ETV Bharat / city

ಬೆಂಗಳೂರು ಟೆಕ್​ ಸಮ್ಮಿಟ್​ - 2021: ವೆಂಕಯ್ಯ ನಾಯ್ಡು, ಬೊಮ್ಮಾಯಿ ಭಾಷಣ, ಪುನೀತ್​ಗೆ ಸಂತಾಪ

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ಮುಖ್ಯ ಉದ್ದೇಶ ಜನರ ಸಂತೋಷ ವೃದ್ಧಿ, ಕೃಷಿ ನಮ್ಮ ದೇಶದ ಮೂಲ ಸಂಸ್ಕೃತಿ. ದೇಶದ ಬಹುಪಾಲು ಜನರು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಸಾಕಷ್ಟು ನವೀನತೆ ಉದ್ಯಮ ಕ್ಷೇತ್ರದಲ್ಲಿ ಆಗುತ್ತಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.

bengaluru-tech-summit-2021-venkaiah-naidu-and-cm-bommai-speech
ಬೆಂಗಳೂರು ಟೆಕ್​ ಸಮ್ಮಿಟ್​-2021: ವೆಂಕಯ್ಯನಾಯ್ಡು, ಬೊಮ್ಮಾಯಿ ಭಾಷಣ, ಪುನೀತ್​ಗೆ ಸಂತಾಪ
author img

By

Published : Nov 17, 2021, 12:42 PM IST

Updated : Nov 17, 2021, 1:18 PM IST

ಬೆಂಗಳೂರು: ಉದ್ಯಮ ಕ್ಷೇತ್ರದಲ್ಲಿ ನವ ಚಿಂತನೆ ಅಳವಡಿಸಿಕೊಳ್ಳಬೇಕು. ಇದರಿಂದ ಐಟಿ - ಬಿಟಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಬೆಂಗಳೂರು ತಂತ್ರಜ್ಞಾನ ಶೃಂಗ (ಬಿಟಿಎಸ್ 2021) ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

ಬೆಂಗಳೂರು ತಂತ್ರಜ್ಞಾನ ಶೃಂಗ (Bengaluru Tech Summit) ಉದ್ಘಾಟನೆ ಮಾಡಿದ ವೆಂಕಯ್ಯನಾಯ್ಡು (Venkaiah Naidu) ಇತ್ತೀಚಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಇದರಿಂದ ಪಾಠ ಕಲಿತು ಎಲ್ಲ ಕ್ಷೇತ್ರಗಳು ಸುಧಾರಣೆಗೊಳ್ಳಬೇಕು. ಈ ನಿಟ್ಟಿನಲ್ಲಿ ಬಿಟಿಎಸ್ 2021(BTS-2021) ಒಂದು ಅತ್ಯುತ್ತಮ ವೇದಿಕೆಯಾಗಿದೆ. ಜಗತ್ತಿನ ಎಲ್ಲ ನಾಯಕರು ಒಂದಾಗುವ ಅವಕಾಶ ಇದೆ ಎಂದರು.

ವಿಶ್ವದ ಎಲ್ಲ ಅತಿದೊಡ್ಡ ಸಂಸ್ಥೆಗಳ ನಾಯಕತ್ವದಲ್ಲಿ ಭಾರತೀಯರಿದ್ದಾರೆ. ಇದು ಭಾರತೀಯರ ಜ್ಞಾನ, ಶ್ರಮವನ್ನು ಸಾರಿ ಹೇಳುತ್ತಿದೆ. ಮುಂಬರುವ ದಿನಗಳಲ್ಲಿ ಜ್ಞಾನಾರ್ಜನೆ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದ‌ ಅವರು, ಇಡೀ ದೇಶ ಡಿಜಿಟಲ್ ಇಂಡಿಯಾದತ್ತ ಮುನ್ನುಗ್ಗುತ್ತಿದೆ. ಇದರಿಂದ ನೇರ ಹೂಡಿಕೆಯಲ್ಲಿ ಹೆಚ್ಚು ಪ್ರಗತಿ ಆಗುತ್ತಿದೆ. ಒಟ್ಟಿನಲ್ಲಿ ತಂತ್ರಜ್ಞಾನ ಜನ ಸಾಮಾನ್ಯನಿಗೆ ತಲುಪುವುದು ಮುಖ್ಯವಾಗಿದೆ. ಭಾರತ ಈ ಹಾದಿಯಲ್ಲಿ ನಡೆಯುತ್ತಿದೆ ಎಂದರು.

ಬೆಂಗಳೂರು ಟೆಕ್​ ಸಮ್ಮಿಟ್​ನಲ್ಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

ಐಟಿ-ಬಿಟಿ ಮುಖ್ಯ ಉದ್ದೇಶ ಜನರ ಸಂತೋಷ ವೃದ್ಧಿ, ಕೃಷಿ ನಮ್ಮ ದೇಶದ ಮೂಲ ಸಂಸ್ಕೃತಿ. ದೇಶದ ಬಹುಪಾಲು ಜನರು ಕೃಷಿ ಮೇಲೆ ಅವಲಂಬಿಸಿದ್ದಾರೆ. ಸಾಕಷ್ಟು ನವೀನತೆ ಉದ್ಯಮ ಕ್ಷೇತ್ರದಲ್ಲಿ ಆಗುತ್ತಿದೆ. ರಿಫಾರ್ಮ್, ಪರ್ಫಾರ್ಮ್, ಟ್ರಾನ್ಸ್​ಫಾರ್ಮ್​ (Reform, Perform, Transform) ಪ್ರಧಾನಿ ಮೋದಿಯವರ (Prime minister Narendra Modi) ಮೂಲ ಮಂತ್ರವಾಗಿದೆ. ಈ ಮೂರು ದಿನಗಳ ಶೃಂಗಸಭೆಯಲ್ಲಿ ಜನ ಸಾಮಾನ್ಯರಿಗೆ ಹೆಚ್ಚು ಉಪಯೋಗವಾಗುವ ವಿಚಾರಗಳನ್ನು ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಬೆಂಗಳೂರು ತಂತ್ರಜ್ಞಾನದ ಹಬ್: ಬಸವರಾಜ ಬೊಮ್ಮಯಿ

ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಮಾತನಾಡಿ ತಂತ್ರಜ್ಞಾನದಲ್ಲಿ ರಾಜ್ಯ ಬಹಳ ಮುಂದುವರೆದಿದೆ. ಈ ವಲಯದಲ್ಲಿ ಮಹತ್ತರ ಬದಲಾವಣೆಗಳು ಇನ್ನೂ ಮುಂದೆ ಆಗಬೇಕಿದೆ. ಯಾವುದೇ ಆವಿಷ್ಕಾರಗಳು ಒಬ್ಬ ಮನುಷ್ಯನಿಂದಲೇ ಆರಂಭವಾಗುವುದು. ನಂತರ ಅದು ಜಗತ್ತಿಗೆ ನೆರವಾಗುತ್ತದೆ. ಜಗತ್ತು ಆ ತಂತ್ರಜ್ಞಾನವನ್ನು ಬಳಸುತ್ತದೆ. ನಮ್ಮ ರಾಜ್ಯದಲ್ಲಿ ಬೆಂಗಳೂರು ತಂತ್ರಜ್ಞಾನದ ಹಬ್ ಆಗಿದೆ ಎಂದು ತಿಳಿಸಿದರು.

ಇಲ್ಲಿ ಅಂಥ ಆವಿಷ್ಕಾರ ಮಾಡುವ ಮಾನವ ಸಂಪನ್ಮೂಲ ಇದೆ. ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ಇನ್ನಷ್ಟು ಯಶಸ್ಸಾಗುವಂತೆ ಮಾಡುವ ಗುರಿ ಹೊಂದಿದ್ದೇವೆ. ರಾಜ್ಯದ ಪಾಲಿಸಿಗಳು ದೂರದೃಷ್ಟಿಯುಳ್ಳದ್ದಾಗಿವೆ, ಕರ್ನಾಟಕವನ್ನು ತಂತ್ರಜ್ಞಾನದಲ್ಲಿ ನಾಯಕ ರಾಜ್ಯ ಎನ್ನಬಹುದು. ಕಿರಣ್ ಮುಜುಂದಾರ್ ಶಾ, ಕ್ರಿಸ್​ ಗೋಪಾಲಕೃಷ್ಣ ಥರದ ಹಲವು ತಂತ್ರಜ್ಞಾನ ಸಾಧಕರು ನಮ್ಮಲ್ಲಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಪುನೀತ್ ರಾಜಕುಮಾರ್​ಗೆ ಸಂತಾಪ

ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ (Puneet Raj kumar) ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಿದರು. ಪುನೀತ್ ರಾಜ್​ಕುಮಾರ್ ಮನುಷ್ಯತ್ವ ಹೊಂದಿದ್ದ ಉತ್ತಮ ನಟ ಎಂದರು.

ಇದನ್ನೂ ಓದಿ: ದಿಢೀರ್​ ಕಾರ್​​ನ ಬಾಗಿಲು ತೆರೆದ ಚಾಲಕ.. ಟ್ರಕ್​ನಡಿ ಸಿಲುಕಿ ಸ್ಥಳದಲ್ಲೇ ಹಾರಿಹೋಯ್ತು ಬೈಕ್ ಸವಾರನ ಪ್ರಾಣ - Video

Last Updated : Nov 17, 2021, 1:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.