ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಸ್ಥಳ ಮಹಜರಿಗೆ ಪೊಲೀಸರು ಕರೆತಂದಿದ್ದಾರೆ.
ಕಾವಲ್ ಬೈರಸಂದ್ರ ಬಳಿ ಇರುವ ಅಖಂಡ ಶ್ರಿನಿವಾಸ್ ಹಾಗು ಸಹೋದರಿ ಮಗ ನವೀನ್ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಬೆಂಕಿ ಹಚ್ವಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನ ಆರೋಪಿಗಳನ್ನು ವಿಶೇಷ ಪೊಲೀಸ್ ತಂಡ ಬಂಧಿಸಿತ್ತು. ಬಂಧನದ ಬಳಿಕ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಕಾರಣ ಘಟನಾ ಸ್ಥಳಕ್ಕೆ ಬಿಎಂಟಿಸಿ ಬಸ್‌ನಲ್ಲಿ ಘಟನಾ ಸ್ಥಳಕ್ಕೆ ಪೊಲೀಸರು ಕರೆತಂದಿದ್ದಾರೆ.
ಈ ಆರೋಪಿಗಳು ಶಾಸಕ ಅಖಂಡ ಶ್ರೀನಿವಾಸ್ ಹಾಗೂ ನವೀನ್ ಮನೆ ಮೇಲೆ ದಾಳಿ ಮಾಡುವ ಮುನ್ನ ಗೋಡೌನ್‌ನಲ್ಲಿ ಗುಂಪು ಸೇರಿ ಸಂಚು ರೂಪಿಸಿದ್ದರು. ಗಲಭೆ ಬಳಿಕ ಮಾರಕಾಸ್ತ್ರಗಳನ್ನು ಗೋಡಾನ್‌ನ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದರು. ಇದೀಗ ಪೊಲೀಸರು ಆರೋಪಿಗಳೊಂದಿಗೆ ಮಾರಕಾಸ್ತ್ರಗಳನ್ನು ತಂದು ಸ್ಥಳ ಮಹಜರು ಮಾಡಿದ್ದಾರೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಿದ್ದಾರೆ.