ETV Bharat / city

ಬಿಬಿಎಂಪಿಯಲ್ಲಿ ಮೇಲುಗೈ ಸಾಧಿಸಿದ ಬಿಜೆಪಿ: ಬೆಂಗಳೂರು ಮೇಯರ್ ಆಗಿ ಗೌತಮ್ ಕುಮಾರ್ ಆಯ್ಕೆ

author img

By

Published : Oct 1, 2019, 1:26 PM IST

Updated : Oct 1, 2019, 2:23 PM IST

ಬಿಬಿಎಂಪಿ ಮೇಯರ್​ ಹಾಗೂ ಉಪಮೇಯರ್​ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ ನಾಲ್ಕು ವರ್ಷಗಳ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆಡಳಿತದ ಬಳಿಕ, ಕೊನೆಯ ಐದನೇ ವರ್ಷ ಬಿಜೆಪಿ, ಬಿಬಿಎಂಪಿಯ ಚುಕ್ಕಾಣಿ ಹಿಡಿದಿದೆ. ಜೋಗುಪಾಳ್ಯ ವಾರ್ಡ್​ನ ಎನ್ ಗೌತಮ್ ಕುಮಾರ್ ಮೇಯರ್ ಆಗಿ 129 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ 112 ಮತ ಪಡೆದು ಸೋತಿದ್ದು, 17 ಮತಗಳ ಅಂತರದಲ್ಲಿ ಗೌತಮ್ ಕುಮಾರ್ ಗೆದ್ದಿದ್ದಾರೆ

ಬೆಂಗಳೂರು ಮೇಯರ್ ಆಗಿ ಗೌತಮ್ ಕುಮಾರ್ ಆಯ್ಕೆ

ಬೆಂಗಳೂರು: ಬರೋಬ್ಬರಿ ನಾಲ್ಕು ವರ್ಷಗಳ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆಡಳಿತದ ಬಳಿಕ, ಕೊನೆಯ ಐದನೇ ವರ್ಷ ಬಿಜೆಪಿ, ಬಿಬಿಎಂಪಿಯ ಚುಕ್ಕಾಣಿ ಹಿಡಿದಿದೆ. ಜೋಗುಪಾಳ್ಯ ವಾರ್ಡ್​ನ ಎನ್ ಗೌತಮ್ ಕುಮಾರ್ ಮೇಯರ್ ಆಗಿ 129 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ.

ಬಿಬಿಎಂಪಿಯಲ್ಲಿ ಮೇಲುಗೈ ಸಾಧಿಸಿದ ಬಿಜೆಪಿ

ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ 112 ಮತ ಪಡೆದು ಸೋತಿದ್ದು, 17 ಮತಗಳ ಅಂತರದಲ್ಲಿ ಗೌತಮ್ ಕುಮಾರ್ ಗೆದ್ದಿದ್ದಾರೆ. ಇನ್ನು ಉಪಮೇಯರ್ ಆಗಿ ಬೊಮ್ಮನಹಳ್ಳಿ ವಾರ್ಡ್​ನ ರಾಮ್ ಮೋಹನ್ ರಾಜ್ ಬಹುಮತ ಪಡೆದು ಗೆದ್ದಿದ್ದಾರೆ.

ಪಕ್ಷೇತರರಲ್ಲಿ ಆನಂದ್ ಹಾಗೂ ಮುಜಾಹಿದ್ ಪಾಷಾ ಮೈತ್ರಿ ಪಕ್ಷಕ್ಕೆ ಬೆಂಬಲ ಸೂಚಿಸಿದರೆ, ಚಂದ್ರಪ್ಪ ರೆಡ್ಡಿ, ಗುಂಡಣ್ಣ(ಲಕ್ಷ್ಮಿನಾರಾಯಣ) ಗಾಯತ್ರಿ, ರಮೇಶ್, ಮಮತಾ ಶರವಣ ಪಕ್ಷೇತರರು ಬಿಜೆಪಿಗೆ ಬೆಂಬಲ ಸೂಚಿಸಿದರು‌. ಜೆಡಿಎಸ್​​ನ ಬಂಡಾಯ ಕಾರ್ಪೋರೇಟರ್​ಗಳಾದ ದೇವದಾಸ್, ಹಾಗೂ ಮಂಜುಳಾ ನಾರಾಯಣಸ್ವಾಮಿ ವಿಪ್ ಉಲ್ಲಂಘನೆ ಮಾಡಿ, ಚುನಾವಣೆಯಿಂದ ಹೊರ ನಡೆದರು. ಆದರೆ ಗೈರಾಗುತ್ತಾರೆ ಎನ್ನಲಾಗಿದ್ದ ಅನರ್ಹ ಶಾಸಕರ ಬೆಂಬಲಿಗರು, ಚುನಾವಣೆಗೆ ಹಾಜರಾಗಿ ಮೈತ್ರಿ ಪಕ್ಷಕ್ಕೇ ಬೆಂಬಲ ಸೂಚಿಸಿದರು.

ಬಿಬಿಎಂಪಿಯಲ್ಲಿ ಮೇಲುಗೈ ಸಾಧಿಸಿದ ಬಿಜೆಪಿ

ನಾಲ್ಕು ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ:

ಮೇಯರ್-ಉಪಮೇಯರ್ ಚುನಾವಣೆ ಜೊತೆಗೆ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆಯೂ ನಿಗದಿಯಾಗಿತ್ತು. ಆದರೆ, ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಮುಂದೂಡಿಕೆ ಮಾಡಿ ಚುನಾವಣೆ ಆಯುಕ್ತರಾದ ಹರ್ಷಗುಪ್ತ ಘೋಷಣೆ ಮಾಡಿದರು.

ಗುಂಡಣ್ಣನ ಕಾಲೆಳೆದ ಕಾಂಗ್ರೆಸ್ ಮುಖಂಡರು:

ಲಕ್ಷ್ಮೀನಾರಾಯಣ (ಗುಂಡಣ್ಣ) ಮೈತ್ರಿ ಪಕ್ಷಕ್ಕೆ ಬೆಂಬಲ ಸೂಚಿಸದೇ ಬಿಜೆಪಿಗೆ ಬಲಿಸಿದಾಗ ಕಾಂಗ್ರೆಸ್ ಕಾರ್ಪೋರೇಟರ್ಸ್ ಗುಂಡಣ್ಣ ಅವರ ಕಾಲೆಳೆದರು. ಕುದುರೆ ವ್ಯಾಪಾರ, ಎಷ್ಟಕ್ಕೆ ಬುಕ್ ಆಗಿದ್ದೀಯ, ನಮ್ಮ ಪರ ಕೈಎತ್ತು ಎಂದೆಲ್ಲ ಜೋರಾಗಿ ಕೂಗಿದರು.

ಚುನಾವಣೆ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಚುನಾವಣೆಯ ನಡೆಸುತ್ತಿರುವ ಕುರಿತು ಸ್ಪಷ್ಟನೆ ನೀಡುವಂತೆ, ಎಮ್​ಎಲ್​ಸಿಪಿ ಆರ್ ರಮೇಶ್, ಶರವಣ, ರಮೇಶ್ ಗೌಡ ಚುನಾವಣಾ ಆಯುಕ್ತರಾದ ಹರ್ಷಗುಪ್ತ ಅವರನ್ನು ಆಗ್ರಹಿಸಿದರು. ಆದರೆ, ಚುನಾವಣೆ ಪ್ರಕ್ರಿಯೆ ಆರಂಭವಾದ ಮೇಲೆ ಬೇರೆ ಯಾವುದೇ ಚರ್ಚೆಗೆ ಅವಕಾಶ ಇಲ್ಲ ಎಂದ ಹರ್ಷಗುಪ್ತಾ, ಚುನಾವಣೆ ಮುಂದುವರಿಸಿದರು.

ನಾಮಪತ್ರ ಹಿಂಪಡೆದ ಪದ್ಮನಾಭ ರೆಡ್ಡಿ:

ಕಡೆಯ ಕ್ಷಣದ ವರೆಗೂ ಮೇಯರ್ ಸ್ಥಾನಕ್ಕೆ ಪೈಪೋಟಿಯಲ್ಲಿದ್ದ ಪದ್ಮನಾಭ ರೆಡ್ಡಿ, ನಾಮಪತ್ರವನ್ನು ಸಲ್ಲಿಸಿದ್ದರು. ಪಕ್ಷದ ಮುಖಂಡರ ಮನವೊಲಿಕೆಯ ಬಳಿಕ ಚುನಾವಣಾ ಸಭೆಯಲ್ಲಿ ನಾಮಪತ್ರ ಹಿಂಪಡೆದರು. ಅದೇ ರೀತಿ ಬಿಜೆಪಿ ಉಪಮೇಯರ್ ಅಭ್ಯರ್ಥಿಯಾಗಿ ಮೂವರು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಮಹಾಲಕ್ಷ್ಮಿ ಹಾಗೂ ಗುರುಮೂರ್ತಿ ರೆಡ್ಡಿ ವಾಪಾಸ್ ಪಡೆದರು. ಒಟ್ಟು 257 ಮತದಾರರಲ್ಲಿ ಒಟ್ಟು ಎಂಟು ಜನ ಗೈರಾಗಿದ್ದರು.

ಕುರುಕ್ಷೇತ್ರ 50 ದಿವಸದ ಆಚರಣೆ ಸಧ್ಯದಲ್ಲೇ

ಡಿ ಬಾಸ್ ದರ್ಶನ್ ಅವರ  ಕನ್ನಡ ಚಿತ್ರ ರಂಗದಲ್ಲಿ 3ಡಿ ಹಾಗೂ 2ಡಿ ಅಲ್ಲಿ ಏಕ ಕಾಲದಲ್ಲಿ ಬಿಡುಗಡೆ ಆದ ಪೌರಾಣಿಕ ಚಿತ್ರ ಮುನಿರತ್ನ ಕುರುಕ್ಷೇತ್ರ 100 ಕೋಟಿ ಗಳಿಕೆಯ ಸಿನಿಮಾ ದರ್ಶನ್ ಅವರ ವೃತ್ತಿ ಜೀವನದಲ್ಲಿ ಎರಡನೇ ಬಾರಿ ಎಂಬುದು ನಿಜ. ದರ್ಶನ್ ಅವರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ನಿಧಾನವಾಗಿ 100 ಕೋಟಿ ಒಟ್ಟಾರೆ ಆಗಿ ಗಳಿಸಿದ ಸಿನಿಮಾ ಹಾಗೂ 100 ದಿವಸ ಪ್ರದರ್ಶನ ಆದ ಸಿನಿಮಾ.

ಆದರೆ ಡಿ ಬಾಸ್ ದರ್ಶನ್ ಅವರ 50 ನೇ ಸಿನಿಮಾ 50 ದಿವಸಕ್ಕೆ ತಲುಪಿ 50 ಕ್ಕೂ ಹೆಚ್ಚು ಪರದೆಗಳಲ್ಲಿ ಅಲ್ಲಿ ಪ್ರದರ್ಶನ ಕಾಣುತ್ತಲಿದ್ದು 100 ಕೋಟಿ ಗಳಿಕೆ ಸಹ ಕಂಡಿದ್ದು ಚರಿತ್ರೆ ಪುಟಗಳಲ್ಲಿ ಸೇರಿದೆ. ಸಧ್ಯಕ್ಕೆ ಕೀನ್ಯಾ ದೇಶದ ಮಸಾಯಿ ಸ್ಥಳದಲ್ಲಿ  ಮಗ ವಿನೀತ್ ಜೊತೆ ವನ್ಯ ಜೀವಿಗಳು, ಆದಿವಾಸಿ ಜನರ ಜೊತೆ ಕೆಲವು ದಿವಸ ಕಾಲ ಕಳೆಯುತ್ತಿರುವ ಡಿ ಬಾಸ್ ದರ್ಶನ್ ಬೆಂಗಳೂರಿಗೆ ಬಂದ ತಕ್ಷಣ ನಿರ್ಮಾಪಕ ಮುನಿರತ್ನ ನಾಯ್ಡು ಕುರುಕ್ಷೇತ್ರ ಚಿತ್ರದ 50 ದಿವಸ ಪ್ರದರ್ಶನದ ಕಾರ್ಯಕ್ರಮ ಯೋಜನೆ ಸಿದ್ದತೆ ಬಗ್ಗೆ ಚರ್ಚೆ ಆಗಲಿದೆ. ದರ್ಶನ್ ಅವರು ವಿದೇಶದಿಂದಲೇ ಅಭಿಮಾನಿಗಳಿಗೆ ಕುರುಕ್ಷೇತ್ರ ಯಶಸ್ಸಿಗೆ ವಂದನೆ ತಿಳಿಸಿದ್ದಾರೆ.

ಹಲವಾರು ಕಡೆ ದರ್ಶನ್ ಅಭಿಮಾನಿಗಳು 50 ದಿವಸ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. 9 ನೇ ಆಗಸ್ಟ್ ರಾಷ್ಟ್ರಾದ್ಯಂತ ಹಾಗೂ ಆಮೇಲೆ ವಿದೇಶಗಳಲ್ಲಿ ಕುರುಕ್ಷೇತ್ರ ಬಿಡುಗಡೆ ಆಗಿ ಭರ್ಜರಿ ಆಗಿ ಯಶಸ್ಸನ್ನು ಕಂಡಿತ್ತು.

ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಈ ಮುನಿರತ್ನ ಕುರುಕ್ಷೇತ್ರ ದೊಡ್ಡ ಇತಿಹಾಸ ಸೃಷ್ಟಿ ಮಾಡಿರುವುದಕ್ಕೆ ಹಲವಾರು ಕಾರಣಗಳಿವೆ. ಕನ್ನಡ ಸಿನಿಮಾ ಕ್ಷೇತ್ರದಿಂದ ಹಲವಾರು ಹಿರಿಯ ಕಲಾವಿದರುಗಳು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 3ಡಿ ತಂತ್ರಜ್ಞಾನದಲ್ಲಿ ಒಂದು ಪೌರಾಣಿಕ ಸಿನಿಮಾ ಮೂಡಿಬಂದಿರುವುದು ಭಾರತೀಯ ಚಿತ್ರ ರಂಗ ಇತಿಹಾಸದಲ್ಲೇ ಮೊದಲು.

ದುರ್ಯೋಧನ ಆದ ದರ್ಶನ್ ಜೊತೆ, ಡಾ ಅಂಬರೀಶ್, ವಿ ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರಸ್ವಾಮಿ, ಶಶಿಕುಮಾರ್, ರವಿಶಂಕರ್, ಶ್ರೀನಿವಾಸಮೂರ್ತಿ, ಡಾ ಶ್ರೀನಾಥ್, ಡಾ ಭಾರತಿ ವಿಷ್ಣುವರ್ಧನ,ಸ್ನೇಹ, ಮೇಘನ ರಾಜ್, ಹರಿಪ್ರಿಯಾ, ರವಿ ಚೇತನ್, ಸೋನು ಸೂದ್, ದನಿಷ್ ಅಕ್ಥರ್…. ಹೀಗೆ ಹಲವಾರು ಕಲಾವಿದರುಗಳು ಅಭಿನಯಿಸಿದ ಚಿತ್ರಕ್ಕೆ ಹಿರಿಯ ನಿರ್ದೇಶನ ನಾಗಣ್ಣ ಸಾರತ್ಯವನ್ನು ವಹಿಸಿದವರು.

185 ನಿಮಿಷದ ಈ ಮುನಿರತ್ನ ಕುರುಕ್ಷೇತ್ರ ಸಿನಿಮಾಕ್ಕೆ ಹಣ ಹೂಡಿದವರು ಮುನಿರತ್ನ ನಾಯ್ಡು. ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕ ಮತ್ತು ನಟ ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನೂ ವಿತರಣೆ ಮಾಡಿರುವವರು.

ಜೆ ಕೆ ಭಾರವಿ ಅವರ ಕಥಾ ಸಹಾಯ, ಜಯನನ್ ವಿನ್ಸೆಂಟ್ ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಸಂಗೀತ, ಜೋನಿ ಹರ್ಷ ಸಂಕಲನ ಈ ಬಹು ದೊಡ್ಡ ಬಜೆಟಿನ ಸಿನಿಮಾಕ್ಕೆ ಮಾಡಿರುವರು. 

Last Updated : Oct 1, 2019, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.