ETV Bharat / city

ಬಿಎಂಟಿಸಿಗೆ ಕೊರೊನಾ ವಾರಿಯರ್ ಮ್ಯಾನೇಜ್‌ಮೆಂಟ್ ಪ್ಲಾಟಿನಂ ಪ್ರಶಸ್ತಿ

author img

By

Published : Nov 10, 2021, 9:34 AM IST

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಬಿಎಂಟಿಸಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ ಹಿನ್ನೆಲೆ ಗ್ರೋ ಕೇರ್ ಇಂಡಿಯಾ ಕೊರೊನಾ ವಾರಿಯರ್ ಮ್ಯಾನೇಜ್‌ಮೆಂಟ್ ಪ್ಲಾಟಿನಂ ಪ್ರಶಸ್ತಿ ನೀಡಲಾಗಿದೆ.

Corona Warrior Management Platinum Award

ಬೆಂಗಳೂರು: ಕೊರೊನಾ ತುರ್ತು ಸಮಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಿನ್ನೆಲೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಗ್ರೋ ಕೇರ್ ಇಂಡಿಯಾ ಕೊರೊನಾ ವಾರಿಯರ್ ಮ್ಯಾನೇಜ್‌ಮೆಂಟ್ ಪ್ಲಾಟಿನಂ ಪ್ರಶಸ್ತಿಗೆ ಭಾಜನವಾಗಿದೆ.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬಿಎಂಟಿಸಿ ಅತ್ಯುತ್ತಮ ಸೇವೆ ನೀಡಿದೆ. ಆಪರೇಟಿಂಗ್ ಸೇವೆಗಳು, ಬೆಂಗಳೂರಿನಲ್ಲಿ ಆಸ್ಪತ್ರೆಗಳನ್ನು ಸಂಪರ್ಕಿಸುವುದು, ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಕ್ವಾರಂಟೈನ್ ಕೇಂದ್ರಗಳಿಗೆ ಸಾಗಿಸುವುದು, ಕಾರ್ಮಿಕರನ್ನು ರೈಲು ನಿಲ್ದಾಣಕ್ಕೆ ಸಾಗಿಸುವುದು, ಬಸ್​ಗಳ ನೈರ್ಮಲ್ಯೀಕರಣ ಹಾಗೂ ಡಿಪೋ ನೌಕರರಿಗೆ ಕೋವಿಡ್ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು ಸೇರಿದಂತೆ ಡಿಪೋಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸುವ ಮೂಲಕ ಉತ್ತಮ ಸೇವೆ ನೀಡಿದೆ.

BMTC
ಪ್ರಶಸ್ತಿ ಪ್ರಮಾಣಪತ್ರ

ಉದ್ಯೋಗಿಗಳಿಗೆ ವ್ಯಾಕ್ಸಿನೇಷನ್ ಡ್ರೈವ್‌ ವ್ಯವಸ್ಥೆಯನ್ನು ಸಹ ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಎಲ್ಲಾ ಹಂತದ ಸೇವೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.