ಬೆಂಗಳೂರು: ಪರಿಸರಸ್ನೇಹಿ ಬಿಎಂಟಿಸಿ ಬಸ್ ರಸ್ತೆಗಿಳಿಸಲು ಬಿಎಂಟಿಸಿ ಮುಂದಾಗಿದೆ. ಮೊದಲ ಹಂತದಲ್ಲಿ 90 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಖರೀದಿಗೆ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗಿದೆ.
ಗುತ್ತಿಗೆ ಆಧಾರದ ಎಸಿಯೇತರ 90 ಬಸ್‌ಗಳನ್ನು ಒದಗಿಸಲು ವಿದ್ಯುತ್ ವ್ಯಾಪಾರ ನಿಗಮ ಲಿಮಿಟೆಡ್ ಒಪ್ಪಿಕೊಂಡಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 50 ಕೋಟಿ ರೂ. ಅನುದಾನ ಬಳಸಿಕೊಂಡು 90 ಎಲೆಕ್ಟ್ರಿಕ್ ಬಸ್ ಪಡೆಯಲು ಕರೆದಿದ್ದ ಟೆಂಡರ್ನಲ್ಲಿ ಕಡಿಮೆ ಬಿಡ್ ಸಲ್ಲಿಸಿದ್ದ ವಿದ್ಯುತ್ ವ್ಯಾಪಾರ ನಿಗಮ ಲಿಮಿಟೆಡ್ ಟೆಂಡರ್ ಪಡೆಯಲು ಸಫಲವಾಗಿದೆ.
ಎಲೆಕ್ಟ್ರಿಕ್ ಬಸ್ ವಿಶೇಷತೆಗಳೇನು?
- ಎಲೆಕ್ಟ್ರಿಕ್ ಬಸ್ 9 ಮೀಟರ್ ಉದ್ದವಿದೆ.
- ಹೈಟೆಕ್, ಪರಿಸರ ಸ್ನೇಹಿ ಬಸ್ ಆಗಿರಲಿದೆ.
- 31 ಆಸನಗಳುಳ್ಳ ಸೌಂಡ್ ಲೆಸ್ ಎಲೆಕ್ಟ್ರಿಕ್ ಬಸ್.
- ಒಮ್ಮೆ ಚಾರ್ಜ್ ಮಾಡಿದರೆ 200-250 ಕಿ. ಮೀ ಸಂಚಾರ.
- ಆಟೋ ಮ್ಯಾಟಿಕ್ ಸ್ಪೀಡ್ ಕಂಟ್ರೋಲ್ ಗೆ ಬರುವ ವ್ಯವಸ್ಥೆ.
- ಬಸ್ನಲ್ಲಿ ಆ್ಯಂಬುಲೆನ್ಸ್ ರೀತಿಯಲ್ಲಿ ಸೈರನ್ ವ್ಯವಸ್ಥೆ.
- ಆಟೋಮ್ಯಾಟಿಕ್ ರೂಟ್ ಬದಲಾವಣೆ, ಎಮರ್ಜೆನ್ಸಿ ಕರೆ ಮಾಡುವ ವ್ಯವಸ್ಥೆ.
- ಪ್ರತಿ ಕಿ. ಮೀ ಗೆ 1.2 ಕಿಲೋ ವ್ಯಾಟ್ ನಷ್ಟು ವಿದ್ಯುತ್ ಬಳಕೆ.
ಎರಡೂವರೆ ಕೋಟಿ ರೂ. ಬೆಲೆ ಬಾಳುವ ಈ ಬಸ್‌ಗಳನ್ನು ಕಿಲೋ ಮೀಟರ್ ಗೆ 44 ರೂ ನೀಡಿ ಗುತ್ತಿಗೆ ಆಧಾರದಲ್ಲಿ ಬಿಎಂಟಿಸಿ ಪಡೆಯುತ್ತಿದೆ. ಇದರ ಜೊತೆಗೆ ಇನ್ನೂ 300 ಬಸ್ಸುಗಳನ್ನು ಪಡೆಯಲು ನಿಗಮ ಮುಂದಾಗಿದೆ. ಶೀಘ್ರದಲ್ಲೇ ಎಲ್ಲಾ ಎಲೆಕ್ಟ್ರಿಕ್ ಬಸ್ ರಸ್ತೆಗೆ ಬಂದರೆ ಸಿಲಿಕಾನ್ ಸಿಟಿಯಲ್ಲಿ ಕೊಂಚ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರಲಿದೆ.
ಎಲೆಕ್ಟ್ರಿಕ್ ಬಸ್ ಓಡಿಸಬೇಕೆನ್ನುವುದು ಬಿಎಂಟಿಸಿಯ ಬಹುದೊಡ್ಡ ಕನಸು. ಆದರೆ ಸದ್ಯ ಎರಡೂವರೆ ಕೋಟಿ ವೆಚ್ಚವಾಗ್ತಿರೋ ಈ ಬಸ್‌ಗಳನ್ನು ಖರೀದಿಸುವ ಸ್ಥಿತಿಯಲ್ಲಿ ನಿಗಮ ಇಲ್ಲ. ಹೀಗಾಗಿ, ಹೊರಗುತ್ತಿಗೆ ಆಧಾರದ ಮೇಲೆ ಸಂಚಾರ ಮಾಡಲಿರೋ ಎಲೆಕ್ಟ್ರಿಕ್ ಬಸ್‌ಗಳಿಂದ ನಿಗಮದ ಹೊರೆ ಕಡಿಮೆಯಾಗಲಿದೆ.