ETV Bharat / city

ಬಿಜೆಪಿ ಪಾಲಿಕೆ ಸದಸ್ಯ-ಜೆಡಿಎಸ್ ಎಂಎಲ್​​​ಸಿ ನಡುವೆ ಕೋವಿಡ್​​ ಗಲಾಟೆ - ಕೊರೊನಾ ವೈರಸ್​

ಈ ವೇಳೆ ಪದ್ಮನಾಭ ರೆಡ್ಡಿ ರೊಚ್ಚಿಗೆದ್ದು, ಕೈಕೈ ಮಿಲಾಯಿಸಲು ಮುಂದಾದರು. ಆಗ ಬೇರೆ ಪಾಲಿಕೆ ಸದಸ್ಯರು ತಡೆದರು. ಹಳೆ ದ್ವೇಷದ ಹಿನ್ನೆಲೆ ಪದನಾಭ ರೆಡ್ಡಿ ಹೊಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ..

BBMP monthly meeting
ಬಿಬಿಎಂಪಿ ಮಾಸಿಕ ಸಭೆ
author img

By

Published : Jul 28, 2020, 5:30 PM IST

ಬೆಂಗಳೂರು : ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯ ಮಾಸಿಕ ಸಭೆಯಲ್ಲಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಮತ್ತು ಬಿಜೆಪಿ ಪಾಲಿಕೆ ಸದಸ್ಯ ಪದ್ಮನಾಭ ರೆಡ್ಡಿ ಅವರ ನಡುವೆ ಮಾತಿನ ಚಕಮಕಿ ನಡೆಯಿತು.

ಕೋವಿಡ್-19 ವ್ಯವಸ್ಥೆಯ ವಿಫಲತೆ ಹಾಗೂ ಆ್ಯಂಬುಲೆನ್ಸ್​​ ಕೊರತೆ ಕುರಿತು ರಮೇಶ್​​ಗೌಡ ಅವರು ಮೇಯರ್, ಆಯುಕ್ತರ ಗಮನಕ್ಕೆ ತಂದರು. ಅದಕ್ಕೆ ಮೇಯರ್, ನಗರದಲ್ಲಿ 700 ಆ್ಯಂಬುಲೆನ್ಸ್​​ಗಳಿವೆ ಎಂದರು. ಅಷ್ಟು ಖಂಡಿತವಾಗಿಯೂ ಇಲ್ಲ. ವಾರ್ಡ್​​ಗೆ ಎರಡು ಆ್ಯಂಬುಲೆನ್ಸ್ ನೀಡಿ, ಅದನ್ನು ಸಾಬೀತುಪಡಿಸಿ ಎಂದು ಮನವಿ ಮಾಡಿದರು.

ಪಾಲಿಕೆ ಸದಸ್ಯ-ಜೆಡಿಎಸ್ ಎಂಎಲ್​​​ಸಿ ನಡುವೆ ಗಲಾಟೆ

ಈ ವೇಳೆ ಪದ್ಮನಾಭ ರೆಡ್ಡಿ ರೊಚ್ಚಿಗೆದ್ದು, ಕೈಕೈ ಮಿಲಾಯಿಸಲು ಮುಂದಾದರು. ಆಗ ಬೇರೆ ಪಾಲಿಕೆ ಸದಸ್ಯರು ತಡೆದರು. ಹಳೆ ದ್ವೇಷದ ಹಿನ್ನೆಲೆ ಪದನಾಭ ರೆಡ್ಡಿ ಹೊಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್-ಜೆಡಿಎಸ್ ಸದಸ್ಯರು ಬಿಜೆಪಿ ಸದಸ್ಯರ ನಡೆ ವಿರೋಧಿಸಿ ಭಾವಿಗಿಳಿದು ಪ್ರತಿಭಟಿಸಿದರು.

ಇದಕ್ಕೆ ಸ್ಪಷ್ಟನೆ ನೀಡಿದ ಪದ್ಮನಾಭ ರೆಡ್ಡಿ, ಟೀಕೆಗಳು ಚುನಾವಣಾ ಸಂದರ್ಭದಲ್ಲಿ ಸರಿ. ಆದರೆ, ಕೊರೊನಾ ಸಮಯದಲ್ಲಿ ತಪ್ಪು ಹೇಳಿಕೆ, ರಾಜಕೀಯ ಮಾತನಾಡಬಾರದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.