳಸುತ್ತದೇ ಎಂಬದೇ ಯಕ್ಷಪ್ರಶ್ನೆಯಾಗಿದೆ..

BMTC that does not use electric buses properly
ಎಲೆಕ್ಟ್ರಿಕ್ ಬಸ್
author img

By

Published : May 10, 2022, 8:32 PM IST

ಬೆಂಗಳೂರು: ಬಿಎಂಟಿಸಿಯ ಮಹತ್ವಾಕಾಂಕ್ಷಿ ಎಲೆಕ್ಟ್ರಿಕ್ ಬಸ್ ಯೋಜನೆ ಮುಳುಗುವ ಹಡಗಿನಂತೆ ಆಗಿದೆ. ಸಂಸ್ಥೆಯು‌ ಗುತ್ತಿಗೆ ಪಡೆದ ಖಾಸಗಿ ಕಂಪನಿಗೆ ದಿನಕ್ಕೆ 180 ಕಿಲೋಮೀಟರ್​ನಂತೆ ಗುತ್ತಿಗೆ ನೀಡಿದೆ. ಆದರೆ ಮೊದಲ ಹಂತದಲ್ಲಿ ಖರೀದಿಸಿದ 90 ಬಸ್ ಪೈಕಿ ನಿತ್ಯ ರಸ್ತೆಗಿಳಿಸುತ್ತಿರುವುದು 26 ಮಾತ್ರ. ಇದರಿಂದ ನಿಗಮಕ್ಕೆ ಲಕ್ಷ ಲಕ್ಷ ನುಕ್ಸಾನು ಆಗುತ್ತಿದೆ.

ತೈಲ ದರ ಏರಿಕೆ ಹಿನ್ನೆಲೆ ಡೀಸೆಲ್ ಬಸ್ ಬದಲಿ ಎಲೆಕ್ಟ್ರಿಕ್‌ ಬಸ್ ಬಳಕೆ ಮಾಡಲು ಲಾಂಗ್ ರೂಟ್​ನ ಸಮಸ್ಯೆ ಎದುರಾಗಿದೆ. ಒಮ್ಮೆ ಚಾರ್ಜ್​ ಮಾಡಿದರೆ ಕಂಪನಿಯವರು ಹೇಳಿದಷ್ಟು ಮೈಲೇಜ್​ ನೀಡದಿರುವುದು ಸಹ ಈ ಬಸ್​ಗಳ ಬಳಕೆಗೆ ಇರುವ ಮಿತಿಯಾಗಿದೆ. ಕೇವಲ ಕೆಂಗೇರಿ ಹಾಗೂ ಯಶವಂತಪುರದಲ್ಲಿ ಮಾತ್ರ ಚಾರ್ಜಿಂಗ್​ ಪಾಯಿಂಟ್​ ಇರುವುದರಿಂದ ಈ ಮಾರ್ಗ ಬಿಟ್ಟು ಬೇರೆಡೆ ಬಳಸಲು ಸಾಧ್ಯವಾಗುತ್ತಿಲ್ಲ.

ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸು

ಎರಡೇ ಚಾರ್ಜಿಂಗ್​ ಪಾಯಿಂಟ್​: ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್ ಅವರು, ಮೊದಲ ಹಂತದಲ್ಲಿ 90 ಬಸ್ಸುಗಳ ಪೈಕಿ 87ನ್ನು ಕಂಪನಿ ನೀಡಿದೆ. ಮಾರ್ಗದಲ್ಲಿ 26 ಬಸ್​ಗಳು ಓಡಾಡುತ್ತಿವೆ. 57 ಬಸ್ಸುಗಳನ್ನು ಖೇಲೋ ಇಂಡಿಯಾ ನಡೆಯುತ್ತಿದ್ದಾಗ ಬಳಸಲಾಗಿತ್ತು ಎನ್ನುತ್ತಾರೆ.

ಎಲೆಕ್ಟ್ರಿಕ್ ಬಸ್ಸಿಗೆ ಬೇಕಾದ ಚಾರ್ಜಿಂಗ್ ಪಾಯಿಂಟ್ ಕೆಂಗೇರಿ ಹಾಗೂ ಯಶವಂತಪುರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಚಾರ್ಜಿಂಗ್​ ಪಾಯಿಂಟ್​ಗೆ ಬಿಎಂಟಿಸಿ ಜಾಗ ಕೊಡುತ್ತದೆ. ಗುತ್ತಿಗೆ ಪಡೆದ ಕಂಪನಿಗಳು ಬಾಕಿ ವ್ಯವಸ್ಥೆ ಮಾಡಬೇಕಾಗಿರುತ್ತದೆ. ಚಾರ್ಜಿಂಗ್​ ಪಾಯಿಂಟ್​ ಕೊರತೆ ಇರುವುದರಿಂದ ಎಲ್ಲಾ ಮಾರ್ಗಗಳಲ್ಲಿ ಈ ಬಸ್​ ಬಳಕೆ ಮಾಡಲಾಗುತ್ತಿಲ್ಲ ಎಂದರು.

ಲಾಭ ನಷ್ಟದ ಲೆಕ್ಕಾಚಾರ ಮಾಡಿಲ್ಲ: ಎಷ್ಟು ಬಸ್ಸುಗಳನ್ನು ಬಳಸುತ್ತಿದ್ದೇವೂ ಅಷ್ಟಕ್ಕೆ ಮಾತ್ರ ಹಣ ಬಿಡುಗಡೆ ಮಾಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ಬಸ್ಸುಗಳ ಬಳಕೆ ಆಗದೇ ಕಾರಣ ಈ ತನಕ ಯಾವ ಪೇಮೆಂಟ್ ಕೊಟ್ಟಿಲ್ಲ. ಹೀಗಾಗಿ ಇದರಲ್ಲಿ ನಷ್ಟ ಲಾಭದ ಕುರಿತು ನಿಖರ ಮಾಹಿತಿ ಸಿಕ್ಕಿಲ್ಲ.‌ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಯಗಿ ಪೇಪೆಂಟ್ ಆದರೆ ಆಗ ತಿಳಿಯುತ್ತೆ. ಆದರೆ ಅದಕ್ಕೆ ಒಂದಿಷ್ಟು ಸಮಯ ಬೇಕು ಎಂದರು.

ಮೊದಲನೇ ಹಂತದಲ್ಲಿ ಬಂದ 90 ಬಸ್​ಗಳಲ್ಲಿ ಕೇವಲ 26 ಮಾತ್ರ ಬಳಕೆಯಾಗುತ್ತಿದೆ. ಎರಡನೇ ಹಂತದಲ್ಲಿ 300 ಬಸ್​ಗಳನ್ನು ಪಡೆಯಲು ಚಿಂತನೆ ನಡೆಸಲಾಗಿದೆ. ಆದರೆ ಈ ಬಸ್​ಗಳನ್ನು ಬಳಸದೇ ಕೇವಲ ತಂದಿಡುವ ಅಗತ್ಯ ಏನಿದೆ ಮತ್ತು ಅದಕ್ಕೆ ಉಪಯುಕ್ತ ವ್ಯವಸ್ಥೆ ಮಾಡದೇ ಇರುವುದು ಏಕೆ ಎಂಬುದೇ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಧ್ವನಿ ವರ್ಧಕ ಬಳಕೆ ಸಂಬಂಧ ಮಾನದಂಡ ನಿಗದಿ: ಸರ್ಕಾರದಿಂದ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.