ETV Bharat / city

ಬಸವ ಪಥದಲ್ಲಿ ನಮ್ಮ ಸರ್ಕಾರ ಮುಂದುವರೆಯಲಿದೆ.. ಸಿಎಂ ಬೊಮ್ಮಾಯಿ - ಬಸವ ಜಯಂತಿಯಲ್ಲಿ ಸಿಎಂ ಬೊಮ್ಮಾಯಿ ಭಾಷಣ

ಸರ್ವರಿಗೂ ಸಮಾನತೆಯ ಪಥದಲ್ಲಿ ನಮ್ಮ ಸರ್ಕಾರ ಮುಂದವರೆಯಲಿದೆ ಎಂದು ಸಿಎಂ ಬೊಮ್ಮಾಯಿ ಬಸವ ಸಮಾರಂಭದಲ್ಲಿ ತಿಳಿಸಿದ್ದಾರೆ..

Basava Shree award function in Bengaluru, Basava Jayanti celebration in Bengaluru, CM Bommai speech in Basava jayanti, Bengaluru news, ಬೆಂಗಳೂರಿನಲ್ಲಿ ಬಸವ ಶ್ರೀ ಪ್ರಶಸ್ತಿ ಸಮಾರಂಭ, ಬೆಂಗಳೂರಿನಲ್ಲಿ ಬಸವ ಜಯಂತಿ ಆಚರಣೆ, ಬಸವ ಜಯಂತಿಯಲ್ಲಿ ಸಿಎಂ ಬೊಮ್ಮಾಯಿ ಭಾಷಣ, ಬೆಂಗಳೂರು ಸುದ್ದಿ,
ಬಸವ ಜಯಂತಿ ಸಮಾರಂಭ
author img

By

Published : May 7, 2022, 1:55 PM IST

Updated : May 7, 2022, 3:00 PM IST

ಬೆಂಗಳೂರು : ಕಾಯಕ ಸಮಾಜ, ಸಮಾನತೆ ಸಮಾಜ, ಎಲ್ಲರಿಗೂ ಸಮಾನ ಬದುಕಿಗೆ ಅವಕಾಶ ನೀಡುವ ಸಮಾಜ ನಿರ್ಮಾಣ, ಸೈದ್ದಾಂತಿಕ, ವೈಜ್ಞಾನಿಕ ಸಮಾಜ ನಿರ್ಮಾಣ ಮಾಡುವ ಕೆಲಸ ಬಸವಣ್ಣ ಮಾಡಿದ್ದರು. ಅದನ್ನು ಮುಂದುವರೆಸಿಕೊಂಡು ಹೋಗುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಬಸವಪಥದಲ್ಲಿ ನಮ್ಮ ಸರ್ಕಾರ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಬಸವ ಜಯಂತಿ ಸಮಾರಂಭ ಹಾಗೂ 'ಬಸವ ಶ್ರೀ' ಪ್ರಶಸ್ತಿ ಮತ್ತು 'ವಚನ ಸಾಹಿತ್ಯ ಶ್ರೀ' ಪ್ರಶಸ್ತಿ ಪ್ರದಾನ ರಜತ ಮಹೋತ್ಸವ ಸಂಭ್ರಮವನ್ನ ಬಸವ ವೇದಿಕೆಯಿಂದ ಆಯೋಜಿಸಲಾಗಿತ್ತು. ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಕುಲಪತಿ ಪದ್ಮಶ್ರೀ ಡಾ.ಹೆಚ್.ಆರ್.ನಾಗೇಂದ್ರ ಅವರಿಗೆ ಬಸವಶ್ರೀ ಪ್ರಶಸ್ತಿ ಮತ್ತು ಬೀದರ್​ನ ಬಸವ ಸೇವಾ ಪ್ರತಿಷ್ಠಾನದ ಡಾ.ಗಂಗಾಂಬಿಕಾರಿಗೆ ವಚನ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

Basava Shree award function in Bengaluru, Basava Jayanti celebration in Bengaluru, CM Bommai speech in Basava jayanti, Bengaluru news, ಬೆಂಗಳೂರಿನಲ್ಲಿ ಬಸವ ಶ್ರೀ ಪ್ರಶಸ್ತಿ ಸಮಾರಂಭ, ಬೆಂಗಳೂರಿನಲ್ಲಿ ಬಸವ ಜಯಂತಿ ಆಚರಣೆ, ಬಸವ ಜಯಂತಿಯಲ್ಲಿ ಸಿಎಂ ಬೊಮ್ಮಾಯಿ ಭಾಷಣ, ಬೆಂಗಳೂರು ಸುದ್ದಿ,
ಬಸವ ಜಯಂತಿ ಸಮಾರಂಭ

ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಮ್ಮಲ್ಲಿ ಎರಡು ಬಗೆಯ ರಾಜಕಾರಣಿಗಳಿದ್ದಾರೆ. ಸಮಸ್ಯೆ ಹುಟ್ಟು ಹಾಕಿ ರಾಜಕಾರಣ ಮಾಡುವ ವರ್ಗ ಒಂದಾದರೆ, ಮತ್ತೊಂದು ವರ್ಗ ಪರಿಹಾರ ಹುಡುಕಿ ರಾಜಕಾರಣ ಮಾಡುತ್ತದೆ. 75 ವರ್ಷದಲ್ಲಿ ಬೇಕಾದಷ್ಟು ಸಮಸ್ಯೆ ಹುಟ್ಟು ಹಾಕಿದ್ದಾರೆ. ನಮಗೆ ಪರಿಹಾರ ನೀಡುವ ರಾಜಕಾರಣಿಗಳು ಬೇಕು. ಆ ಸವಾಲು ಎದುರಿಸುವ ಕೆಲಸ ಆಗಬೇಕಿದೆ ಎಂದು ಕಾಂಗ್ರೆಸ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಪರಿಹಾರ ಹುಡುಕುವ ಕೆಲಸವನ್ನು ಪ್ರಲ್ಹಾದ್ ಜೋಶಿ ಮಾಡಿಕೊಂಡು ಬಂದಿದ್ದಾರೆ. ಸೋಮಣ್ಣ ಪಾದರಸದಂತೆ ಕೆಲಸ ಮಾಡುತ್ತಾರೆ. ಅವರು ಯುವಕರು ನಾಚುವಂತೆ ಕೆಲಸ ಮಾಡುತ್ತಿದ್ದಾರೆ ಎಂದು ಸ್ವಪಕ್ಷೀಯ ನಾಯಕರನ್ನು ಸಿಎಂ ಕೊಂಡಾಡಿದರು.

ನಾವೆಲ್ಲಾ ಬಸವಣ್ಣನ ಬಗ್ಗೆ ಬಹಳ ಒಳ್ಳೆಯ ಮಾತನಾಡುತ್ತೇವೆ. ವಿಚಾರ ಹೊಗಳುತ್ತೇವೆ. ವಚನ ನಿರರ್ಗಳವಾಗಿ ಹೇಳುತ್ತೇವೆ. ಆದರೆ, ಆಚರಣೆಯಲ್ಲಿ ಎಷ್ಟು ಹಿಂದುಳುದಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಬಸವಣ್ಣನ ವಿಚಾರಗಳ ಇಂದಿಗೂ ಪ್ರಸ್ತುತ ಎಂದರೆ ಬಸವಣ್ಣ ಅಂದು ಅಸಮಾನತೆ, ಲಿಂಗ ಬೇಧದ ವಿರುದ್ಧ ಹೋರಾಟ ಮಾಡಿದ್ದರು. ಅದೆಲ್ಲಾ ಈಗಲೂ ಇದೆ ಎಂದೇ ಅರ್ಥ. 800 ವರ್ಷವಾದರೂ ಅದನ್ನು ತೊಡೆದು ಹಾಕಿಲ್ಲ. ಹಾಗಾಗಿ, ನಾವೆಲ್ಲಾ ಇದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಓದಿ: ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಒಪ್ಪಿಗೆ: 3 ವರ್ಷಗಳೊಳಗೆ ಕಾಮಗಾರಿ ಮುಗಿಸಲು ಸಿಎಂ ಸೂಚನೆ

ಬಸವಣ್ಣ ನಮ್ಮಂತೆಯೇ ಮಾನವರಾಗಿ ಹುಟ್ಟಿದ್ದವರು. ಅವರನ್ನು ದೇವರನ್ನಾಗಿ ಮಾಡಬೇಡಿ. ಬಸವಣ್ಣನ ಪ್ರೇರಣೆಯೊಂದಿಗೆ ಹೆಜ್ಜೆ ಹಾಕಬೇಕಿದೆ. ಹಲವಾರು ಕಂದಾಚಾರ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ನಮ್ಮ ಬದುಕನ್ನು ನಾವು ನಿಯಂತ್ರಣ ಮಾಡಬೇಕು. ಮತ್ತೊಬ್ಬರ ಕೈಗೆ ಕೊಡುವುದಲ್ಲ. ಯಾರೋ ನಮ್ಮ ಭವಿಷ್ಯ ಬದಲಾಯಿಸಲಿದ್ದಾರೆ ಎನ್ನುವ ನಿರೀಕ್ಷೆ ಸರಿಯಲ್ಲ ಎನ್ನುತ್ತಾ ಹಲವು ಕಂದಾಚಾರಗಳಿಂದ ಮಧ್ಯವರ್ತಿಗಳನ್ನು ದೂರಮಾಡಿದ್ದರು ಎಂದರು.

ಆಧ್ಯಾತ್ಮಿಕ ದೇವದತ್ತಕ ವಿಚಾರವನ್ನು ಉದಾಹರಣೆ ಸಮೇತ ಹೇಳಿ ಜೀವನದಲ್ಲಿ ಅಳವಡಿಸಿಕೊಳ್ಳುವುದನ್ನು ಬಸವಣ್ಣ ಹೇಳಿದ್ದಾರೆ. ಕನ್ನಡಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರಿಬ್ಬರೇ ವಚನ ಬರೆಯಲಿಲ್ಲ. ನೂರಾರು ಜನರಿಗೆ ಪ್ರೇರೇಪಣೆ ನೀಡಿ ವಚನ ಬರೆಸಿದ್ದಾರೆ. ಇದನ್ನು ಜಗತ್ತಿನಲ್ಲಿ ಯಾರೂ ಮಾಡಲಿಲ್ಲ. ಬೌದ್ದ ಧರ್ಮದಲ್ಲಿ ಬುದ್ದ ಹೇಳಿದ್ದನ್ನು ಪ್ರಚಾರ ಮಾಡುತ್ತಿದ್ದಾರೆ. ಆದರೆ ಬಸವಣ್ಣ ನಿಮ್ಮ ಚೈತನ್ಯ ಶಕ್ತಿಯನ್ನು ನೀವು ಜಗತ್ತಿಗೆ ಹೇಳಿ ಎಂದರು. ಇದೇ ವ್ಯತ್ಯಾಸ. ಈ ಸೂಕ್ಷ್ಮತೆ ತಿಳಿದುಕೊಂಡವರಿಗೆ ಬಸವಣ್ಣನ ಪರಿಪೂರ್ಣತೆ ಅರ್ಥವಾಗಲಿದೆ.

ಬಸವ ಜಯಂತಿ ಸಮಾರಂಭ

ಜಗತ್ತಿನ ಎಲ್ಲ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರ ಇದೆ. ಪಾಶ್ಚಿಮಾತ್ಯದಲ್ಲಿ ಜಾಲ್ತಿಯಲ್ಲಿರುವ 10 ಕಮಾಂಡ್​ಗಳಿಗೂ ಮುನ್ನ ಈ ತತ್ವ ಸಾರಿದ್ದು ಬಸವಣ್ಣ. ಬಸವಣ್ಣ ದೊಡ್ಡ ಆರ್ಥಿಕ ತಜ್ಞ, ಸಮಾಜ ಸುಧಾರಕ, ಮಾನವತಾವಾದಿ. ಅವರು ಕನ್ನಡ ನಾಡಿನಲ್ಲಿ ಹುಟ್ಟಿದ್ದು ನಮ್ಮ ಸೌಭಾಗ್ಯ ಎಂದರು.

ಪ್ರಧಾನಿ ಮೋದಿ ಮೋದಿ ಸರ್ವರಿಗೂ ಸಮಪಾಲು, ಸಮಬಾಳು, ಕಾಯಕವೇ ಕೈಲಾಸ ಎನ್ನುವ ವಿಚಾರ ಸೇರಿಸಿ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಎಂದಿದ್ದಾರೆ. ಬಸವಣ್ಣನ ಪ್ರಭಾವ ಮೋದಿ ಅವರಿಗಿದೆ. ಹೊಸ ಸಂಸತ್ ಕಟ್ಟಡದ ಅಡಿಗಲ್ಲು ಹಾಕುವ ವೇಳೆ ಮೋದಿ ಬಸವಣ್ಣನವರ ಬಗ್ಗೆ ಹೇಳಿದ್ದಾರೆ. ನಮ್ಮ ಸರ್ಕಾರ ಬಸವಣ್ಣನ ಸಂದೇಶದ ಮಾದರಿಯಲ್ಲಿ ಹೋಗಲಿದೆ. ಯಾವ ವರ್ಗಕ್ಕೆ ದುಡಿಯುವ ಅವಕಾಶವಿಲ್ಲವೋ ಅವರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ದೇಶದ ಬೆಳವಣಿಗೆಯಲ್ಲಿ ರಾಜ್ಯದ ತಲಾವಾರು ಆದಾಯದ ಕೊಡುಗೆ ಶೇ. 4 ರಷ್ಟು ಮಾತ್ರವಿದೆ. ಶೇ. 30 ಮಂದಿ ಮಾತ್ರ ಕೊಡುಗೆ ನೀಡುತ್ತಿದ್ದಾರೆ. ಶೇ. 70 ಕೇವಲ ಕುಟುಂಬ ನಿರ್ವಹಣೆಗೆ ಸೀಮಿತವಾಗಿದೆ. ಹಾಗಾಗಿ ಅವರ ಆರ್ಥಿಕ ಸ್ಥಿತಿ ಹೆಚ್ಚಾಗಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರ ಅವರಿಗೆ ಅವಕಾಶ ಮಾಡಿಕೊಡಲಿದೆ ಎಂದರು.

ದುಡ್ಡೆ ದೊಡ್ಡಪ್ಪ ಎನ್ನುವ ಪರಿಕಲ್ಪನೆಯಲ್ಲಿ ಬದಲಾವಣೆ ಆಗಬೇಕು. ಇದನ್ನು ಬದಲಿಸುವ ಕೆಲಸವನ್ನು ನಾವು ಮಾಡುತ್ತಿದ್ದೇನೆ. ದುಡಿಮೆಯೇ ದೊಡ್ಡಪ್ಪ ಆಗಬೇಕು. ಉತ್ಪಾದನೆಯಿಂದ ಆರ್ಥಿಕತೆ ಬೆಳೆಯಲಿದೆ. ದೇಶ ಕಟ್ಟುವ ಕೆಲಸವನ್ನು ರೈತರು, ಕಾರ್ಮಿಕರು ಮಾಡುತ್ತಿದ್ದಾರೆ. ಯಾವ ದೇಶದಲ್ಲಿ ದುಡಿಮೆಗೆ ಗೌರವವಿದೆಯೋ ಅಲ್ಲಿ ಬಡತನ ಇರುವುದಿಲ್ಲ. ಎಲ್ಲಿ ದುಡಿಮೆಗೆ ಗೌರವವಿಲ್ಲವೋ ಅಲ್ಲಿ ಬಡತನ ಇರಲಿದೆ. ಹಾಗಾಗಿ ಕಾಯಕವೇ ಕೈಲಾಸ. ನಿಮ್ಮ ಕಾಯಕ ನೀವು ಮಾಡಿದರೆ ಪೂಜೆ ಮಾಡುವ ಅಗತ್ಯವಿಲ್ಲ. ಅದೇ ನಿಮಗೆ ಸ್ವರ್ಗ ಎಂದು ಕರೆ ನೀಡಿದ ಸಿಎಂ ಬಸವ ಸಮಿತಿಯ ಬಸವ ಜಯಂತಿ ಆಚರಣೆಯ ಸಮಾರಂಭವನ್ನು ಮುಂದಿನ ಬಾರಿ ದೆಹಲಿಯಲ್ಲಿ ಮಾಡೋಣ ಎಂದರು.

ಓದಿ: 'ಬಸವ ಭೂಷಣ ಪ್ರಶಸ್ತಿ' ಪ್ರದಾನ: ಶನಿವಾರ ಬಿಎಸ್‌ವೈ ದುಬೈ ಪ್ರಯಾಣ

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಬಸವಣ್ಣನವರ ವಿಚಾರ, ನಡೆ, ನುಡಿಯನ್ನು ಜನರಿಗೆ ಇವತ್ತಿನ ಸಮಾಜಕ್ಕೆ ನೆನಪು ಮಾಡಿಕೊಡುವುದು, ಕಲಿಸುವುದು ಬಹಳ ಅಗತ್ಯವಿದೆ. ನಮ್ಮಲ್ಲಿನ ಜಾತ್ಯಾತೀತ ವ್ಯವಸ್ಥೆ, ಪ್ರಜಾಪ್ರಭುತ್ವದ ಬಗ್ಗೆ ಬಹಳ ಜನ ಮಾತನಾಡುತ್ತಾರೆ. ಆದರೆ ಇಷ್ಟು ವರ್ಷ ಇರುವ ಶಿಕ್ಷಣದ ಪದ್ದತಿಯೂ ಇದಕ್ಕೆ ಒಂದು ಕಾರಣ. ಯಾವುದು ನಮ್ಮದೋ ಅದು ನಮಗೆ ಕಾಣಿಸುವುದಿಲ್ಲ. ಪ್ರಜಾಪ್ರಭುತ್ವ ತಾಯಿ ಇಂಗ್ಲೆಂಡ್ ಎನ್ನುತ್ತಾರೆ. ಆದರೆ 12 ನೇ ಶತಮಾನದಲ್ಲಿಯೇ ಸಮಾನತೆಯ ಸಂದೇಶ ಸಾರಿ, ಜಗತ್ತಿನ ಮುಂದಿಟ್ಟ ಜಗತ್ತಿನ ಪ್ರಥಮ ಪ್ರಜಾಪ್ರಭುತ್ವವಾದಿ ಬಸವಣ್ಣ ಎಂದರು.

ಬಸವಣ್ಣ ಅಂದೇ ಅನುಭವ ಮಂಟಪ ಮಾಡಿದರು. ಕಾಯಕದ ಬಗ್ಗೆ ಮನುಷ್ಯನಿಗೆ ತಿಳಿ ಹೇಳುವ ಬಗೆ ಅಂದೇ ಹೇಳಿದ್ದರು. ಜೀವನದ ಪದ್ದತಿ ವಿಕಾಸಗೊಳಿಸುವ ಜನರಿಗೆ ಸಂಸ್ಕಾರ ಕೊಡುವ ಕೆಲಸ ಮಾಡಿದರು . ನಿಜವಾದ ಸಂಸತ್ ಆಗಿ ಅನುಭವ ಮಂಟಪ ಪರಿವರ್ತನೆ ಆಗಿತ್ತು. ತಳ ಸಮುದಾಯದ ಬಗ್ಗೆ ಇಂದು ಮಾತನಾಡುತ್ತಾರೆ. ಎಡ ಪಂಥದ ವಾದ ಬಂದ ನಂತರ ನಾವೇ ತಳ ಸಮುದಾಯದ ಬಗ್ಗೆ ಮೊದಲು ದನಿ ಎತ್ತಿದ್ದು ಎಂದು ಹೇಳುತ್ತಿದ್ದಾರೆ. ಆದರೆ ಅಂದೇ ಬಸವಣ್ಣ ಅದನ್ನು ಮಾಡಿದ್ದರು. ಬಸವಣ್ಣ ಸಂಘರ್ಷ ಹೇಳಲಿಲ್ಲ, ಸಮನ್ವಯತೆಯ ಸಂದೇಶ ಸಾರಿದ್ದರು ಎಂದು ಹೇಳಿದರು.

ಪ್ರಜಾಪ್ರಭುತ್ವದ ತಾಯಿ ಇಂಗ್ಲಂಡ್ ಎನ್ನುತ್ತಾರೆ. ಆದರೆ ಅಲ್ಲಿ ತೀರಾ ಇತ್ತೀಚಿನವರೆಗೂ ಮಹಿಳೆಯರಿಗೆ ಮತದಾನದ ಹಕ್ಕು ಕೊಟ್ಟಿರಲಿಲ್ಲ. ಆದರೆ ನಮ್ಮಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಮಹಿಳೆಯರಿಗೆ ಮತದಾನದ ಹಕ್ಕು ಕೊಡಲಾಗಿದೆ. ಜಗತ್ತಿನಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದ್ದರೂ ಭಾರತ ಶಾಂತವಾಗಿದೆ. ಕೌಟುಂಬಿಕ ಪದ್ದತಿ, ಸಂಸ್ಕಾರದ ಕಾರಣಕ್ಕೆ ಹೀಗಿದೆ. ಜಗತ್ತಿನ ಅನೇಕ ಪ್ರಥಮಗಳನ್ನು ಕೊಟ್ಟಿರುವುದು ಭಾರತ ಎಂದರು.

ನಮ್ಮ ಸರ್ಕಾರ ಸಮಾನತೆಯತ್ತ ಹೋಗುತ್ತಿದೆ. ‘ಭೇಟಿ ಬಚಾವೋ, ಭೇಟಿ ಪಡಾವೋ’ ತರಲಾಗಿದೆ. ಸೈನ್ಯದಲ್ಲೂ ಅವಕಾಶ ನೀಡಲಾಗಿದೆ. ನಾಸಾದಿಂದ ಯೋಗದವರೆಗೆ ಮಹಿಳೆಯರು ಪುರುಷರಿಗೆ ಮೀರಿನಸಾಧನೆ ಮಾಡುತ್ತಿದ್ದಾರೆ. ಆದರೆ ಶಾಲೆಗಳಲ್ಲಿ ಇಂದು ಬಸವಣ್ಣನ ಕಾಲದ ಸಂಸ್ಕಾರ ಸಿಗದ ಕಾರಣ ವಿದ್ಯಾರ್ಥಿಗಳು ಸ್ವಾರ್ಥಿಗಳಾಗುತ್ತಿದ್ದಾರೆ. ನಾವು ಅಕ್ಷರಸ್ಥರನ್ನ ತಯಾರು ಮಾಡುತ್ತಿದ್ದೇವೆಯೇ ಹೊರತು ಅವಿದ್ಯಾವಂತರನ್ನಲ್ಲ‌. ಮೋದಿ ವಿರೋಧ ಮಾಡಲು ಎಲ್ಲವನ್ನೂ ವಿರೋಧಿಸುವ ಪರಿಪಾಠ ನಡೆಯುತ್ತಿದೆ. ಮುಂದಿನ ಪೀಳಿಗೆಗೆ ಅಗಾಧ ದಿಕ್ಕು ಕೊಡುವ ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಅದರ ಬಗ್ಗೆ ವೇದಿಕೆಗಳಲ್ಲಿ ಚರ್ಚೆಯಾಗಬೇಕು. ಮಕ್ಕಳು ಮಾರ್ಕ್ಸ್ ವಾದಿಗಳಾಗಿದ್ದಾರೆ. ಕೇವಲ ಅಂಕಗಳಿಕೆ ಅವರಿಗೆ ಮುಖ್ಯವಾಗಿದೆ. ಇದು ಬದಲಾಗಬೇಕು ಎಂದರು.

Last Updated : May 7, 2022, 3:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.