ETV Bharat / city

'ಮಿಷನ್ ಕುಟುಂಬ ರಾಜಕಾರಣ' ಎಂದು ಜೆಡಿಎಸ್ ಟೀಕಿಸಿದ ಬಿಜೆಪಿ: 'ಬುರುಡೆರಾಮಯ್ಯ' ಯಾರು ಗೊತ್ತಾ..!? - bjp tweet against jds Family politics

ಜೆಡಿಎಸ್​ ಹಾಗೂ ಕಾಂಗ್ರೆಸ್​ ವಿರುದ್ಧ ಬಿಜೆಪಿ ಟ್ಟೀಟ್​ ವಾರ್ ನಡೆಸಿದೆ. ಜಾತ್ಯತೀತ ಜನತಾದಳಕ್ಕೆ 'ಮಿಷನ್​​ ಕುಟುಂಬ ರಾಜಕಾರಣ' ಎಂದು ಕುಟುಕಿರುವ (bjp tweet against jds and congress ) ಭಾರತೀಯ ಜನತಾ ಪಾರ್ಟಿ, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಯಾರ ಕುಟುಂಬಕ್ಕೆ ನೀಡಿದ್ದೀರಿ? ರಾಜ್ಯ ಅಧ್ಯಕ್ಷ ಸ್ಥಾನದಲ್ಲಿ ಸುದೀರ್ಘ ಅವಧಿಗೆ ಇದ್ದಿದ್ದು ಯಾರ ಕುಟುಂಬ? ಎಂದು ಪ್ರಶ್ನೆ ಮಾಡಿದೆ. ಅಲ್ಲದೆ, ನುಡಿದಂತೆ ನಡೆಯಿರಿ ಎಂದರೆ ಇನ್ನೊಂದು ಚುನಾವಣೆಯವರೆಗೆ ತಡೆಯಿರಿ ಎನ್ನುತ್ತೀರಿ. ಇದಕ್ಕಾಗಿಯೇ ಬುರುಡೆರಾಮಯ್ಯ ಎನ್ನುವುದು ಎಂದು ಸಿದ್ದರಾಮಯ್ಯ ಕುರಿತು ಬಿಜೆಪಿ ವ್ಯಂಗ್ಯವಾಡಿದೆ..

bjp-tweet-against-jds-and-congress-party
ಬಿಜೆಪಿ ಟ್ಟೀಟ್​
author img

By

Published : Nov 15, 2021, 4:51 PM IST

ಬೆಂಗಳೂರು : ಜಾತ್ಯಾತೀತ ಜನತಾದಳ ಸ್ಥಾಪನೆಯಾದ ದಿನದಿಂದ ಈವರೆಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಯಾರ ಕುಟುಂಬಕ್ಕೆ ನೀಡಿದ್ದೀರಿ? ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಸುದೀರ್ಘ ಅವಧಿಗೆ ಇದ್ದಿದ್ದು ಯಾರ ಕುಟುಂಬ? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಬಿಜೆಪಿ (bjp tweet against jds and congress ) ಪ್ರಶ್ನಿಸಿದೆ.

  • ಮಾನ್ಯ @hd_kumaraswamy ಅವರೇ,

    ನಿಮ್ಮ ಪಕ್ಷದ ಅಧಿಕೃತ ವೆಬ್‌ಸೈಟ್‌ನಲ್ಲಿ ಪಕ್ಷದ ಹಾಲಿ ರಾಜ್ಯಾಧ್ಯಕ್ಷರ ಭಾವಚಿತ್ರಕ್ಕೇ ಜಾಗವಿಲ್ಲ.

    ಅವರು ನಿಮ್ಮ ಕುಟುಂಬದವರಲ್ಲ ಎಂಬ ಕಾರಣಕ್ಕಾಗಿ ಈ ದ್ವೇಷವೇ?

    ಇದೂ ಕುಟುಂಬ ರಾಜಕಾರಣದ ಭಾಗವೇ?#ಮಿಷನ್‌ಕುಟುಂಬರಾಜಕಾರಣ pic.twitter.com/myy7CvLq61

    — BJP Karnataka (@BJP4Karnataka) November 15, 2021 " class="align-text-top noRightClick twitterSection" data=" ">

'ಮಿಷನ್‌ ಕುಟುಂಬ ರಾಜಕಾರಣ' ಎಂಬ ಹ್ಯಾಷ್ ಟ್ಯಾಗ್​ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕುಮಾರಸ್ವಾಮಿ (bjp tweet against HD Kumaraswamy) ಅವರೇ ಜೆಡಿಎಸ್‌ಗೆ ಅಧಿಕಾರ ಸಿಗುತ್ತದೆ ಎಂದು ಸ್ಪಷ್ಟವಾದ ಕ್ಷಣದಿಂದ ನಿಮ್ಮ ಶಾಸಕಾಂಗ ಪಕ್ಷದ ನಾಯಕರಾಗಿ ನೀವೇ ಯಾಕೆ ಆಯ್ಕೆಯಾಗುತ್ತೀರಿ? ಪಕ್ಷಕ್ಕಾಗಿ ದುಡಿಮೆ ಮಾಡಿದವರಿಗೆ ಸ್ವಲ್ಪ ಅವಕಾಶ ಕೊಡಬಹುದಲ್ಲವೇ..? ನಿಮ್ಮ ಪಕ್ಷದ ಅಧಿಕೃತ ವೆಬ್‌ಸೈಟ್‌ನಲ್ಲಿ ಪಕ್ಷದ ಹಾಲಿ ರಾಜ್ಯಾಧ್ಯಕ್ಷರ ಭಾವಚಿತ್ರಕ್ಕೇ ಜಾಗವಿಲ್ಲ. ಅವರು ನಿಮ್ಮ ಕುಟುಂಬದವರಲ್ಲ ಎಂಬ ಕಾರಣಕ್ಕಾಗಿ ಈ ದ್ವೇಷವೇ? ಇದೂ ಕುಟುಂಬ ರಾಜಕಾರಣದ ಭಾಗವೇ? ಎಂದು ಪ್ರಶ್ನಿಸಿದೆ.

ಬುರುಡೆರಾಮಯ್ಯ: ಪ್ರಧಾನಿಯ ಸೈದ್ಧಾಂತಿಕ ಹಿನ್ನೆಲೆಯನ್ನು ನೀವು ಪ್ರಶ್ನೆ ಮಾಡಿದ್ದೀರಿ. ಹಾಗಾದರೆ, ನಿಮ್ಮ ಸಿದ್ಧಾಂತ ಯಾವುದು? ಜೆಡಿಎಸ್ ಪಕ್ಷದಲ್ಲಿದ್ದಾಗ ದೇವೇಗೌಡರು, ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಸೋನಿಯಾ ಗಾಂಧಿ, ಮತರಾಜಕಾರಣಕ್ಕೆ ಟಿಪ್ಪು ಎನ್ನುವುದೇ ನಿಮ್ಮ ಸಿದ್ಧಾಂತವಲ್ಲವೇ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಬಿಜೆಪಿ ಟೀಕಿಸಿದೆ.

  • ಮಾನ್ಯ #ಸುಳ್ಳುರಾಮಯ್ಯ ಅವರೇ, ರಾಜ್ಯದ ಜನರು ನಿಮ್ಮಂತ ಸುಳ್ಳುಗಾರರನ್ನು ಇದುವರೆಗೆ ಕಂಡಿಲ್ಲ.

    2013 ರಿಂದಲೂ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಲೇ ಬಂದಿದ್ದೀರಿ.

    ನುಡಿದಂತೆ ನಡೆಯಿರಿ ಎಂದರೆ ಇನ್ನೊಂದು ಚುನಾವಣೆಯವರೆಗೆ ತಡೆಯಿರಿ ಎನ್ನುತ್ತೀರಿ.

    ಇದಕ್ಕಾಗಿಯೇ #ಬುರುಡೆರಾಮಯ್ಯ ಎನ್ನುವುದು.

ಪಕ್ಷಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು ಸಿದ್ದರಾಮಯ್ಯ ಕರೆಕೊಟ್ಟಿದ್ದಾರೆ. ಪಕ್ಷಕ್ಕೆ ಬರುವ ಯುವಕರಿಗೆ ಸ್ಥಾಪಿತ ಹಿತಾಸಕ್ತಿಗಳ ಕೂಟದಲ್ಲಿ ಯಾವ ಸ್ಥಾನ ನೀಡುತ್ತೀರಿ? ಇದೇ ನಮ್ಮ ಕೊನೆಯ ಚುನಾವಣೆ ಎನ್ನುತ್ತಲೇ ನೀವು ಮೂರು ಬಾರಿ ಚುನಾವಣೆಗೆ ನಿಂತಿರಿ, ಕಾಂಗ್ರೆಸ್​ನಲ್ಲಿ ಹೊಸಬರಿಗೆ ಅವಕಾಶ ಸಾಧ್ಯವೇ? ರಾಜ್ಯದ ಜನರು ನಿಮ್ಮಂತ ಸುಳ್ಳುಗಾರರನ್ನು ಇದುವರೆಗೆ ಕಂಡಿಲ್ಲ.

2013ರಿಂದಲೂ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಲೇ ಬಂದಿದ್ದೀರಿ. ನುಡಿದಂತೆ ನಡೆಯಿರಿ ಎಂದರೆ ಇನ್ನೊಂದು ಚುನಾವಣೆಯವರೆಗೆ ತಡೆಯಿರಿ ಎನ್ನುತ್ತೀರಿ. ಇದಕ್ಕಾಗಿಯೇ ಬುರುಡೆರಾಮಯ್ಯ ಎನ್ನುವುದು ಎಂದು ವ್ಯಂಗ್ಯವಾಡಿದೆ.

ನಕಲಿ ಗಾಂಧಿಗಳ ಪೂಜೆ: ವ್ಯಕ್ತಿಪೂಜೆ ಬೇಡ, ಪಕ್ಷದ ಪೂಜೆ ಮಾಡಬೇಕು ಹಾಗಿದ್ದಲ್ಲಿ ಮಾತ್ರ ಇರಿ ಇಲ್ಲ ಹೊರಹೋಗಿ ಎಂದು ನೀವು ಯಾರನ್ನು ಉದ್ದೇಶಿಸಿ ಈ ಮಾತು ಹೇಳಿದ್ದು? ನಿಮ್ಮ ಪಕ್ಷದಲ್ಲಿ ಈಗ ನಡೆಯುತ್ತಿರುವುದು ನಕಲಿಗಾಂಧಿಗಳ ಪೂಜೆಯಲ್ಲವೇ? ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ಪಕ್ಷಕ್ಕೆ ದಿಕ್ಕು ಎಂಬರ್ಥದಲ್ಲಿ ಚರ್ಚೆ ನಡೆಯುತ್ತಿದೆ.

ಇದನ್ನು ಸಹಿಸಲಾಗದೆ, ತಾಳ್ಮೆಯ ಕಟ್ಟೆಯೊಡೆದು ಈ ಮಾತು ಹೇಳುತ್ತಿದ್ದೀರಾ? ವ್ಯಕ್ತಿ ಪೂಜೆ ಮಾಡುತ್ತಿರುವುದ್ಯಾರು? ಪಕ್ಷ ಪೂಜೆ ಮಾಡುತ್ತಿರುವುದ್ಯಾರು? ಪದಾಧಿಕಾರಿಗಳ ಪಟ್ಟಿಗೆ ತಡೆ ಒಡ್ಡುತ್ತಿರುದ್ಯಾರು? ಮುಂದಿನ ಸಿಎಂ ಕೂಗು ಎಬ್ಬಿಸುತ್ತಿರುವುದ್ಯಾರು? ನಕಲಿ ಗಾಂಧಿಗಳ ಪಾದ ಪೂಜೆ ಮಾಡುತ್ತಿರುವುದ್ಯಾರು? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧವೂ ಬಿಜೆಪಿ ವಾಗ್ದಾಳಿ ನಡೆಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.