ಬೆಂಗಳೂರು: ನಗರದ ಕಂಟೇನ್ಮೆಂಟ್ ಝೋನ್ಗಳಾದ ಶಿವಾಜಿನಗರ ಹಾಗೂ ಮಂಗಮ್ಮನಪಾಳ್ಯ ವಾರ್ಡ್ ನಲ್ಲಿ ಇದೀಗ ಮತ್ತೆ ಕೊರೊನಾ ಅಟ್ಟಹಾಸ ಮೆರೆದಿದೆ. ಮಧ್ಯಾಹ್ನದವರೆಗೆ ನಗರದಲ್ಲಿ ಒಟ್ಟು 13 ಜನರಲ್ಲಿ ಕೊರೊನಾ ಸೋಂಕು ಇರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ.
![ಆರೋಗ್ಯ ಇಲಾಖೆ ಮಾಹಿತಿ](https://etvbharatimages.akamaized.net/etvbharat/prod-images/7207409_677_7207409_1589546163043.png)
ಇನ್ನು, ಶಿವಾಜಿನಗರ ವಾರ್ಡ್ನಲ್ಲೂ ಸಹ ಕೋವಿಡ್-19 ಭೀತಿ ಹೆಚ್ಚಾಗಿದೆ. ಶಿವಾಜಿನಗರದ ರಿಜೆಂಟ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಹೌಸ್ ಕೀಪರ್ಗೆ (653 ನೇ ಸಂಖ್ಯೆಯ ವ್ಯಕ್ತಿಗೆ) ಸೋಂಕು ಬಂದು ಆತನಿಂದ ನಾಲ್ವರು ಪ್ರಥಮ ಸಂಪರ್ಕಿತರಿಗೆ ಕೊರೊನಾ ಹಬ್ಬಿತ್ತು. ಇದೀಗ ಬೆಚ್ಚಿ ಬೀಳಿಸಿರುವ ಸಂಗತಿಯೆಂದ್ರೆ ಈತನೊಂದಿಗೆ ದ್ವಿತೀಯ ಸಂಪರ್ಕದಲ್ಲಿದ್ದ 11 ಜನರಿಗೂ ಕೊರೊನಾ ತಗುಲಿದೆ. ಇವರೆಲ್ಲ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಯುವಕರು. ಅಂಗಡಿ, ಹೋಟೆಲ್ಗಳಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿಯೂ ಕೆಲಸ ಮಾಡ್ತಿದ್ರು.
ಪ್ರಥಮ ಸೋಂಕಿತನನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಆ ಕಟ್ಟಡದ 73 ಜನರನ್ನೂ ಕ್ವಾರಂಟೈನ್ ಮಾಡಲಾಗಿತ್ತು. ಜೊತೆಗೆ ರಿಜೆಂಟ್ ಹೋಟೆಲ್ನಲ್ಲಿದ್ದವರೂ ಸೇರಿ ಒಟ್ಟು 105 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದರಲ್ಲಿ ಈಗ ಹನ್ನೊಂದು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನಷ್ಟು ಜನರ ಗಂಟಲು ದ್ರವದ ಮಾದರಿಯನ್ನು ಪರೀಕ್ಷಗೆ ಕಳಿಸಲಾಗಿದ್ದು, ವರದಿ ಬರುವುದು ಬಾಕಿ ಇದೆ ಎಂದು ಪೂರ್ವ ವಿಭಾಗದ ಬಿಬಿಎಂಪಿ ಆರೋಗ್ಯಾಧಿಕಾರಿ ಡಾ. ಸಿದ್ದಪ್ಪಾಜಿ ತಿಳಿಸಿದ್ದಾರೆ.
ಶಿವಾಜಿನಗರ ಕೊರೊನಾ ಸೋಂಕಿತರ ವಿವರ:
P-1017- 21 ವರ್ಷದ ಪುರುಷ
P-1018- 21 ವರ್ಷದ ಪುರುಷ
P-1019- 22 ವರ್ಷದ ಪುರುಷ
P-1020- 28 ವರ್ಷದ ಪುರುಷ
P-1021- 15 ವರ್ಷದ ಪುರುಷ
P-1022- 27 ವರ್ಷದ ಪುರುಷ
P-1023- 27 ವರ್ಷದ ಪುರುಷ
P-1024- 33 ವರ್ಷದ ಪುರುಷ
P-1025- 28 ವರ್ಷದ ಪುರುಷ
P-1026- 30 ವರ್ಷದ ಪುರುಷ
P-1027- 21 ವರ್ಷದ ಪುರುಷ
ಮಂಗಮ್ಮನಪಾಳ್ಯದ ಮದೀನಾ ನಗರದ ನಿವಾಸಿಯಾಗಿದ್ದ 911 ನೇ ಸಂಖ್ಯೆಯ ಸೋಂಕಿತನ ಸಂಪರ್ಕದಿಂದ ಆತನ ಹೆಂಡತಿ ಮತ್ತು ಮಗುವಿಗೂ ಕೊರೊನಾ ಹರಡಿದೆ. ಆರು ವರ್ಷದ ಹೆಣ್ಣು ಮಗು ಹಾಗೂ 32 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇವರಿಬ್ಬರೂ ಕ್ವಾರಂಟೈನ್ನಲ್ಲಿ ಇದ್ದರು. ಆದ್ರೆ ಸೋಂಕು ಪರೀಕ್ಷೆ ನಡೆಸಿದ ವೇಳೆ ದೃಢಪಟ್ಟಿದೆ. ಕೇಸ್ ನಂ. 911 ವ್ಯಕ್ತಿ ಗೂಡ್ಸ್ ಆಟೋ ಚಾಲಕನಾಗಿದ್ದು, ಮಂಗಮ್ಮನಪಾಳ್ಯ ವಾರ್ಡ್ ನಲ್ಲಿ (911 ರ ಸಂಪರ್ಕದಿಂದ) P-988, 6 ವರ್ಷದ ಹೆಣ್ಣು ಮಗು ಹಾಗೂ P-989, 32 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.