ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಆಯ್ಕೆ ಯಾವಾಗಲೂ ಎರಡರಲ್ಲಿ ಒಂದು. ಮೊದಲನೆಯದು ಅವರ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು,ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕೆಪಿಸಿಸಿ ಅಧ್ಯಕ್ಷರ ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಇದು ಶಿಕ್ಷಾರ್ಹ ಅಪರಾಧ. ಆಯೋಗಕ್ಕೆ 1734 ಕೋಟಿ ಹೊಂದಿದ್ದೇನೆ ಎಂದು ಮಾಹಿತಿ ನೀಡಿರುವ ಯೂಸುಫ್ ಅವರು ಸಾರ್ವಜನಿಕವಾಗಿ ಬೇರೆ ಬೇರೆ ಲೆಕ್ಕ ಕೊಡುತ್ತಿದ್ದಾರೆ. ನಿಮ್ಮ ಅಭ್ಯರ್ಥಿಯ ಆಸ್ತಿ ಮೌಲ್ಯ 4,000 ಕೋಟಿಯೋ 7,000 ಕೋಟಿಯೋ? ಸಭ್ಯರ ಮನೆ ಎಂದು ಪರಿಗಣಿಸಲ್ಪಡುವ ಪರಿಷತ್ ಪ್ರವೇಶಿಸಲು ತವಕದಿಂದಿರುವ ಪೊಲೀಸ್ ರೌಡಿಶೀಟರ್ ಕೆಜಿಎಫ್ ಬಾಬು ಅವರು ತಮ್ಮ ಆಸ್ತಿಯ ಅನಾರೋಗ್ಯಕರ ಪ್ರದರ್ಶನ ಮಾಡುವುದಕ್ಕಿಂತ ಆಸ್ತಿಯ ಮೂಲವನ್ನು ತೋರುವುದು ಸಕ್ರಮ ವಿಧಾನ. ಡಿಕೆ ಶಿವಕುಮಾರ್ ನಿರ್ದೇಶಿತ ಸಿರಿವಂತ ಅಭ್ಯರ್ಥಿಗೆ ತಮ್ಮ ಆಸ್ತಿಯ ಮೂಲ ಹಾಗೂ ಗಳಿಕೆ ವಿಧಾನ ತಿಳಿಸಲು ಸಾಧ್ಯವೇ? ಎಂದು ಬಿಜೆಪಿ ಟ್ವಿಟ್ ಮೂಲಕ ಪ್ರಶ್ನಿಸಿದೆ.
-
ಕೆಪಿಸಿಸಿ ಅಧ್ಯಕ್ಷ @DKShivakumar ಅವರ ಆಯ್ಕೆ ಯಾವಾಗಲೂ ಎರಡರಲ್ಲಿ ಒಂದು!!!
— BJP Karnataka (@BJP4Karnataka) December 2, 2021 " class="align-text-top noRightClick twitterSection" data="
ಒಂದೋ ಅವರ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು,ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು.
ಉದಾಹರಣೆಗೆ ಯುವ ಕಾಂಗ್ರೆಸ್ ಭಾವೀ ಅಧ್ಯಕ್ಷ ನಲಪಾಡ್, ಶಾಸಕರ ಕೊಲೆ ಸಂಚಿನ ಆರೋಪಿಗಳು, ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಅವರಂತವರು, ಇತ್ಯಾದಿ.
">ಕೆಪಿಸಿಸಿ ಅಧ್ಯಕ್ಷ @DKShivakumar ಅವರ ಆಯ್ಕೆ ಯಾವಾಗಲೂ ಎರಡರಲ್ಲಿ ಒಂದು!!!
— BJP Karnataka (@BJP4Karnataka) December 2, 2021
ಒಂದೋ ಅವರ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು,ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು.
ಉದಾಹರಣೆಗೆ ಯುವ ಕಾಂಗ್ರೆಸ್ ಭಾವೀ ಅಧ್ಯಕ್ಷ ನಲಪಾಡ್, ಶಾಸಕರ ಕೊಲೆ ಸಂಚಿನ ಆರೋಪಿಗಳು, ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಅವರಂತವರು, ಇತ್ಯಾದಿ.ಕೆಪಿಸಿಸಿ ಅಧ್ಯಕ್ಷ @DKShivakumar ಅವರ ಆಯ್ಕೆ ಯಾವಾಗಲೂ ಎರಡರಲ್ಲಿ ಒಂದು!!!
— BJP Karnataka (@BJP4Karnataka) December 2, 2021
ಒಂದೋ ಅವರ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು,ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು.
ಉದಾಹರಣೆಗೆ ಯುವ ಕಾಂಗ್ರೆಸ್ ಭಾವೀ ಅಧ್ಯಕ್ಷ ನಲಪಾಡ್, ಶಾಸಕರ ಕೊಲೆ ಸಂಚಿನ ಆರೋಪಿಗಳು, ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಅವರಂತವರು, ಇತ್ಯಾದಿ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅಸ್ತಿ ಒಮ್ಮೆಲೆ ಏರಿಕೆ ಕಂಡಿತು. ಆಸ್ತಿಯ ಮೂಲ ತೋರಿಸದೆ ಐಟಿ ದಾಳಿ ಎದುರಿಸಿ ತಿಹಾರ್ ಜೈಲು ವಾಸ ಅನುಭವಿಸಿದರು. ಈಗ ಪರಿಷತ್ತಿಗೆ ಮತ್ತೊಬ್ಬ ಕುಬೇರ ಕೆಜಿಎಫ್ ಬಾಬುವನ್ನು ಜನರ ಮುಂದೆ ತಂದು ನಿಲ್ಲಿಸಿದ್ದಾರೆ. ಡಿಕೆಶಿ ಅವರೇ, ನಿಮ್ಮ ಅಭ್ಯರ್ಥಿ ಕೂಡ ಖಾಲಿ ಜಾಗಕ್ಕೆ ಬೇಲಿ ಹಾಕಿ ಅಷ್ಟೊಂದು ಸಂಪಾದಿಸಿದ್ದೇ? ಎಂದು ಬಿಜೆಪಿ ಟ್ವಿಟ್ ಮಾಡಿ ಡಿಕೆಶಿ ಕಾಲೆಳೆದಿದೆ.
ಡಿ.ಕೆ ಶಿವಕುಮಾರ್ ಅವರ ಆಯ್ಕೆ ಯಾವಾಗಲೂ ಎರಡರಲ್ಲಿ ಒಂದು. ಅವರ ಆಪ್ತ ಬಣದಲ್ಲಿರುವವರು ರೌಡಿ ಹಿನ್ನೆಲೆ ಹೊಂದಿರಬೇಕು,ಇಲ್ಲವಾದರೆ ತೆರಿಗೆ ಕಳ್ಳರಾಗಿರಬೇಕು. ಉದಾಹರಣೆಗೆ ಯುವ ಕಾಂಗ್ರೆಸ್ ಭಾವಿ ಅಧ್ಯಕ್ಷ ನಲಪಾಡ್, ಶಾಸಕರ ಕೊಲೆ ಸಂಚಿನ ಆರೋಪಿಗಳು, ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಅವರಂತವರು, ಇತ್ಯಾದಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.