ETV Bharat / city

ಸೇವಾ ತೆರಿಗೆ ಕಟ್ಟದ ಕೇಂದ್ರ ಸರ್ಕಾರದ ಕಟ್ಟಡಗಳಿಗೆ ಬೀಗ ಜಡಿದ ಬಿಬಿಎಂಪಿ - ಬಿಬಿಎಂಪಿ ಸೇವಾ ತೆರಿಗೆ ಜಪ್ತಿ ಸುದ್ದಿ

ಕೋಟ್ಯಂತರ ರೂಪಾಯಿ ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಒಟ್ಟು ಮೂರು ಕೇಂದ್ರ ಸರ್ಕಾರದ ಅಧೀನದ ಸಂಸ್ಥೆಗಳನ್ನು ಮಹಾನಾಗರ ಪಾಲಿಕೆಯ ಕಂದಾಯ ಅಧಿಕಾರಿಗಳು ಇಂದು ಜಪ್ತಿ ಮಾಡಿದ್ದಾರೆ.

bbmp-locked-government-officer-for-not-paying-tax
ಬಿಬಿಎಂಪಿ
author img

By

Published : Feb 6, 2020, 8:04 PM IST

ಬೆಂಗಳೂರು: ಸರ್ಕಾರಿ ಸಂಸ್ಥೆಗಳೇ ನಿಯಮ ಪ್ರಕಾರ ಸೇವಾ ತೆರಿಗೆ ಪಾವತಿಸದೆ ಪಾಲಿಕೆ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿರುವ ಹಿನ್ನೆಲೆ ಐದಾರು ಬಾರಿ ನೋಟೀಸ್​ ನೀಡಿ, ಸೇವಾ ತೆರಿಗೆ ಪಾವತಿಸುವಂತೆ ಎಚ್ಚರಿಸಿದರೂ ಕ್ಯಾರೇ ಅನ್ನದ ಕೇಂದ್ರ ಸರ್ಕಾರದ ಕಟ್ಟಡಗಳಿಗೆ ಇಂದು ಬೀಗ ಜಡಿಯಲಾಗಿದೆ.

ಕೋಟ್ಯಂತರ ರುಪಾಯಿ ಸೇವಾ ತೆರಿಗೆ ಬಾಕಿ ಉಳಿಸಿದ್ದ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಮೂರು ಸಂಸ್ಥೆಗಳನ್ನು ಪಾಲಿಕೆ ಕಂದಾಯ ಅಧಿಕಾರಿಗಳು ಇಂದು ಜಪ್ತಿ ಮಾಡಿದ್ದಾರೆ. ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಐವತ್ತು ಎಕರೆ ಜಾಗದಲ್ಲಿದ್ದ ಕೇಂದ್ರ ಉತ್ಪಾದನಾ ತಂತ್ರಜ್ಞಾನ ಸಂಸ್ಥೆಯ ಕಟ್ಟಡಕ್ಕೆ ಇಂದು ಆರ್ ಆರ್ ನಗರ ವಲಯದ ಉಪ ಆಯುಕ್ತ ಶಿವೇಗೌಡ ನೇತೃತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.

2005- 2006 ರಿಂದ 2019-20 ರ ವರೆಗೆ ಸೇವಾ ತೆರಿಗೆ ಹಾಗೂ ಬಡ್ಡಿ ಸೇರಿ ಏಳು ಕೋಟಿ 91 ಲಕ್ಷ ಪಾವತಿಸದೆ ಸುಸ್ತಿದಾರರಾಗಿರುವುದರಿಂದ ಈ ಕಟ್ಟಡವನ್ನು ಪಾಲಿಕೆಯ ಸ್ವತ್ತೆಂದು ಪರಿಗಣಿಸಲಾಗಿದೆ ಎಂದು ಬ್ಯಾನರ್ ಹಾಕಿ ಬೀಗ ಜಡಿಯಲಾಗಿದೆ. ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ ಲಕ್ಷ್ಮೀದೇವಿನಗರ ಉಪವಲಯದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಸೇವಾ ತೆರಿಗೆ ಕಟ್ಟದ ಕೇಂದ್ರ ಸರ್ಕಾರದ ಕಟ್ಟಡಗಳಿಗೆ ಬೀಗ ಜಡಿದ ಬಿಬಿಎಂಪಿ

ಅಷ್ಟೇ ಅಲ್ಲದೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನಿಂಗ್ ಆರು ವರ್ಷಗಳಿಂದ 57 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ. ಇಂಡಿಯನ್ ಪ್ಲೈವುಡ್ ಇಂಡಸ್ಟ್ರೀಸ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ 20 ವರ್ಷಗಳಿಂದ 1 ಕೋಟಿ, 40 ಲಕ್ಷ ರೂ. ಬಾಕಿ ಉಳಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಈ ಕುರಿತು ಮಾತನಾಡಿರುವ ಉಪಾಯುಕ್ತ ಶಿವೇಗೌಡ, ಆರ್ ಆರ್ ನಗರ ವಲಯದಲ್ಲಿ ಒಟ್ಟು 72,000 ಆಸ್ತಿ ಮಾಲೀಕರಿಂದ ತೆರಿಗೆ ಬಾಕಿ ಇತ್ತು. ಈಗ 192 ಕಟ್ಟಡಗಳನ್ನು ಜಪ್ತಿ ಮಾಡಲಾಗಿದೆ. ಸುಮಾರು 166 ಕೋಟಿ ರೂ. ತೆರಿಗೆ ಸಂಗ್ರಹ ಮಾಡಲಾಗಿದೆ. ಇನ್ನೂ 43 ಸಾವಿರ ಆಸ್ತಿ ಮಾಲೀಕರಿಂದ 129 ಕೋಟಿ ರೂಪಾಯಿ ತೆರಿಗೆ ಬಾಕಿ ಬರಬೇಕಾಗಿದೆ ಎಂದು ತಿಳಿಸಿದರು.

ಇಂದು ಜಪ್ತಿ ಮಾಡಿದ ಕೇಂದ್ರ ಸರ್ಕಾರದ ಸಂಸ್ಥೆಗಳು ಮುಂದಿನ ಎರಡು ಮೂರು ದಿನದಲ್ಲಿ ಚೆಕ್ ಮೂಲಕ ಸೇವಾ ತೆರಿಗೆ ಪಾವತಿಸಲಾಗುವುದು ಎಂದು ಲಿಖಿತ ರೂಪದಲ್ಲಿ ತಿಳಿಸಿರುವುದರಿಂದ ಕೆಲ ಗಂಟೆಗಳ ಬಳಿಕ ಸಂಸ್ಥೆಗಳ ಬೀಗ ತೆರೆಯಲಾಗಿದೆ ಎಂದು ಅವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.