ETV Bharat / city

ಬಿಎಸ್​ವೈ ಮಾತು ಕೊಟ್ಟ ಹಾಗೆ ನಡೆದುಕೊಂಡಿದ್ದಾರೆ: ಬಸವರಾಜ​ ಬೊಮ್ಮಾಯಿ - yediyurappa resignation

2 ವರ್ಷ ಉತ್ತಮ ಸಾಧನೆಗಳನ್ನು ಮಾಡಿರುವ ಜೊತೆಗೆ ಪಕ್ಷದ ವರಿಷ್ಠರ ಸೂಚನೆಯಂತೆ ಸಂಪೂರ್ಣ ಒಪ್ಪಿಗೆಯೊಂದಿಗೆ ಬಿ.ಎಸ್.​ಯಡಿಯೂರಪ್ಪ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಗೃಹ ಸಚಿವ ಬಸವರಾಜ​ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ​ ಬೊಮ್ಮಾಯಿ

author img

By

Published : Jul 26, 2021, 1:38 PM IST

ಬೆಂಗಳೂರು: ಬಿ.ಎಸ್.​ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರ ಕುರಿತು ಗೃಹ ಸಚಿವ ಬಸವರಾಜ​ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಜನ ನಾಯಕ, ಯಾವಾಗಲೂ ಜನರೊಂದಿಗೆ ಇದ್ದು, ಬಿಎಸ್​ವೈ ರಾಜಕಾರಣ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಪಕ್ಷದ ಶಿಸ್ತಿನ ನಾಯಕರು ಕೂಡ ಹೌದು. 2 ವರ್ಷ ಉತ್ತಮ ಸಾಧನೆಗಳನ್ನು ಮಾಡಿರುವ ಜೊತೆಗೆ ಪಕ್ಷದ ವರಿಷ್ಠರ ಸೂಚನೆಯಂತೆ ಸಂಪೂರ್ಣ ಒಪ್ಪಿಗೆಯೊಂದಿಗೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಬಹಳ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಮಾರ್ಗದರ್ಶನ ಸದಾ ನಮಗೆ ಇರುತ್ತದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ​ ಬೊಮ್ಮಾಯಿ

ಇನ್ನು ರಾಜೀನಾಮೆ ನೀಡುವ ಕುರಿತು ನಿಮಗೆ ಮೊದಲೇ ಸೂಚನೆ ಕೊಟ್ಟಿದ್ದರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಒಂದು ವಾರದ ಹಿಂದೆಯೇ 25 ಅಥವಾ 26 ಕ್ಕೆ ಹೈಕಮಾಂಡ್​ನಿಂದ ಸೂಚನೆ ಬರುತ್ತದೆ ಅದಕ್ಕೆ ಕಾಯುತ್ತಿದ್ದೇನೆ ಎಂದಿದ್ದರು. ಇದೀಗ ಮಾತು ಕೊಟ್ಟ ಹಾಗೆ ನಡೆದುಕೊಂಡಿದ್ದಾರೆ ಎಂದರು.

ಮುಂದಿನ ಸಿಎಂ ರೇಸ್​ನಲ್ಲಿ ನಿಮ್ಮ ಹೆಸರು ಇದೆಯಾ ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಶಾಸಕರು, ಸಚಿವರು, ವರಿಷ್ಠರು ಸೇರಿ ಚಿಂತನೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.