ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ನ ಜೆಡಿಎಸ್ ಶಾಸಕ ಗೋಪಾಲಯ್ಯ ಬಿಜೆಪಿ ಸೇರ್ಪಡೆಗೆ ಬಿಜೆಪಿ ಕಾರ್ಯಕರ್ತರಿಂದಲೇ ವಿರೋಧ ವ್ಯಕ್ತವಾಗಿದೆ. ಗೋಪಾಲಯ್ಯ ಅವರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ.
ಮಾಜಿ ಉಪಮೇಯರ್ ಹರೀಶ್ ನೇತೃತ್ವದಲ್ಲಿ, ಮಹಾಲಕ್ಷಿ ಲೇಔಟ್ನ ಬಿಜೆಪಿ ಕಾರ್ಯಕರ್ತರ ನಿಯೋಗ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ವೈ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದ್ರು. ಮನವಿ ಸ್ವೀಕರಿಸಿದ ಬಿಎಸ್ವೈ, ಈಗಲೇ ಯಾವುದೇ ಆತುರದ ನಿರ್ಧಾರ ಬೇಡ. ನಂತರ ಚರ್ಚೆ ಮಾಡೋಣ ಎಂದು ತಿಳಿಹೇಳಿ ಕಳುಹಿಸಿದ್ದಾರೆ.
ಈಗಾಗಲೇ ಕೆ.ಆರ್.ಪುರಂ ಕಾರ್ಯಕರ್ತರು ಭೈರತಿ ಬಸವರಾಜ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಮಹಾಲಕ್ಷ್ಮಿ ಲೇಔಟ್ ಸರದಿಯಾಗಿದೆ. ಅಲ್ಲದೇ, ರಾಜರಾಜೇಶ್ವರಿ ನಗರ, ಶಿವಾಜಿನಗರ, ಬಿಟಿಎಂ ಲೇಔಟ್ನಲ್ಲಿಯೂ ಕೂಡ ಅಸಮಧಾನ ವ್ಯಕ್ತವಾಗುತ್ತಿದೆ ಎಂದು ತಿಳಿದುಬಂದಿದೆ.