ETV Bharat / city

ರಾಜಧಾನಿಯಲ್ಲಿ ಸಾಮೂಹಿಕ ದೀಪಾವಳಿ‌ ಆಚರಣೆಗೆ ಕೊಕ್​​ - BBMP commissioner Manjunath prasad

ಸರ್ಕಾರದ ನಿಯಮದ ಪ್ರಕಾರ ಹಸಿರು ಪಟಾಕಿಗಳಿಗೆ ಅದರದೇ ಆದಂತಹ ಲೋಗೋ, ಕ್ಯೂಆರ್​​ ಕೋಡ್​ ಇರುತ್ತದೆ. ಅಂತಹ ಪಟಾಕಿಗಳ ಮಾರಾಟ ಮತ್ತು ಸಿಡಿಸಲು ಅವಕಾಶ ಇದೆ. ಜೊತೆಗೆ ಕೋವಿಡ್​ ಮಾರ್ಗಸೂಚಿಗಳ ಪಾಲನೆ ಕಡ್ಡಾಯ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್​ ಹೇಳಿದರು.

BBMP commissioner Manjunath prasad
ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್
author img

By

Published : Nov 12, 2020, 4:19 PM IST

ಬೆಂಗಳೂರು: ಕೋವಿಡ್ ಹಿನ್ನೆಲೆ ಹಸಿರು ದೀಪಾವಳಿ ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಬೆಂಗಳೂರಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.

ಹೀಗಾಗಿ, ಸಾಮೂಹಿಕ ದೀಪಾವಳಿ ಆಚರಣೆ ಮತ್ತು ಪಟಾಕಿ ಸಿಡಿಸುವ ಮುನ್ನ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ. ಹಸಿರು ಪಟಾಕಿ ಹೊರತುಪಡಿಸಿ ಯಾವುದೇ ಪಟಾಕಿಗಳ ಮಾರಾಟಕ್ಕೆ ಮತ್ತು ಸಿಡಿಸಲು ಅವಕಾಶ ಇಲ್ಲ.

ಒಂದು ವೇಳೆ, ಸರ್ಕಾರ ಹೊರಡಿಸಿರುವ ಆದೇಶವನ್ನು ಉಲ್ಲಂಘಿಸಿ ಪಟಾಕಿ ಸಿಡಿಸುತ್ತೇವೆ ಎಂದು ಹಠಕ್ಕೆ ಬಿದ್ದರೆ ದುಬಾರಿ ದಂಡ ತೆರಬೇಕಾಗುತ್ತದೆ. ಕೇಂದ್ರ ಸರ್ಕಾರದ ಸಿಎಸ್​ಐಆರ್, ನೀರಿ ಸಂಸ್ಥೆಗಳಿಂದ ಅಧ್ಯಯನಕ್ಕೊಳಪಟ್ಟು ಅಭಿವೃದ್ಧಿಪಡಿಸಲಾದ ಪಟಾಕಿಗಳಿಗೆ ಮಾತ್ರ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್

ಅಧಿಕೃತ ಮಾರಾಟಗಾರರು, ವಿತರಕರು ಯಾರೋ ಇದ್ದಾರೋ ಅಂತಹವರು ಸರ್ಟಿಫಿಕೆಟ್ ತೋರಿಸಿದ ಮೇಲೆ ಅಂಗಡಿ ಇಡಲು ಅನುಮತಿ ನೀಡಲಾಗುತ್ತದೆ. ಎಲ್ಲೆಲ್ಲಿ ಅಂಗಡಿಗಳು ಇಡಬೇಕು ಎಂಬುದನ್ನು ಗುರುತಿಸಿ ಮೈದಾನಗಳ ಪಟ್ಟಿಯನ್ನು​ ಪೊಲೀಸ್​​ ಆಯುಕ್ತರಿಗೆ ನೀಡಲಾಗಿದೆ.

ಪ್ರತಿಯೊಂದು ದಾಖಲೆಗಳನ್ನು ಪರಿಶೀಲಿಸಿಯೇ ಅನುಮತಿ ನೀಡಲಾಗುತ್ತದೆ. ಅನುಮತಿ ಇಲ್ಲದೇ ಪಟಾಕಿ ಮಾರಾಟ ಮಾಡಿದರೆ ಅಂತಹವರ ಮೇಲೆ ಹದ್ದಿನ ಕಣ್ಣಿಡಲು ಬಿಬಿಎಂಪಿ ಮಾರ್ಷಲ್ಸ್ ಮತ್ತು ಪೊಲೀಸರು ನಗರದಾದ್ಯಂತ ಕಾರ್ಯಾಚರಣೆ ನಡೆಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.