ETV Bharat / city

ಯಶವಂತಪುರದಲ್ಲಿ ರಂಗೇರಿದ ಪ್ರಚಾರ; ಆರೋಪ ಪ್ರತ್ಯಾರೋಪದ ಬಾಣ ಬಿಟ್ಟ ನಾಯಕರು

ಯಶವಂತಪುರ ಉಪಸಮರದ ಅಖಾಡದಲ್ಲಿ ಚುನಾವಣಾ ಕಾವು ರಂಗೇರಿದೆ. ಇಂದು ಬಿಜೆಪಿ ತನ್ನ ಘಟಾನುಘಟಿ ನಾಯಕರನ್ನು ಪ್ರಚಾರದ ಕಣಕ್ಕಿಳಿಸಿದರೆ, ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಸಿಎಂ ಕುಮಾರಸ್ವಾಮಿಯವರೇ ಅಖಾಡಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿಯ ನೀರಸ ಪ್ರಚಾರ ಮುಂದುವರೆದಿದೆ.

author img

By

Published : Nov 23, 2019, 11:03 PM IST

ಯಶವಂತಪುರ ಉಪಚುನಾವಣೆ ಪ್ರಚಾರ

ಬೆಂಗಳೂರು: ಯಶವಂತಪುರ ಉಪಸಮರದ ಅಖಾಡದಲ್ಲಿ ಚುನಾವಣಾ ಕಾವು ರಂಗೇರಿದೆ. ಇಂದು ಬಿಜೆಪಿ ತನ್ನ ಘಟಾನುಘಟಿ ನಾಯಕರನ್ನು ಪ್ರಚಾರದ ಕಣಕ್ಕಿಳಿಸಿದರೆ, ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಸಿಎಂ ಕುಮಾರಸ್ವಾಮಿಯವರೇ ಅಖಾಡಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿಯ ನೀರಸ ಪ್ರಚಾರ ಮುಂದುವರೆದಿದೆ.

ಯಶವಂತಪುರ ಉಪಚುನಾವಣೆ ಪ್ರಚಾರ

ಹೌದು, ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಪರ ಕೇಂದ್ರ ಸಚಿವ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಆರ್. ಅಶೋಕ್ ಮತಯಾಚನೆ ನಡೆಸಿದರು. ವಿಶೇಷ ಅಂದ್ರೆ, 2ನೆ ದಿನವೂ ಟಿಕೆಟ್ ವಂಚನೆಯಿಂದ ಬೇಸರಗೊಂಡಿದ್ದ ಚಿತ್ರನಟ ಜಗ್ಗೇಶ್ ಕೂಡ ಪ್ರಚಾರಕ್ಕೆ ಧ್ವನಿಗೂಡಿಸಿದರು. ಅತ್ತ ಜೆಡಿಎಸ್ ಉಪಸಮರದಲ್ಲಿ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೆನೆ ಅಭ್ಯರ್ಥಿ ಜವರಾಯಿಗೌಡರಿಗೆ ಪ್ರಚಾರದಲ್ಲಿ ಸಾಥ್ ನೀಡಿದರು.

ರಣಕಣದಲ್ಲಿ ಎಸ್.ಟಿ.ಸೋಮಶೇಖರ್ ಹಾಗು ಮಾಜಿ ಸಿಎಂ ಕುಮಾರಸ್ವಾಮಿ ಪರಸ್ಪರ ವಾಕ್​ ಸಮರ ಜೋರಾಗಿತ್ತು. ಎಸ್.ಟಿ.ಸೋಮಶೇಖರ್ ಚಿತ್ರ ನಟಿಯೊಬ್ಬರು ಅಶೋಕಾ ಹೋಟೆಲ್​ನಲ್ಲಿ ಬಿಡಿಎ ಗೆ ಸಂಬಂಧಿಸಿದ ಕಡತವೊಂದಕ್ಕೆ ಸಹಿ ಹಾಕಿಸುತ್ತಿದ್ದರು ಎಂದು ಎಚ್​ಡಿಕೆ ವಿರುದ್ಧ ಪರೋಕ್ಷ ಆರೋಪ ಮಾಡಿದರು.

ಈ ಆರೋಪದಿಂದ ಕೆಂಡಾಂಮಡಲರಾದ ಎಚ್.ಡಿ ಕುಮಾರಸ್ವಾಮಿ, ಎಸ್.ಟಿ.ಸೋಮಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು. ಸೋಮಶೇಖರ್​ಗೆ ಬುದ್ದಿ ಭ್ರಮಣೆಯಾಗಿದೆ. ನೀವು ಮಾಡಿರುವ ಕೆಟ್ಟ ಕೆಲಸಕ್ಕೆ ನನ್ನನ್ನ ಯಾಕೆ ಎಳೆದು ತರುತ್ತೀರಿ. ಬಿಡಿಎಗೆ ಕುರಿತಂತೆ ಒಂದೇ ಒಂದು ಫೈಲ್ ನನ್ನ ಬಳಿ ಬಂದಿಲ್ಲ. ಈ ಕುರಿತಂತೆ ಚರ್ಚೆಗೆ ನಾನು ಸಿದ್ದನಿದ್ದೇನೆ. ಸೋಮಶೇಖರ್ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಎಚ್ಚರಿಕೆ ನೀಡಿದರು. ಜೊತೆಗೆ ಎಸ್ . ಟಿ ಸೋಮಶೇಖರ್ ಕ್ಷೇತ್ರದ ಅನುದಾನದ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಮಾಜಿ ಸಿಎಂ ಎಚ್​ಡಿಕೆ ಸ್ಪಷ್ಟಪಡಿಸಿದರು.

ಮಾಜಿ ಮುಖ್ಯಮಂತ್ರಿ ಮಾತಿಗೆ ಪ್ರತಿಕ್ರಿಯೆ ನೀಡಿದ ಕಮಲ ಅಭ್ಯರ್ಥಿ ಎಸ್.ಟಿ ಸೋಮಶೇಖರ್ , ನಾನು ಮುಖ್ಯಮಂತ್ರಿ ಹೆಸರನ್ನ ಹೇಳಿದ್ನಾ, ಆವಾಗ ರಾಕೇಶ್ ಸಿಂಗ್, ಅಶೋಕ್ ಹೋಟಲ್‌ನಲ್ಲಿ ಸಹಿ ಮಾಡಿಸಿದನ್ನ ಹೇಳಿದೆ. ಆಗಾಲೇ ಅದನ್ನ ನಾನು ಡಿಸಿಎಂ ಗಮನಕ್ಕೆ ತಂದಿದ್ದೆ. ಮಾಧ್ಯಮದ ಮೂಲಕ ಸಿಎಂ ಗಮನಕ್ಕೂ ತಂದಿದ್ದೆ. ನಾನು ಸಿಎಂ ಸಹಿ ಹಾಕಿದ್ರು ಅಂತ ಎಲ್ಲೂ ಹೇಳಿಲ್ಲ. ನನಗೆ ಯಾವುದೇ ರೀತಿಯ ಬುದ್ದಿ ಭ್ರಮಣೆಯಾಗಿಲ್ಲ, ನನಗೆ ಬುದ್ದಿ ಚೆನ್ನಾಗೆ ಇದೆ ಎಂದು ಮಾಜಿ ಸಿಎಂಗೆ ತೀರುಗೇಟು ನೀಡಿದರು.

Intro:Body:ರಂಗೇರಿತು ಯಶವಂತಪುರ ವಿಧಾನಸಭಾ ಉಪಚುನಾವಣೆ ಪ್ರಚಾರ; ಆರೋಪ ಪ್ರತ್ಯಾರೋಪದ ಬಾಣ ಹಾರಿಸಿದ ನಾಯಕರು.

ಬೆಂಗಳೂರು:
ಯಶವಂತಪುರ ಉಪಸಮರದ ಅಖಾಡದಲ್ಲಿ ಚುನಾವಣಾ ಕಾವು ರಂಗೇರಿದೆ. ಯಶವಂತಪುರ ರಣಕಣದಲ್ಲಿ ಇಂದು ಬಿಜೆಪಿ, ಜೆಡಿಎಸ್ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿತ್ತು. ಬಿಜೆಪಿ ತನ್ನ ಘಟಾನುಘಟಿ ನಾಯಕರನ್ನು ಪ್ರಚಾರದ ಕಣಕ್ಕಿಳಿಸಿದರೆ, ಜೆಡಿಎಸ್ ಅಭ್ಯರ್ಥಿ ಪರ ಮಾಜಿ ಸಿಎಂ ಕುಮಾರಸ್ವಾಮಿನೇ ಅಖಾಡಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿಯ ನೀರಸ ಪ್ರಚಾರ ಮುಂದುವರೆದಿದೆ.

Flow: campaign visuals.
v.o.1: ಇತ್ತ ಅಧಿಕಾರದಲ್ಲಿರುವ ಬಿಜೆಪಿ ತನ್ನ ಅಭ್ಯರ್ಥಿಯಾದ ಎಸ್ ಟಿ ಸೋಮಶೇಖರ್ ಪರ ಕೇಂದ್ರ ಸಚಿವ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಆರ್ ಅಶೋಕ್ ಮತಯಾಚನೆ ನಡೆಸಿದರು. ವಿಶೇಷವೆಂದರೆ 2ನೆ ದಿನವೂ ಟಿಕೆಟ್ ವಂಚನೆಯಿಂದ ಬೇಸರಗೊಂಡಿದ್ದ ಚಿತ್ರನಟ ಜಗ್ಗೇಶ್ ಕೂಡ ಪ್ರಚಾರಕ್ಕೆ ದ್ವನಿಗೂಡಿಸಿದರು. ಅತ್ತ ಜೆಡಿಎಸ್ ಉಪಸಮರದಲ್ಲಿ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತೆನೆ ಅಭ್ಯರ್ಥಿ ಜವರಾಯಿಗೌಡರಿಗೆ ಪ್ರಚಾರದಲ್ಲಿ ಸಾಥ್ ನೀಡಿದರು.

Byte: HDK byte

VO2: ಇಂದು ರಣಕಣದಲ್ಲಿ ಎಸ್.ಟಿ.ಸೋಮಶೇಖರ್ ಹಾಗು ಮಾಜಿ ಸಿಎಂ ಕುಮಾರಸ್ವಾಮಿ ಪರಸ್ಪರ ವಾಕ್ಸಮರವೇ ಜೋರಾಗಿತ್ತು. ಎಸ್.ಟಿ.ಸೋಮಶೇಖರ್ ಚಿತ್ರ ನಟಿಯೊಬ್ಬರು ಅಶೋಕಾ ಹೋಟೆಲ್ ನಲ್ಲಿ ಬಿಡಿಎ ಗೆ ಸಂಬಂಧಿಸಿದ ಕಡತವೊಂದಕ್ಕೆ ಸಹಿ ಹಾಕಿಸುತ್ತಿದ್ದರು ಎಂದು ಎಚ್ ಡಿಕೆ ವಿರುದ್ಧ ಪರೋಕ್ಷ ಆರೋಪ ಮಾಡಿದರು.

ಬೈಟ್- ಎಸ್.ಟಿ.ಸೋಮಶೇಖರ್, ಬಿಜೆಪಿ ಅಭ್ಯರ್ಥಿ

ಈ ಆರೋಪದಿಂದ ಕೆಂಡಾಂಮಡಲರಾದ ಎಚ್.ಡಿ.ಕುಮಾರಸ್ವಾಮಿ, ಎಸ್.ಟಿ.ಸೋಮಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು. ಸೋಮಶೇಖರ್ ಗೆ ಬುದ್ದಿ ಭ್ರಮಣೆಯಾಗಿದೆ. ನೀವು ಮಾಡಿರುವ ಹಲ್ಕಾ ಕೆಲ್ಸಕ್ಕೆ ನನ್ನನ್ನ ಯಾಕೆ ಎಳೆದು ತರ್ತೀರಿ. ಬಿಡಿಎಗೆ ಕುರಿತಂತೆ ಒಂದೇ ಒಂದು ಫೈಲ್ ನನ್ನ ಬಳಿ ಬಂದಿಲ್ಲ, ಈ ಕುರಿತಂತೆ ಚರ್ಚೆಗೆ ನಾನು ಸಿದ್ದನಿದ್ದೇನೆ. ಸೋಮಶೇಖರ್ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಎಚ್ಚರಿಕೆ ನೀಡಿದರು. ಜೊತೆಗೆ ಎಸ್ ಟಿ ಸೋಮಶೇಖರ್ ಕ್ಷೇತ್ರದ ಅನುದಾನದ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ ಎಂದು ಮಾಜಿ ಸಿ ಎಂ ಎಚ್ ಡಿ ಕೆ ಹೇಳಿದರು

Byte: ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

Vo3: ಮಾಜಿ ಮುಖ್ಯಮಂತ್ರಿ ಮಾತಿಗೆ ಪ್ರತಿಕ್ರಿಯೆ ನೀಡಿದ ಕಮಲ ಅಭ್ಯರ್ಥಿ,ನಾನು ಮುಖ್ಯಮಂತ್ರಿ ಹೆಸರನ್ನ ಹೇಳಿದ್ನಾ,ಆವಾಗ ರಾಕೇಶ್ ಸಿಂಗ್ ಅಶೋಕ್ ಹೋಟಲ್‌ನಲ್ಲಿ ಸಹಿ ಮಾಡಿಸಿದನ್ನ ಹೇಳಿದ್ದೆ.ಆಗಾಲೇ ಅದನ್ನ‌ ನಾನು ಡಿಸಿಎಂ ಗಮನಕ್ಕೆ ತಂದಿದೆ.ಮಾಧ್ಯಮ ‌ಮೂಲಕ ಸಿಎಂ ಗಮನಕ್ಕೂ ತಂದಿದೆ. ನಾನು ಸಿಎಂ ಸಹಿ ಹಾಕಿದ್ರು ಅಂತಾ ಎಲ್ಲೂ ಹೇಳಿಲ್ಲ. ನನಗೆ ಯಾವುದೇ ರೀತಿಯ ಬುದ್ದಿ ಭ್ರಮಣೆಯಾಗಿಲ್ಲ, ನನಗೆ ಬುದ್ದಿ ಚೆನ್ನಾಗೆ ಇದೆ ಎಂದು ಮಾಜಿ ಸಿಎಂಗೆ ತೀರುಗೇಟು ನೀಡಿದರು.
ಪ್ಲೊ....

Vo4: ಒಟ್ಟಾರೆಯಾಗಿ ಯಶವಂತಪುರ ವಿಧಾನಸಭಾ ಉಪಚುನಾವಣಾ ರಣಕಣದಲ್ಲಿನ ಜಿದ್ದಾಜಿದ್ದು, ಬಿಜಿಪಿ ಹಾಗೂ ಜೆಡಿಎಸ್ ಮಧ್ಯೆ ನಡೆಯುತ್ತಿದ್ದು, ಹೆಸರಿಗಷ್ಟೇ ಕೈ ಅಭ್ಯರ್ಥಿ ಪಾಳ್ಯ ನಾಗರಾಜ್ ಪ್ರಚಾರ ನಡೆಸುತ್ತಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.