ಬೆಂಗಳೂರು: ಕೈಗಾರಿಕೆಗಳ ರಾಸಾಯನಿಕ ಯುಕ್ತ ನೀರು ಕೃಷಿ ಭೂಮಿಗೆ ಸೇರುವುದರಿಂದ ಮತ್ತು ಕಡಿಮೆ ಬೆಲೆಯ ಗೊಬ್ಬರ ಬಳಕೆಯಿಂದ ಕೃಷಿ ಭೂಮಿ ಮಲಿನವಾಗುವುದಕ್ಕೆ ಮುಖ್ಯ ಕಾರಣವಾಗಿದೆ. ಇದರಿಂದ ತರಕಾರಿ ಬೆಳೆಗಳಲ್ಲಿ ಸಾಲ್ಮೊನೆಲ್ಲಾನಂತಹ ವಿಷಕಾರಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಮನುಷ್ಯನ ಆರೋಗ್ಯಕ್ಕೆ ಅಪಾಯ ತಂದೊಡ್ಡುತ್ತಿದೆ ಎಂಬುದು ಸಾಬೀತಾಗಿದೆ.
ಈ ಸಮಸ್ಯೆಗೆ ಪರಿಹಾರ ಪತ್ತೆಹಚ್ಚಲು, ಐಐಎಸ್ಸಿ ಹಾಗೂ ಜಿಕೆವಿಕೆಯ ಸಂಶೋಧಕರು ಹೊಸದೊಂದು ತಂತ್ರವನ್ನು ರೂಪಿಸಿದ್ದಾರೆ. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಬೆಳವಣಿಗೆ ತಡೆಗಟ್ಟಲು ಬೀಟ್ರೂಟ್ ಬೆಳೆದರೆ ಇತರೆ ತರಕಾರಿ ಹಾಗೂ ಬೀಟ್ರೂಟ್ ಸೇವಿಸಲು ಯೋಗ್ಯವಿರುತ್ತದೆ ಎಂದು ಸಂಶೋಧಕರ ತಂಡ ತಿಳಿಸಿದೆ.
ಮೈಕ್ರೊಬಯಾಲಜಿ ಹಾಗೂ ಸೆಲ್ ಬಯೋಲಜಿ (MCB) ವಿಭಾಗದ ಸಂಶೋಧಕರಾದ ದೀಪ್ಶಿಕಾ ಚಕ್ರವರ್ತಿ ಹಾಗೂ ಅವರ ತಂಡದ ಸಂಶೋಧನೆಯ ಪ್ರಕಾರ, ಬೀಟ್ರೂಟ್ ಗಿಡ ಸೂಕ್ಷ್ಮಜೀವಿಗಳನ್ನ ಬಿಡುಗಡೆ ಮಾಡುತ್ತದೆ. ಇದರಿಂದ ಸಾಲ್ಮೊನ್ನೆಲ್ಲಾ ಬ್ಯಾಕ್ಟೀರಿಯಾವನ್ನು ತಡೆಗಟ್ಟುತ್ತದೆ.
ಸಂಶೋಧನೆಯಲ್ಲಿ, ವಿವಿಧ ರೀತಿಯಲ್ಲಿ ಸಾಲ್ಮೊನೆಲ್ಲಾ ಸಹಿತ ಮಣ್ಣಿನಲ್ಲಿ ಬೀಟ್ರೂಟ್ ಜೊತೆಗೆ ತರಕಾರಿ ಬೆಳೆಯುವ ಪ್ರಯತ್ನ ಮಾಡಿದ್ದು, ಟೊಮೆಟೋ ಹಾಗೂ ಬೀಟ್ರೂಟ್ ಮಿಶ್ರ ಬೆಳೆಯಲ್ಲಿ ಯಶಸ್ವಿ ಫಲಿತಾಂಶ ಕಂಡುಬಂದಿದೆ ಎಂದು ಸಂಶೋಧಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಶ್ರಮವಿಲ್ಲದೆ ಬೀಟ್ರೂಟ್ನಿಂದ ಉತ್ಪತ್ತಿಯಾದ ಸೂಕ್ಷ್ಮಜೀವಿಗಳು ಕೃಷಿ ಭೂಮಿಯಲ್ಲಿ ರೋಗನಿರೋಧಕ ಶಕ್ತಿಯಾಗಿ ಕೆಲಸ ಮಾಡಲಿದೆ ಎಂದು ಸೊಂಶೋಧಕರಲ್ಲಿ ಒಬ್ಬರಾದ ಕಾಪುದೀಪ್ ಕರಂಕರ್ ಹೇಳಿದ್ದಾರೆ.
ಕಡಿಮೆ ಖರ್ಚಿನಲ್ಲಿ ಸಾಲ್ಮೊನ್ನೆಲ್ಲ ನಂತ ವಿಷಕಾರಿ ಬ್ಯಾಕ್ಟೀರಿಯಾ ತಡೆಗಟ್ಟುವಲ್ಲಿ ಬೀಟ್ರೂಟ್ ಬೆಲೆ ಸಹಾಯಕ ಆಗಲಿದೆ. ಇದು ಸಣ್ಣ ಕೃಷಿಕರಿಗೆ ಹೆಚ್ಚು ಸಹಾಯಕವಾಗಲಿದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.