ಬೆಂಗಳೂರು : ಬಿಜೆಪಿ ಯುವ ಮೋಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರ ನೀಡಲು ಪಕ್ಷದಿಂದ ಹಣ ಸಂಗ್ರಹ ಮಾಡುತ್ತಿಲ್ಲ. ಪಕ್ಷದ ಹೆಸರಿನಲ್ಲಿ ಖಾಸಗಿಯಾಗಿ ಕೆಲವರು ಧನ ಸಂಗ್ರಹ ಮಾಡುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಪಕ್ಷದ ಕಾರ್ಯಕರ್ತರು ಹಾಗೂ ಜನತೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತನಾದ ಪ್ರವೀಣ್ ನೆಟ್ಟಾರು ಇವರನ್ನು ಭಯೋತ್ಪಾದಕರು ಭೀಕರ ಹತ್ಯೆ ಮಾಡಿರುವುದು ಖಂಡನೀಯ. ನಮ್ಮ ಕಾರ್ಯಕರ್ತನಾದ ಪ್ರವೀಣ್ ಕುಟುಂಬಕ್ಕೆ ಪಕ್ಷವು ಈಗಾಗಲೇ ಮೊದಲ ಹಂತದ ನೆರವು ನೀಡಿದೆ ಹಾಗೂ ಮುಂದೆಯೂ ಸರ್ಕಾರ ಮತ್ತು ಪಕ್ಷ ಜೊತೆಗಿರಲಿದೆ.
ನೊಂದ ಕುಟುಂಬಕ್ಕೆ ಅಲ್ಲಲ್ಲಿ ಪಕ್ಷದ ಹೆಸರಿನಲ್ಲಿ ಖಾಸಗಿ ಧನ ಸಂಗ್ರಹ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಪಕ್ಷದ ಹೆಸರಿನಲ್ಲಿ ಯಾವುದೇ ರೀತಿಯ ಖಾಸಗಿ ಹಣ ಸಂಗ್ರಹ ಮಾಡಬಾರದು ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ : ಸಿಎಂ ನೋಡಲು ಡೀಸೆಂಟ್ ಆಗಿ ಕಾಣುತ್ತಾರೆ; ಅವರ ನಿರ್ಣಯಗಳು ತುಂಬಾ ಸ್ಟ್ರಾಂಗ್ ಎಂದ ಕೆ ಸುಧಾಕರ್