ETV Bharat / city

ಬೊಮ್ಮಾಯಿ ಸಂಪುಟದಲ್ಲಿ ಸಚಿವರಾದ ಕೊಬ್ಬರಿ ನಾಡಿನ ಇಂಜಿನಿಯರಿಂಗ್ ಪದವೀಧರ

ತಿಪಟೂರು ಕ್ಷೇತ್ರದ ಪ್ರತಿನಿಧಿಯಾಗಿರುವ ಬಿ ಸಿ ನಾಗೇಶ್ ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಚಿವ ಸ್ಥಾನ ವಹಿಸಿಕೊಳ್ಳುವುದಕ್ಕೂ ಮುನ್ನ ಅವರು ಬಿಜೆಪಿ ಶಿಸ್ತು ಸಮಿತಿ ಸದಸ್ಯರಾಗಿ ಸಕ್ರಿಯರಾಗಿದ್ದರು.

bc nagesh bacomes minister in basavraj bommai cabinet
ಬಿ.ಸಿ. ನಾಗೇಶ್
author img

By

Published : Aug 4, 2021, 7:08 PM IST

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಕೊಬ್ಬರಿ ನಾಡಿನಿಂದ ಮತ್ತೋರ್ವ ಶಾಸಕ ಸಚಿವರಾಗಿ ಸೇರ್ಪಡೆಯಾಗಿದ್ದಾರೆ. ತಿಪಟೂರು ಕ್ಷೇತ್ರದ ಪ್ರತಿನಿಧಿಯಾಗಿರುವ ಬಿ ಸಿ ನಾಗೇಶ್​(62) ಬ್ರಾಹ್ಮಣ ಸಮುದಾಯವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ವಿಧಾನಸಭೆಗೆ ಎರಡನೇ ಬಾರಿ ಆಯ್ಕೆಯಾಗಿರುವ ಇವರು ಇದೇ ಮೊದಲ ಬಾರಿಗೆ ಸಚಿವರಾಗಿ ಅವಕಾಶ ಪಡೆದಿದ್ದಾರೆ. ಇವರು ಬಿಜೆಪಿ ಪಕ್ಷದಲ್ಲಿ ಎಬಿವಿಪಿ ಸಂಘಟನೆ ಆರ್​ಎಸ್​ಎಸ್​​ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು. ತಿಪಟೂರು ಕ್ಷೇತ್ರದಿಂದ ನಾಲ್ಕು ಸಾರಿ ಸ್ಪರ್ಧಿಸಿದ್ದು, 2008 ಮತ್ತು 2018ರಲ್ಲಿ ಗೆಲುವು ಸಾಧಿಸಿದ್ದು, 2013ರಲ್ಲಿ ಸೋಲನುಭವಿಸಿದ್ದರು. ಮೂರು ಸಾರಿಯೂ ಇವರಿಗೆ ಕಾಂಗ್ರೆಸ್​ನಿಂದ ಪ್ರತಿಸ್ಪರ್ಧಿಯಾಗಿ ಷಡಕ್ಷರಿಯೇ ನಿಂತಿದ್ದರು.

ಮೂಲತಃ ಕೃಷಿಕರಾಗಿರುವ ಬಿ ಸಿ ನಾಗೇಶ್ ಬಿಜೆಪಿ ಹಲವು ಜವಾಬ್ದಾರಿಗಳನ್ನು ವಹಿಸಿಕೊಂಡು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಸಚಿವ ಸ್ಥಾನ ವಹಿಸಿಕೊಳ್ಳುವುದಕ್ಕೂ ಮುನ್ನ ಅವರು ಬಿಜೆಪಿ ಶಿಸ್ತು ಸಮಿತಿ ಸದಸ್ಯರಾಗಿ ಸಕ್ರಿಯರಾಗಿದ್ದರು.

ಸಂಘ ಪರಿವಾರದ ಹಿನ್ನೆಲೆಯಿಂದಲೇ ಬಂದಿರುವ ನಾಗೇಶ್, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆ ಜೊತೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ಬ್ರಾಹ್ಮಣ ಸಮುದಾಯದ ಹಿನ್ನೆಲೆ ಹೊಂದಿದ್ದರೂ, ಲಿಂಗಾಯತರು ಹಾಗೂ ಒಕ್ಕಲಿಗರ ಹೆಚ್ಚಿನ ಸಂಖ್ಯೆಯಲ್ಲಿರುವ ತಿಪಟೂರು ಕ್ಷೇತ್ರದಲ್ಲಿ ಗೆದ್ದು ಹಿರಿಮೆ ಸಾಧಿಸಿದ್ದಾರೆ.

ಯಾವುದೇ ಭ್ರಷ್ಟಾಚಾರ ಅವ್ಯವಹಾರ ಆರೋಪ ಹೊಂದಿರದ ನಾಗೇಶ್ ಯಾವುದೇ ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. 1984 ರಿಂದಲೇ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಇವರು ಈಗಲೂ ಸಹ ಜನಮಾನಸದಲ್ಲಿ ಉತ್ತಮ ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.