ETV Bharat / city

ಬೆಂಗಳೂರಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಮೇಲೆ ಅಟ್ಯಾಕ್: ಬರ್ಬರ ಹತ್ಯೆ - ಬೆಂಗಳೂರಲ್ಲಿ ರೌಡಿಶೀಟರ್ ಕೊಲೆ

ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಮೇಲೆ ವಿರೋಧಿ ಗ್ಯಾಂಗ್ ದಾಳಿ ಮಾಡಿ, ಕೊಚ್ಚಿ ಕೊಲೆ ಮಾಡಿದೆ.

rowdy kill
ರೌಡಿ ಹತ್ಯೆ
author img

By

Published : Feb 16, 2021, 11:41 PM IST

ಬೆಂಗಳೂರು: ಹಳೆ ದ್ವೇಷ ಶಂಕೆ ಮೇರೆಗೆ ಜ್ಞಾನಭಾರತಿ ಪೊಲೀಸ್ ಠಾಣೆಯ ರೌಡಿಶೀಟರ್​ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಅರುಣ್ ಹತ್ಯೆಯಾದ ರೌಡಿಶೀಟರ್. ವಿವಿಧ ಅಪರಾಧ ಕೃತ್ಯಗಳಲ್ಲಿ ಈತ ಭಾಗಿಯಾಗಿದ್ದ. ವಿರೋಧಿ ಗುಂಪು ಈತನ ಹತ್ಯೆಗೆ ಸಂಚು ರೂಪಿಸಿತ್ತು. ಹಳೆ‌ ದ್ವೇಷದ ಶಂಕೆ ಮೇರೆಗೆ ಉಲ್ಲಾಳ ಉಪನಗರದ ಮುನೇಶ್ವರ ದೇವಾಲಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ರೌಡಿ ಕಾರ್ತಿಕ್ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಅರುಣ್​ನನ್ನು ಕೊಲೆ‌ ಮಾಡಿ ಎಸ್ಕೇಪ್ ಆಗಿದೆ ಎಂದು ತಿಳಿದುಬಂದಿದೆ.

ತೀವ್ರ ರಕ್ತಸ್ರಾವವಾಗಿ ಅರುಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.‌ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದು ಪರಿಶೀಲಿಸಿದ ಜ್ಞಾನಭಾರತಿ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.