ETV Bharat / city

ವೇತನ ತಾರತಮ್ಯ ನೀತಿ ವಿರುದ್ಧ ಸಿಡಿದೆದ್ದ ವೈದ್ಯರು: ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ - ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ

ಕಳೆದ ಹತ್ತು ವರ್ಷದಿಂದ ಯಾವುದೇ ರೀತಿಯ ವೇತನ ಪರಿಷ್ಕರಣೆ ಆಗಿಲ್ಲ. ಎಷ್ಟೇ ಮನವಿ ಮಾಡಿದರೂ ವೇತನ ಪರಿಷ್ಕರಣೆ ನಿರ್ಲಕ್ಷಿಸಿದ ಕಾರಣ ಸರ್ಕಾರಿ ಆಯುಷ್ ವೈದ್ಯರು, ಹೌಸ್ ಸರ್ಜನ್ ಹಾಗೂ ಉನ್ನತ ಶಿಕ್ಷಣ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ.

ಆಯುಷ್ ವೈದ್ಯರಿಂದ ಪ್ರತಿಭಟನೆ
ಆಯುಷ್ ವೈದ್ಯರಿಂದ ಪ್ರತಿಭಟನೆ
author img

By

Published : May 23, 2020, 11:20 AM IST

ಬೆಂಗಳೂರು: ವೇತನ ತಾರತಮ್ಯ ನೀತಿ ವಿರೋಧಿಸಿ ಸರ್ಕಾರಿ ಆಯುಷ್ ವೈದ್ಯರು, ಹೌಸ್ ಸರ್ಜನ್ ಹಾಗೂ ಉನ್ನತ ಶಿಕ್ಷಣ ವಿದ್ಯಾರ್ಥಿಗಳು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ.

ಆಯುಷ್ ವೈದ್ಯರಿಂದ ಪ್ರತಿಭಟನೆ

ಕಳೆದ ಹತ್ತು ವರ್ಷದಿಂದ ಯಾವುದೇ ರೀತಿಯ ವೇತನ ಪರಿಷ್ಕರಣೆ ಆಗಿಲ್ಲ. ಆದರೆ, ಅಲೋಪತಿ ಪಿಜಿ ಹಾಗೂ ಹೌಸ್ ಸರ್ಜನ್​ಗೆ ಕಳೆದ 5 ವರ್ಷದಲ್ಲಿ ಎರಡನೇ ಬಾರಿಗೆ ಶಿಷ್ಯವೇತನವನ್ನು ಸರ್ಕಾರ ಹೆಚ್ಚಿಸಿದೆ. ಎಷ್ಟೇ ಮನವಿ ಮಾಡಿದರೂ ವೇತನ ಪರಿಷ್ಕರಣೆ ನಿರ್ಲಕ್ಷಿಸಿದ ಕಾರಣ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧಾರ ಮಾಡಲಾಗಿದೆ. ಎಲ್ಲಾ ರೀತಿಯ ಸೇವೆಯನ್ನು ನಿಲ್ಲಿಸಿ, ಕರ್ತವ್ಯಕ್ಕೆ ಹಾಜರಾಗದೇ ಇರಲು ನಿರ್ಧರಿಸಲಾಗಿದ್ದು, ನಾವೆಲ್ಲಾ ಪ್ರಾಣದ ಹಂಗು ತೊರೆದು ಕೊರೊನಾ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ವೈದ್ಯರು ಆಕ್ರೋಶ ವ್ಯಕ್ತಪಡಿಸಿದರು.

ಆಯುಷ್ ವೈದ್ಯರಿಂದ ಪ್ರತಿಭಟನೆ
ಆಯುಷ್ ವೈದ್ಯರಿಂದ ಪ್ರತಿಭಟನೆ

ಒಟ್ಟಿನಲ್ಲಿ ಶಿಷ್ಯವೇತನ ಹೆಚ್ಚಿಸುವಲ್ಲಿ ಸರ್ಕಾರ ನಿರ್ಲಕ್ಷಿಸಿರುವ ಹಿನ್ನೆಲೆಯಿಂದ ಮುಷ್ಕರ ಆರಂಭವಾಗಲಿದೆ. ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವವರೆಗೂ ವೈದ್ಯ ವಿದ್ಯಾರ್ಥಿಗಳೂ ಕೂಡ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.