ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಹಿನ್ನೆಲೆ ಯಲಹಂಕ ವಲಯ ವ್ಯಾಪ್ತಿಯಲ್ಲಿ ಬರುವ ಮಾನ್ಯತಾ ಟೆಕ್ ಪಾರ್ಕ್, ರಾಯಲ್ ಗ್ರಾಂಡ್ ಕಲ್ಯಾಣ ಮಂಟಪ ಹಾಗೂ ರೇವಾ ವಿಶ್ವವಿದ್ಯಾಲಯಕ್ಕೆ ಬಿಬಿಎಂಪಿಯಿಂದ ಜಪ್ತಿ ವಾರಂಟ್ ಜಾರಿಗೊಳಿಸಲಾಗಿದೆ.
ಪಾಲಿಕೆಗೆ ಅಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರಿಂದ ವಲಯ ಜಂಟಿ ಆಯುಕ್ತರ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ವಾರಂಟ್ ನೀಡಿದರು. ಈ ವೇಳೆ, ಜಪ್ತಿ ವಾರಂಟ್ ಜಾರಿಗೊಳಿಸಿ ಕೆಲ ಆಸ್ತಿಗಳನ್ನೂ ಕೂಡ ಜಪ್ತಿ ಮಾಡಲಾಗಿದೆ.
ಮಾನ್ಯತಾ ಟೆಕ್ ಪಾರ್ಕ್:
ಥಣಿಸಂದ್ರ ವಾರ್ಡ್ ವ್ಯಾಪ್ತಿಯ ನಾಗವಾರ ರಿಂಗ್ ರಸ್ತೆಯಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ 9 ವಿವಿಧ ಬ್ಲಾಕ್‌ಗಳ ಕಟ್ಟಡಗಳಿಗೆ 2018-19ನೇ ಸಾಲಿನಲ್ಲಿ ಟೋಟಲ್ ಸ್ಟೇಷನ್ ಸರ್ವೆ ಕೈಗೊಂಡಿದ್ದು, ಆಸ್ತಿ ತೆರಿಗೆ ಪಾವತಿಯಲ್ಲಿ ಕಟ್ಟಡದ ಅಳತೆಯನ್ನು ಕಡಿಮೆ ನಮೂದಿಸಿರುವುದು ಕಂಡು ಬಂದಿರುತ್ತದೆ.
ಆದರೆ, ಆಸ್ತಿ ಮಾಲೀಕರು ಮೊತ್ತ 28,67,97,434 ಗಳನ್ನು ಮಾತ್ರ ಪಾವತಿಸಿದ್ದು, 72,70,90,177 ರೂ. ಬಾಕಿಯಿದೆ. ಈ ಮೊತ್ತವನ್ನು ಪಾವತಿಸಲು ನೋಟಿಸ್ ಅನ್ನು ಜಾರಿ ಮಾಡಲಾಗಿದ್ದರೂ ಬಾಕಿ ಹಣ ಪಾವತಿಸದ ಕಾರಣ ಜಪ್ತಿ ವಾರೆಂಟ್ ಜಾರಿಗೊಳಿಸಿ ಕಂಪನಿಯ ಕೆಲ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.
ರಾಯಲ್ ಗ್ರಾಂಡ್ ಕಲ್ಯಾಣ ಮಂಟಪ
ಥಣಿಸಂದ್ರ ವಾರ್ಡ್ ವ್ಯಾಪ್ತಿಯ ನಾಗವಾರ ಥಣಿಸಂದ್ರ ಮುಖ್ಯರಸ್ತೆಯ ಎನ್ ಆನಂದಮೂರ್ತಿ ಅವರ ಮಾಲೀಕತ್ವದ ರಾಯಲ್ ಗ್ರಾಂಡ್ ಕಲ್ಯಾಣ ಮಂಟಪಕ್ಕೆ 2012-2013 ರಿಂದ ಆಸ್ತಿ ತೆರಿಗೆಯಾಗಿ 70,68,930 ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ವಸೂಲಾತಿ ಸಂಬಂಧ ನೀಡಲಾಗಿದ್ದ ನೋಟಿಸ್‌ಗೆ ಕಳೆದ ತಿಂಗಳು 9 ಲಕ್ಷದ ಚೆಕ್ ನೀಡಿದ್ದರು. ಇದು ಕೂಡ ಬೌನ್ಸ್ ಆಗಿತ್ತು. ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಜಪ್ತಿ ವಾರಂಟ್ ಜಾಲಿಗೊಳಿಸಲಾಗಿದೆ.
ರೇವಾ ವಿಶ್ವವಿದ್ಯಾಲಯ
ಜಕ್ಕೂರು ವಾರ್ಡ್ ವ್ಯಾಪ್ತಿಯ ಕಟ್ಟಿಗೇನಹಳ್ಳಿ ಗ್ರಾಮದಲ್ಲಿನ ರುಕ್ಮಿಣಿ ಎಜುಕೇಷನ್ ಚಾರಿಟಬಲ್ ಟ್ರಸ್ಟ್ ಮಾಲೀಕತ್ವದ ರೇವಾ ವಿಶ್ವವಿದ್ಯಾಲಯ ಕಟ್ಟಬೇಕಿದ್ದ ತೆರಿಗೆ 16,95,64,078 ಯನ್ನು ಬಾಕಿ ಉಳಿಸಿಕೊಂಡಿತ್ತು. ಬಾಕಿ ಮೊತ್ತವನ್ನು ಪಾವತಿಸಲು ಬಾಕಿ ನೋಟಿಸ್ ಅನ್ನು ಜಾರಿ ಮಾಡಲಾಗಿದೆ.
ಓದಿ: ಹಾವೇರಿ: 6 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ಸಾವು
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ