ETV Bharat / city

ಬೆಂಗಳೂರಲ್ಲಿ ಭೀಕರ ಅಪಘಾತ: ಬೈಕ್​ ಸವಾರನ ತಲೆಯ ಮೇಲೆ ಹರಿದ ಲಾರಿ - ಬೆಂಗಳೂರಿನಲ್ಲಿ ಅಪಘಾತ

ಲಾರಿ ಚಕ್ರವೊಂದು ಬೈಕ್​ ಹಿಂಬದಿ ಸವಾರನ ತಲೆ ಮೇಲೆ ಹರಿದು, ಸವಾರ ಮೃತಪಟ್ಟ ಘಟನೆ ಹೆಬ್ಬಾಳದ ಬಳಿ ಬೆಳ್ಳಂಬೆಳಗ್ಗೆ ಸಂಭವಿಸಿದೆ.

accident
ಅಪಘಾತ
author img

By

Published : May 22, 2021, 10:41 AM IST

ಬೆಂಗಳೂರು: ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ, ದ್ವಿಚಕ್ರ ವಾಹನದ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೆಬ್ಬಾಳ ಬಳಿ ನಡೆದಿದೆ.

ರಂಗನಾಥ್ ಮೃತ ವ್ಯಕ್ತಿ. ಮಂಜುನಾಥ್ ಮತ್ತು ರಂಗನಾಥ್ ದ್ವಿಚಕ್ರವಾಹನದಲ್ಲಿ ವೀರಣ್ಣಪಾಳ್ಯದಿಂದ ಹೆಬ್ಬಾಳದ ಕಡೆ ಹೋಗುತ್ತಿದ್ದರು. ಈ ವೇಳೆ ಮಾರ್ಗದಲ್ಲಿ ಅಪಘಾತ ಸಂಭವಿಸಿ, ಹಿಂಬದಿ ಸವಾರನ ತಲೆಯ ಮೇಲೆ ಲಾರಿ ಹರಿದಿದೆ. ಪರಿಣಾಮ ರಂಗನಾಥ್​ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಮಂಜುನಾಥ್​ಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.