ETV Bharat / city

ಐಎಂಎ ಬಹುಕೋಟಿ ವಂಚನೆ ಪ್ರಕರಣ: ವಿಚಾರಣೆಗೆ ಹಾಜರಾಗಲು ಸಮಯಾವಕಾಶ ಕೇಳಿದ ಬೇಗ್ - ಅಪರಾಧ ವಿಭಾಗದ ಡಿಸಿಪಿ ಗಿರೀಶ್​, ಐಎಂಎ ಬಕೋಟಿ ವಂಚನೆ ಪ್ರಕರಣ, ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್, ಎಸ್ಐಟಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗಲು 15 ದಿನ ಕಾಲಾವಕಾಶ, ಈಟೀವಿ ಭಾರತ್​

ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ವಿಚಾರಣೆಗೆ ಇಂದು ಹಾಜರಾಗಬೇಕಿದ್ದ ಶಾಸಕ ರೋಷನ್​ ಬೇಗ್​ ಅವರು ಹಜ್​​ ಯಾತ್ರೆ ಹಾಗೂ ಕೆಲ ವೈಯಕ್ತಿಕ ಕಾರಣಗಳಿಂದ ವಿಚಾರಣೆಗೆ ಹಾಜರಾಗಲು 15 ದಿನ ಕಾಲಾವಕಾಶ ನೀಡಬೇಕೆಂದು ಡಿಸಿಪಿ ಗಿರೀಶ್​ ಅವರಿಗೆ ಮನವಿ ಮಾಡಿದ್ದಾರೆ.

ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್
author img

By

Published : Jul 11, 2019, 11:38 AM IST

ಬೆಂಗಳೂರು: ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ವಿಚಾರಣೆಗೆ ಹಾಜರಾಗಲು ಶಾಸಕ ರೋಷನ್ ಬೇಗ್​ ಸಮಯಾವಕಾಶ ಕೇಳಿದ್ದಾರೆ.

ಹಜ್​​ ಯಾತ್ರೆ ಹಾಗೂ ಕೆಲ ವೈಯಕ್ತಿಕ ಕಾರಣಗಳಿಂದಾಗಿ ಇಂದು ವಿಚಾರಣೆಗೆ ಹಾಜರಾಗಲು ಆಗಲ್ಲ. ಹೀಗಾಗಿ 15 ದಿನ ಕಾಲಾವಕಾಶ ನೀಡಬೇಕು ಎಂದು ಅಪರಾಧ ವಿಭಾಗದ ಡಿಸಿಪಿ ಗಿರೀಶ್‌ ಅವರಿಗೆ ಮನವಿ ಮಾಡಿದ್ದಾರೆ.

ಒಂದೆಡೆ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಹೀಗಾಗಿ ಎಸ್​ಐಟಿ ವಿಚಾರಣಗೆ ರೋಷನ್ ಬೇಗ್ ಹಾಜರಾಗುತ್ತಾರಾ, ಇಲ್ಲವಾ ಎನ್ನುವ ಪ್ರಶ್ನೆ ಕೂಡ ಎದ್ದಿತ್ತು. ಇದೀಗ ವೈಯಕ್ತಿಕ ಕಾರಣ ಹೇಳಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ.

ಶಿವಾಜಿನಗರ ಕ್ಷೇತ್ರದ ಶಾಸಕನಾಗಿರುವ ರೋಷನ್ ಬೇಗ್ ಐಎಂಎ ಪ್ರಕರಣದಲ್ಲಿ ಭಾಗಿಯಾಗಿಯಾಗಿದ್ದಾರೆಂದು ಐಎಂಎ ಆರೋಪಿ ಮನ್ಸೂರ್ ಆಡಿಯೋ ಮತ್ತು ವಿಡಿಯೋದಲ್ಲಿ ತಿಳಿಸಿದ್ದರು. ಇದನ್ನಾಧರಿಸಿ ಇಂದು ಬೆಳಗ್ಗೆ 11 ಗಂಟೆಗೆ ಸಿಒಡಿ ಕಚೇರಿಗೆ ರೋಷನ್ ಬೇಗ್ ಬರಬೇಕೆಂದು ಎಸ್ಐಟಿ ಅಧಿಕಾರಿಗಳು ಸೂಚನೆ ನೀಡಿದ್ದರು.

Intro:IMA ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣ
ವಿಚಾರಣೆಗೆ ಸಮಾಯವಾಕಾಶ ಕೇಳಿದ ಬೇಗ್

ಬುಲೆಟಿನ್.

IMA ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ
ಎಸ್ ಐ ಟಿ ಮುಂದೆ ರೋಷನ್ ಬೇಗ್ ಹಾಜರಾಗಲು ಸಮಾಯವಾಕಾಶ ಕೇಳಿದ್ದಾರೆ. ಹಜ್ ಯಾತ್ರೆ ಹಾಗೂ ಕೆಲ ವಯಕ್ತಿಕ ವಿಚಾರಗಳು ಇರುವ ಕಾರಣ ಇಂದು ವಿಚಾರಣೆಗೆ ಹಾಜರಾಗಲು ಆಗಲ್ಲ ಹೀಗಾಗಿ 15ದಿನ ಸಮಾಯವಾಕಾಶ ಬೇಕು ಎಂದು ಡಿಸಿಪಿ ಗಿರೀಶ್ ಅವ್ರಿಗೆ ಮನವಿ ಮಾಡಿದ್ದಾರೆ.

ಒಂದೆಡೆ ರಾಜ್ಯ ರಾಜಾಕಾರಣದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಹೀಗಾಗಿ ಎಸ್ ಐ ಟಿ ಮುಂದೆ ರೋಷನ್ ಬೇಗ್ ಹಾಜರಾಗ್ತಾರಾ ಅನ್ನೋ ಪ್ರಶ್ನೆ ಕೂಡ ಎದ್ದಿತ್ತು. ಇದೀಗ ವಯಕ್ತಿಕ ಕಾರಣ ಹೇಳಿ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ..

ಶಿವಾಜಿನಗರ ಕ್ಷೇತ್ರದ ಶಾಸಕನಾಗಿದ್ದು‌ ರೋಷನ್ ಬೇಗ್ ಐಎಂಎ ಪ್ರಕರಣದಲ್ಲಿ ಭಾಗಿಯಾಗಿಯಾಗಿದ್ದಾರೆಂದು ಐಎಂಎ ಆರೋಪಿ ಮನ್ಸೂರ್ ಆಡಿಯೋ ವಿಡಿಯೋದಲ್ಲಿ ತಿಳಿಸಿದ್ರು. ಹೀಗಾಗಿ
ಇಂದು ಬೆಳಗ್ಗೆ 11 ಗಂಟೆಗೆ ಸಿಓಡಿ ಕಚೇರಿಗೆ ರೋಷನ್ ಬೇಗ್ ಬರುವಂತೆ ಎಸ್ಐಟಿ ಅಧಿಕಾರಿಗಳು ಸೂಚನೆನೀಡಿದ್ರು.Body:KN_BNG_01_ROSHAN BEG_7204498Conclusion:KN_BNG_01_ROSHAN BEG_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.