ETV Bharat / city

ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸಡಿಲಿಕೆ ಸಾಧ್ಯತೆ - Gaurav Gupta statement about unlock

ಬೃಹತ್ ಮಾರುಕಟ್ಟೆಗಳ ಆರಂಭಕ್ಕೆ ಸಂಬಂಧಿಸಿದಂತೆ ಕೆಲವು ಕಡೆ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿಕೊಂಡು ತೆರೆಯಬಹುದಾ ಎಂದು ಪರಿಶೀಲಿಸಬೇಕಿದೆ. ಸರ್ಕಾರದ ಮಟ್ಟದಲ್ಲಿ ಆದೇಶ ಆದರೆ ಬಿಬಿಎಂಪಿ ಅದನ್ನು ಪಾಲಿಸಲಿದೆ. ಮಾರುಕಟ್ಟೆಗಳ ಮಳಿಗೆಗಳು ಈಗಲೂ ಬಂದ್ ಇವೆ. ಸದ್ಯಕ್ಕೆ ನಿಷೇಧ ಇದೆ. ಜೊತೆಗೆ ಚಿಕ್ಕಪೇಟೆ ಕಡೆಗಳಲ್ಲಿ ಕೆಲವು ಕಡೆ ಅಂಗಡಿಗಳನ್ನು ತೆರೆಯಲಾಗಿದೆ. ಉಳಿದಂತೆ ಪೂರ್ಣವಾಗಿ ತೆರೆಯುವ ಬಗ್ಗೆ ಪುನರ್ ಅವಲೋಕನ ಮಾಡಲಿದ್ದೇವೆ ಎಂದು ಗೌರವ್ ಗುಪ್ತ ತಿಳಿಸಿದರು.

Bangalore
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್
author img

By

Published : Jul 2, 2021, 2:41 PM IST

Updated : Jul 2, 2021, 2:50 PM IST

ಬೆಂಗಳೂರು: ನಗರದಲ್ಲಿ ಜಾರಿಯಿರುವ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಸಡಿಲಿಕೆ ಸಾಧ್ಯತೆಯಿದೆ. ಪೊಲೀಸರು, ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ಅಭಿಪ್ರಾಯ ತಿಳಿಸಿದ್ದಾರೆ.

ನಗರದಲ್ಲಿ ಶೇ. 1ಕ್ಕಿಂತ ಕಡಿಮೆ ಪಾಸಿಟಿವಿಟಿ ಪ್ರಮಾಣ ಬಂದಿದೆ. 65 ಸಾವಿರದಷ್ಟು ಟೆಸ್ಟ್ ಮಾಡಲಾಗ್ತಿದೆ. 700ಕ್ಕಿಂತ ಕಡಿಮೆ ಪಾಸಿಟಿವ್ ಪ್ರಕರಣಗಳು ಬರುತ್ತಿವೆ. ಕಂಟೈನ್​ಮೆಂಟ್, ಐಸೋಲೇಷನ್​ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.

ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಸಡಿಲಿಕೆ ಸಾಧ್ಯತೆ: ಗೌರವ್ ಗುಪ್ತ

ಕೋವಿಡ್ ಪ್ರಕರಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್​ಡೌನ್ ಸಡಿಲಿಕೆ ಮಾಡಬೇಕಾದ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಎಲ್ಲಾ ಚಟುವಟಿಕೆಗಳನ್ನು ಆರಂಭಿಸಲು ಮನವಿ ಇದೆ. ಏಪ್ರಿಲ್, ಮೇ ತಿಂಗಳಲ್ಲಿ ಎಲ್ಲವನ್ನೂ ಬಂದ್ ಮಾಡಲಾಗಿತ್ತು. ಈಗ ಅದನ್ನು ತೆರೆಯಲು ಬೇಡಿಕೆ ಬರುತ್ತಿದೆ. ಬರುವ ದಿನಗಳಲ್ಲಿ ಮತ್ತಷ್ಟು ಸಡಿಲಿಕೆಗೆ ಅವಕಾಶ ಸಿಗಲಿದೆ ಎಂದರು.

ಬೃಹತ್ ಮಾರುಕಟ್ಟೆಗಳ ಆರಂಭಕ್ಕೆ ಸಂಬಂಧಿಸಿದಂತೆ ಕೆಲವು ಕಡೆ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಿಕೊಂಡು ತೆರೆಯಬಹುದಾ ಎಂದು ಪರಿಶೀಲಿಸಬೇಕಿದೆ. ಸರ್ಕಾರದ ಮಟ್ಟದಲ್ಲಿ ಆದೇಶ ಆದರೆ ಬಿಬಿಎಂಪಿ ಅದನ್ನು ಪಾಲಿಸಲಿದೆ. ಮಾರುಕಟ್ಟೆಗಳ ಮಳಿಗೆಗಳು ಈಗಲೂ ಬಂದ್ ಇವೆ. ಸದ್ಯಕ್ಕೆ ನಿಷೇಧ ಇದೆ. ಜೊತೆಗೆ ಚಿಕ್ಕಪೇಟೆ ಕಡೆಗಳಲ್ಲಿ ಕೆಲವು ಕಡೆ ಅಂಗಡಿಗಳನ್ನು ತೆರೆಯಲಾಗಿದೆ. ಉಳಿದಂತೆ ಪೂರ್ಣವಾಗಿ ತೆರೆಯುವ ಬಗ್ಗೆ ಪುನರ್ ಅವಲೋಕನ ಮಾಡಲಿದ್ದೇವೆ. ಮಾಲ್, ಬಟ್ಟೆ, ಚಿನ್ನದ ಅಂಗಡಿಗಳು ಅಥವಾ ಎಲ್ಲೇ ಆದರೂ ಪ್ರತಿಯೊಂದರಲ್ಲೂ ಜನರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಬೇಕಿದೆ ಎಂದರು.

ಸಿನಿಮಾ ಹಾಲ್ ತೆರೆಯುವ ಬಗ್ಗೆ ಮಾತನಾಡಿ, ಇದು ಮುಚ್ಚಿದ ಜಾಗದಲ್ಲಿ ಇರುವ ಹಿನ್ನೆಲೆಯಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕಾಗುತ್ತದೆ.‌ ಮಾಲ್​ಗಳಲ್ಲಿ ಕೆಲವು ಭಾಗ ಮಾತ್ರ ತೆರೆಯಲಾಗುವುದು. ನಗರದಲ್ಲಿ 200 ಪಾಸಿಟಿವ್ ಪ್ರಕರಣಗಳಲ್ಲಿ ಡೆಲ್ಟಾ ಪಾಸಿಟಿವ್ ದೃಢಪಟ್ಟಿದೆ. ಅಂದರೆ ನಗರದ ಶೇ 70 ಪ್ರಕರಣಗಳಲ್ಲಿ ಡೆಲ್ಟಾ ದೃಢಪಡುತ್ತಿದೆ. ಏಪ್ರಿಲ್​ನಲ್ಲಿ ಅತ್ಯಂತ ವೇಗವಾಗಿ ಪ್ರಕರಣಗಳು ಹರಡಿವೆ. ಆದರೆ, ಇದು ವಿಶ್ವದ ಎಲ್ಲಾ ದೇಶಗಳಲ್ಲಿ ಕೂಡಾ ಹಬ್ಬುತ್ತಿದೆ ಎಂದರು.

ವೈದ್ಯರು, ನರ್ಸ್​ಗಳು, ಮೆಡಿಕಲ್ ಸಿಬ್ಬಂದಿ ಎಷ್ಟೇ ಕಷ್ಟ ಆದರೂ ಮಾಸ್ಕ್ ಧರಿಸಿ ಜನರ ಜೀವ ರಕ್ಷಿಸುತ್ತಿದ್ದಾರೆ. ಹೀಗಾಗಿ, ಜನರೂ ಇದನ್ನು ಶಿಸ್ತಿನಿಂದ ಪಾಲನೆ ಮಾಡಬೇಕು. ಎರಡು, ಮೂರು ತಿಂಗಳು ಕಳೆದರೂ ಕೆಲವು ಸೋಂಕಿತರ ಸಂಪರ್ಕ ಸಾಧ್ಯವಾಗದ ಕಾರಣ ಈವರೆಗೆ ಅವರನ್ನು ಸಕ್ರಿಯ ಪ್ರಕರಣದಲ್ಲಿ ಇಡಲಾಗಿತ್ತು. ಆದರೆ, ಇನ್ನು ಮುಂದೆ ಸಕ್ರಿಯ ಪ್ರಕರಣದಿಂದ ತೆಗೆಯಲಾಗುವುದು. ಇಷ್ಟು ಸಮಯಗಳ ಬಳಿಕ ಅವರಿಂದ ಬೇರೆಯವರಿಗೆ ವೈರಸ್ ಹರಡಲು ಸಾಧ್ಯವಾಗುವುದಿಲ್ಲ. ತಜ್ಞರ ಸಲಹೆ ಮೇರೆಗೆ ಆ್ಯಕ್ಟಿವ್ ಪ್ರಕರಣ ಎಂದು ಪರಿಗಣಿಸಲಾಗುವುದು ಎಂದರು.

ಸರ್ಕಾರದ ಆದೇಶದ ಪ್ರಕಾರ, ಗಡಿ ಪ್ರದೇಶದಿಂದ ಬರುವ ಜನರಿಗೆ ಆರ್​ಟಿ-ಪಿಸಿಆರ್ ಸೋಂಕು ಪರೀಕ್ಷೆ ಕಡ್ಡಾಯ ಮಾಡಲಾಗಿತ್ತು. ಬೆಂಗಳೂರಿಗೆ ಇದು ಸಂಬಂಧ ಇಲ್ಲ. ಆದರೆ‌ ನಗರಕ್ಕೆ ಹೊಸದಾಗಿ ಬರುವವರ ಬಗ್ಗೆ ಸುತ್ತಮುತ್ತಲಿನವರು ಗಮನಹರಿಸಬೇಕಾಗುತ್ತದೆ. ಅಗತ್ಯಬಿದ್ದರೆ ಮನೆಗೆ ಬಂದು ಟೆಸ್ಟ್ ಮಾಡಲಾಗುತ್ತದೆ ಎಂದರು. ದಿನಕ್ಕೆ 70-80 ಸಾವಿರ ವ್ಯಾಕ್ಸಿನ್ ವಿತರಣೆ ಕೂಡಾ ನಡೆಯುತ್ತಿದೆ. ನಿನ್ನೆ ತಡರಾತ್ರಿ ಬೆಂಗಳೂರಿನ ಪಾಲಿನ ವ್ಯಾಕ್ಸಿನ್ ಬಂದಿದೆ. ಇಂದು ಹಂಚಿಕೆ ಮಾಡಲಾಗುತ್ತಿದೆ ಎಂದರು.

Last Updated : Jul 2, 2021, 2:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.