ETV Bharat / city

ಲಂಚಕ್ಕೆ ಬೇಡಿಕೆ ಆರೋಪ: ವಾಣಿಜ್ಯ ಇಲಾಖೆಯ ಸಹಾಯಕ ಆಯುಕ್ತೆ ಎಸಿಬಿ ಬಲೆಗೆ

author img

By

Published : May 7, 2022, 10:46 AM IST

ಎಲೆಕ್ಟ್ರಿಕಲ್‌ ಮತ್ತು ಹಾರ್ಡ್‌ವೇರ್‌ ಉದ್ಯಮಿಯೊಬ್ಬರಿಗೆ ಜಿಎಸ್​​ಟಿ ನೋಂದಣಿ ಪ್ರಮಾಣಪತ್ರ ನೀಡಲು 3 ಸಾವಿರ ರೂ. ಲಂಚ ಪಡೆಯುತ್ತಿದ್ದ ಇಂದಿರಾ ನಗರ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯ ಸಹಾಯಕ ಆಯುಕ್ತೆ ಜಿ.ಸಿ. ಪ್ರಿಯಾಂಕಾ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ.

Commercial tax officer Priyanka GC
ಸಹಾಯಕ ಆಯುಕ್ತೆ ಜಿ.ಸಿ. ಪ್ರಿಯಾಂಕಾ ಬಂಧಿತ ಆರೋಪಿ

ಬೆಂಗಳೂರು: ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಪ್ರಮಾಣ ಪತ್ರದಲ್ಲಿನ ತಪ್ಪು ತಿದ್ದಲು 3 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆಯನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ. ಇಂದಿರಾ ನಗರ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯ ಸಹಾಯಕ ಆಯುಕ್ತೆ ಜಿ.ಸಿ. ಪ್ರಿಯಾಂಕಾ ಬಂಧಿತ ಆರೋಪಿ.

ಮಂಜುನಾಥ ನಗರದ ಕಲ್ಕೆರೆಯ ಎಲೆಕ್ಟಿಕಲ್ ಮತ್ತು ಹಾರ್ಡ್​ವೇರ್​​ ಉದ್ಯಮಿಯೊಬ್ಬರು ತನ್ನ ಇಲೆಕ್ಟ್ರಿಕ್ ಅಂಗಡಿಗೆ ಜಿಎಸ್‌ಟಿ ಪ್ರಮಾಣ ಪತ್ರಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಪಿನ್ ಕೋಡ್ ತಪ್ಪಾದ ಕಾರಣ ಪರಿಷ್ಕೃತ ಮನವಿ ಸಲ್ಲಿಸಿದ್ದರು. ಅರ್ಜಿಯಲ್ಲಿನ ತಪ್ಪು ಸರಿಪಡಿಸಿ, ಪ್ರಮಾಣಪತ್ರ ನೀಡಲು ವಾಣಿಜ್ಯ ಆಯುಕ್ತೆ ಪ್ರಿಯಾಂಕಾ 10 ಸಾವಿರ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಚೌಕಾಸಿ ಮಾಡಿದಾಗ 3 ಸಾವಿರ ರೂ. ನೀಡಿದರೆ ಪ್ರಮಾಣಪತ್ರ ಕೊಡುವುದಾಗಿ ತಿಳಿಸಿದ್ದರು ಎನ್ನಲಾಗ್ತಿದೆ.

ಈ ಕುರಿತು ಅರ್ಜಿದಾರರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡಿರುವ ಎಸಿಬಿ ಅಧಿಕಾರಿಗಳು ಇಂದಿರಾ ನಗರದ ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ಪ್ರಿಯಾಂಕಾರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಭಾರಿ ಅಗ್ನಿ ಅವಘಡ: ಏಳು ಮಂದಿ ಸಜೀವ ದಹನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.