ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಗೆ ದೇಶದ ಜನರು ತುದಿಗಾಲಲ್ಲಿ ನಿಂತಿದ್ದಾರೆ. ವಿಶೇಷ ದಿನಕ್ಕೆ ಬೆಂಗಳೂರು ಪೊಲೀಸರೂ ಸಜ್ಜಾಗಿದ್ದು ಈ ಸಲ ಸ್ವಾತಂತ್ರ್ಯ ದಿನದ ಸಂಭ್ರಮದ ಜೊತೆಗೆ ಒಂದಷ್ಟು ಒತ್ತಡ ಕೂಡಾ ಹೆಚ್ಚಲಿದೆ. ಮಾಣಿಕ್ ಷಾ ಮೈದಾನದೊಂದಿಗೆ ನಗರದ ಬೇರೆ ಬೇರೆ ಕಾರ್ಯಕ್ರಮಗಳಿಗೂ ಪೊಲೀಸರು ಭದ್ರತೆ ಒದಗಿಸಬೇಕಿದೆ.
ಮಾಣಿಕ್ ಷಾ ಗ್ರೌಂಡ್, ಈದ್ಗಾ ಮೈದಾನಕ್ಕೂ ಭದ್ರತೆ: ಮಾಣಿಕ್ ಷಾ ಗ್ರೌಂಡ್ಗೆ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು ನಿಯೋಜನೆಯಾಗಿದ್ದಾರೆ. ಹೆಚ್ಚುವರಿ ಆಯುಕ್ತರು 1, ಡಿಸಿಪಿಗಳು 10, ಎಸಿಪಿಗಳು 19, ಇನ್ಸ್ಪೆಕ್ಟರ್ 50, ಪಿಎಸ್ಐ 100, ಮಹಿಳಾ ಪಿಎಸ್ಐ 15, ಎಎಸ್ಐ 80, ಕಾನ್ಸ್ಟೆಬಲ್ 650, ಗಸ್ತಿನಲ್ಲಿರುವ ಪೊಲೀಸರು 150, ಕೆಎಸ್ಆರ್ಪಿ 10 ತುಕಡಿ, ಕ್ಯುಆರ್ಟಿ 1, ಡಿ ಸ್ವ್ಯಾಟ್ 1, ಆರ್ಎಎಫ್ 1. ಇದರ ಜೊತೆಗೆ ಈದ್ಗಾ ಮೈದಾನದ ಭದ್ರತೆ ಕೂಡ ಹೆಚ್ಚುವರಿಯಾಗಿದೆ.
ಇಷ್ಟೇ ಅಲ್ಲದೆ ಕಾಂಗ್ರೆಸ್ ಅಜಾದಿ ಯಾತ್ರೆ ಹಮ್ಮಿಕೊಂಡಿದ್ದು, ಆರು ಕಿ.ಮೀ ಯಾತ್ರೆಗೂ ಪೊಲೀಸರು ಭದ್ರತೆ ಮಾಡಿಕೊಂಡಿದ್ದಾರೆ. 4 ಡಿಸಿಪಿಗಳು, 15 ಎಸಿಪಿಗಳು, 20 ಇನ್ಸ್ಪೆಕ್ಟರ್, 24 ಪಿಎಸ್ಐ, 3 ಮಹಿಳಾ ಪಿಎಸ್ಐ, 15 ಎಎಸ್ಐ, 500 ಕಾನ್ಸ್ಟೆಬಲ್, 5 ಕೆಎಸ್ಆರ್ಪಿ ತುಕಡಿ, 6 ಸಿಎಆರ್ ತುಕಡಿ ಭದ್ರತೆಗೆ ನಿಯೋಜನೆಯಾಗಿದೆ.
ಬಿಜೆಪಿ ಕಾರ್ಯಕ್ರಮಕ್ಕೆ 300 ಪೊಲೀಸರಿಂದ ಭದ್ರತೆ ಮಾಡಿಕೊಂಡಿದೆ. ಆಗಸ್ಟ್ 15ರಂದು ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದ ಕೊನೇ ದಿನವಾಗಿದ್ದು ಸಾಕಷ್ಟು ಜನರ ಆಗಮನದ ನಿರೀಕ್ಷೆಯಿದೆ. ಹೀಗಾಗಿ ಅಲ್ಲಿಯೂ ಪೊಲೀಸರು ಭದ್ರತೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಆದ್ಧೂರಿ ಸ್ವಾತಂತ್ರ್ಯ ದಿನಾಚರಣೆಗೆ ರಾಜಧಾನಿ ಸಿದ್ಧ: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್