ETV Bharat / city

ಅಮೆರಿಕದಲ್ಲಿ ಗಿನ್ನೆಸ್​ ದಾಖಲೆ ಪುಟ ಸೇರಿದ ಭಗವದ್ಗೀತೆ ಪಠಣ

author img

By

Published : Aug 20, 2022, 10:41 PM IST

ಅಮೆರಿಕದ ಡಲ್ಲಾಸ್​ನಲ್ಲಿ ನಡೆದ ಸಹಸ್ರಗಳ ಗೀತಾ ಪಾರಾಯಣದಲ್ಲಿ 30 ದೇಶಗಳ 2,200ಕ್ಕೂ ಅಧಿಕ ಮಂದಿ ಸಾಮೂಹಿಕವಾಗಿ ಗೀತೆಯ ಪಠಣ ಮಾಡಿದರು. ಈ ಪೈಕಿ 14 ಮಂದಿ ವಿದೇಶೀಯರು ಇದ್ದರು ಎಂಬುದು ವಿಶೇಷ.

bhagavad-gita-chanting-in-america-entered-guinness-record
ಅಮೆರಿಕದಲ್ಲಿ ಗಿನ್ನೆಸ್​ ದಾಖಲೆ ಪುಟ ಸೇರಿದ ಭಗವದ್ಗೀತೆ ಪಠಣ

ಬೆಂಗಳೂರು: ಸನಾತನ ಧರ್ಮದ ಶ್ರೇಷ್ಠ ಧರ್ಮಗ್ರಂಥ ಭಗವದ್ಗೀತೆಯ ಎಲ್ಲ 700 ಶ್ಲೋಕಗಳನ್ನು ಕಂಠಪಾಠ ಮಾಡಿ, ಅದನ್ನು 2,200ಕ್ಕೂ ಹೆಚ್ಚು ಜನರು ಸಾಮೂಹಿಕವಾಗಿ ಹೇಳುವ ಜಾಗತಿಕ ಕಾರ್ಯಕ್ರಮ ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್​ನಲ್ಲಿ ಜರುಗಿದ್ದು, ಅಪರೂಪದ ಈ ಗೀತೆ ಗಾಯನ ಗಿನ್ನೆಸ್ ದಾಖಲೆ ಪುಟ ಸೇರಿದೆ.

ಮೈಸೂರಿನ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಈ ಅಭೂತಪೂರ್ವ ಕಾರ್ಯಕ್ರಮ ನಡೆದಿದೆ. ಜಗತ್ತಿನ 30ಕ್ಕೂ ಅಧಿಕ ದೇಶಗಳ ಜನರು ಈ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಸನಾತನ ಧರ್ಮದ ವಿಶಿಷ್ಟ ಸಂದೇಶವನ್ನು ಜಗದಗಲಕ್ಕೆ ಪಸರಿಸುವ ಹಾಗೂ ಶ್ರೇಷ್ಠ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ನಿಟ್ಟಿನಲ್ಲಿ ನಡೆದಿರುವ ಪ್ರಯತ್ನದ ಭಾಗವಾಗಿ ಈ ಸಾಮೂಹಿಕ ಕಂಠಪಾಠ ಪಠಣ ನಡೆದಿದೆ.

ಪವಿತ್ರ ಧರ್ಮಗ್ರಂಥ ಭಗವದ್ಗೀತೆ. ಕೃಷ್ಣ ಪರಮಾತ್ಮ ಅರ್ಜುನನಿಗೆ ಕರ್ಮ, ಜ್ಞಾನದ ಕುರಿತಂತೆ ನೀಡಿದ ತಿಳುವಳಿಕೆಯ ಭಾಗವಾಗಿರುವ ಈ ಶ್ಲೋಕಗಳನ್ನು ಕಂಠಪಾಠ ಮಾಡುವುದು ನಂತರ ಭಗವದ್ಗೀತೆಯಲ್ಲಿ ತಿಳಿಸಿದ ಬೋಧನೆಯನ್ನೇ ಜೀವನದಲ್ಲೂ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗಿಬಿಡುತ್ತದೆ. ಮನೆ, ಮನ ಹಾಗೂ ದಿನನಿತ್ಯದ ಬದುಕಿನಲ್ಲಿ ಗೀತೆಯ ಸಾರವನ್ನು ಕಾಯಾ, ವಾಚಾ, ಮನಸಾ ಅನುಸರಿಸುವಂತಾಗಬೇಕು ಎನ್ನುವ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಆಶಯದ ಫಲವಾಗಿ ಇಂತಹದೊಂದು ಪ್ರಯತ್ನ ಅಮೆರಿಕದಲ್ಲಿ ನಡೆದಿದೆ.

5ರಿಂದ 80ರ ವಯಸ್ಸಿನ ವಯೋವೃದ್ಧರು ಭಾಗಿ: ಡಲ್ಲಾಸ್‍ನ ಅಲೆನ್ ಈವೆಂಟ್ ಸೆಂಟರ್​ನಲ್ಲಿ ಕಳೆದ ವಾರ ಸಾಮೂಹಿಕ ಗೀತಾ ಕಂಠಪಾಠ ಪಠಣ ಜರುಗಿದೆ. ಸ್ವಾಮೀಜಿ ಅವರ ಮಾರ್ಗದರ್ಶದನದಲ್ಲಿ ಭಗವದ್ಗೀತೆಯ ಎಲ್ಲ 18 ಅಧ್ಯಾಯಗಳ ಎಲ್ಲ 700 ಶ್ಲೋಕಗಳನ್ನು ಕಂಠಪಾಠ ಮಾಡಲಾಗಿತ್ತು. ಇದರ ಪ್ರಮಾಣಪತ್ರ ಪಡೆದಂತಹ 5 ವರ್ಷದಿಂದ 80 ವರ್ಷದೊಳಗಿನ 1,500 ಮಂದಿ ಹಾಗೂ ಭಗವದ್ಗೀತೆಯ ಎಲ್ಲಾ ಶ್ಲೋಕಗಳನ್ನು ಕಂಠಪಾಠ ಮಾಡಿ, ಪ್ರಮಾಣಪತ್ರ ಪಡೆಯಲು ಬಾಕಿ ಇರುವ 700ಕ್ಕೂ ಅಧಿಕ ಮಂದಿ ಈ ಮಹಾನ್ ಗೀತಾಯಜ್ಞದಲ್ಲಿ ಪಾಲ್ಗೊಂಡರು. ಜೊತೆಗೆ ಅವರ ಮನೆಯವರು, ಸ್ನೇಹಿತರ ಸಹಿತ 7 ಸಾವಿರಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶಯದಂತೆ ಪ್ರತಿ ವರ್ಷ ಗೀತಾಯಜ್ಞದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಅದು ಈಗ ಸಾವಿರದ ಗಡಿ ದಾಟಿ ಮುನ್ನಡೆದಿದೆ. ಆನ್‍ಲೈನ್ ತರಗತಿಗಳ ಮೂಲಕವೂ ಗೀತಾ ಪಾರಾಯಣವನ್ನು ಕಲಿಯುವವರ ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿರುವವರ ವೃದ್ಧಿಸುತ್ತಿದೆ. ಗೀತಾ ವಾಚನವನ್ನು ಮಾಡಿದವರಿಗೆ ಬೃಹತ್ ವೇದಿಕೆಯೊಂದನ್ನು ಒದಗಿಸಿಕೊಡಬೇಕು ಹಾಗೂ ಸಪ್ತ ಸಾಗರದಾಚೆ ಅದನ್ನು ಸಾಮೂಹಿಕ ಪಠಣದೊಂದಿಗೆ ಜಗತ್ತಿಗೆ ಉತ್ತಮ ಸಂದೇಶ ಸಾರಬೇಕೆನ್ನುವ ಸ್ವಾಮೀಜಿಯವರ ಆಶಯದಂತೆ ಈ ಕಾರ್ಯಕ್ರಮ ನಡೆಸಲಾಗಿದೆ.

14 ವಿದೇಶಿಗರಿಂದಲೂ ಗೀತಾ ಪಠಣ: ಸಹಸ್ರಗಳ ಗೀತಾ ಪಾರಾಯಣದಲ್ಲಿ 30 ದೇಶಗಳ 2,200ಕ್ಕೂ ಅಧಿಕ ಮಂದಿ ಸಾಮೂಹಿಕವಾಗಿ ಗೀತೆಯ ಪಠಣ ಮಾಡಿದರು. ಈ ಪೈಕಿ 14 ಮಂದಿ ವಿದೇಶಿಯರು ಇದ್ದರು ಎಂಬುದು ವಿಶೇಷ. ಪವಿತ್ರ ಗೀತೆಯ ಮಹತ್ವ ಅರಿತು, ಅದನ್ನು ಉಚ್ಛರಿಸುವ ಕಲೆಯನ್ನು ಕಲಿತು, ಶ್ಲೋಕಗಳನ್ನು ನಿರರ್ಗಳವಾಗಿ ಪಠಿಸಿ ಮೆಚ್ಚುಗೆಗೆ ಪಾತ್ರರಾದರು.

ಸುಮಾರು ನಾಲ್ಕು ಗಂಟೆಗಳ ಕಾಲ ಸುಶ್ರಾವ್ಯವಾಗಿ ಮೊಳಗಿದ ಗೀತಾ ಪಾರಾಯಣ ಸಭಿಕರನ್ನು ಮಾತ್ರವಲ್ಲದೆ, ನೂರಾರು ದೇಶಗಳಲ್ಲಿ ಆನ್‍ಲೈನ್ ಮೂಲಕ ನೇರವಾಗಿ ನೋಡುತ್ತಿದ್ದವರನ್ನು ಮಂತ್ರಮುಗ್ಧಗೊಳಿಸಿತು.

ಇದನ್ನೂ ಓದಿ: ಜಗತ್ತಿನ ಏಕೈಕ ಅಂಬೆಗಾಲು ಕೃಷ್ಣನ ದೇಗುಲದಲ್ಲಿ ಜನ್ಮಾಷ್ಟಮಿ ಆಚರಣೆ.. ಇಲ್ಲಿ ಹರಕೆ ಹೊತ್ತರೆ ಸಂತಾನ ಪ್ರಾಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.