ETV Bharat / city

ಜಾರಕಿಹೊಳಿ‌-ಯತ್ನಾಳ್ ಲಂಚ್​ ಮೀಟ್.. ಈಗ್ಲೇ ಸಂಪುಟ ಪುನಾರಚನೆ ಮಾಡದಿದ್ರೆ ಎಲ್ಲ ಬಿಜೆಪಿ ಬಿಟ್ಟು ಹೋಗ್ತಾರೆ.. ಯತ್ನಾಳ್ ಎಚ್ಚರಿಕೆ

ಡಿಕೆ ಶಿವಕುಮಾರ್ ಜೊತೆಗೆ ಸೀಟ್ ಬಗ್ಗೆ ಮಾತಾಡ್ಕೊಂಡಿದ್ದಾರೆ. ಅದರ ಬಗ್ಗೆ ನಮಗೆ ಮಾಹಿತಿ ಇದೆ. ಚುನಾವಣೆ ಘೋಷಣೆ ಆದ ಬಳಿಕ ಸಚಿವ ಸ್ಥಾನ ಮತ್ತು ಬಿಜೆಪಿಗೆ ರಾಜೀನಾಮೆ ಕೊಟ್ಟು ಹೋಗುತ್ತಾರೆ. ನಂತರ ಯತ್ನಾಳ್​ ಬೇಕು, ಜಾರಕಿಹೊಳಿ‌ ಬೇಕು ಅಂತಾ ಹುಡುಕಿದರೆ ಆಗಲ್ಲ. ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಆಗಲಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು. ಸಂಪುಟ ಪುನಾರಚನೆ ಬೇಗ ಆಗಬೇಕು..

author img

By

Published : Jan 24, 2022, 5:13 PM IST

meet
ಜಾರಕಿಹೊಳಿ‌-ಯತ್ನಾಳ್ ಲಂಚ್​ ಮೀಟ್:

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ವಿಷಯ ಕುರಿತು ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ರಮೇಶ್ ಜಾರಕಿಹೊಳಿ‌ ಮತ್ತು ಬಸನಗೌಡ ಯತ್ನಾಳ್ ಭೋಜನ ಕೂಟದ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಸದಾಶಿವನಗರದಲ್ಲಿರುವ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ನಿವಾಸಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿದರು. ಉಭಯ ನಾಯಕರು ಲಂಚ್ ಮೀಟ್ ಮಾಡಿದ್ದು, ಸಚಿವ‌ ಸಂಪುಟ ವಿಸ್ತರಣೆ ಸಾಧ್ಯತೆ ಕುರಿತ ವಿದ್ಯಮಾನಗಳು ಬಗ್ಗೆ ಮಾತುಕತೆ ನಡೆಸಿದರು.

ಇತ್ತೀಚೆಗೆ ರೇಣುಕಾಚಾರ್ಯ ಜೊತೆ ಸಭೆ ನಡೆಸಿದ್ದ ಯತ್ನಾಳ್ ಇಂದು ಜಾರಕಿಹೊಳಿ‌ ಜೊತೆ ಡಿನ್ನರ್ ಮೀಟ್ ನಡೆಸಿರುವುದು ಬಿಜೆಪಿ ಪಾಳಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ನಿನ್ನೆ ಬೆಳಗಾವಿಯಲ್ಲಿ ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆದಿದೆ ಎನ್ನುವ ಮಾತುಗಳು ಕೇಳಿ ಬಂದ ಬೆನ್ನಲ್ಲೇ ರಮೇಶ್ ಜಾರಕಿಹೊಳಿ‌ ನಿವಾಸದಲ್ಲಿ ನಡೆದ ಸಭೆ, ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ.

ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮಾಧ್ಯಮದವರೊಂದಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಮಾತಮಾಡಿರುವುದು..

ಸಂಪುಟ ಪುನಾರಚನೆ ಬಗ್ಗೆ ಸಿಎಂ ನಿರ್ಧಾರ ಒಪ್ಪುತ್ತೇವೆ : ಸಭೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ‌, ಬೆಳಗಾವಿಯಲ್ಲಿ ನಡೆದ ಪ್ರತ್ಯೇಕ ಸಭೆಗೆ ಹೋಗಿಲ್ಲ, ನಾನು ಅಂತಹ ಸಭೆಗೆ ಹೋಗಲ್ಲ. ಪ್ರೀತಿ ಇರುವ ಸಭೆಗೆ ಹೋಗುತ್ತೇನೆ.

ನಮ್ಮ ಹೈಕಮಾಂಡ್‌ನಲ್ಲಿ ಬಹಳ ಬುದ್ದಿವಂತರಿದ್ದಾರೆ. ಯಾರು ಏನು ಮಾಡುತ್ತಾರೆ, ಅವರಿಗೆ ಎಲ್ಲ ಗೊತ್ತಿದೆ. ಅವತ್ತಿನ ಸಭೆಗೆ ಕುಮಟಳ್ಳಿಗೆ ಆಹ್ವಾನ‌ ಇತ್ತು. ಅವರು ಬೆಂಗಳೂರಿನಲ್ಲಿ ಇದ್ದರು. ಹಾಗಾಗಿ, ಹೋಗಿರಲಿಲ್ಲ. ಸಂಪುಟ ಪುನಾರಚನೆ ಬಗ್ಗೆ ಸಿಎಂ ನಿರ್ಧಾರವನ್ನು ಒಪ್ಪುತ್ತೇವೆ ಎಂದರು.

ಇವತ್ತು ನಾನು ಮತ್ತು ಯತ್ನಾಳ್ ನೀರಾವರಿ ಯೋಜನೆಗಳ ವಿಷಯದ ಬಗ್ಗೆ ಚರ್ಚೆಗೆ ಸೇರಿದ್ದೆವು. ಸಂಪುಟ ಪುನಾರಚನೆ ಬಗ್ಗೆ ವೈಯಕ್ತಿಕ ಅಭಿಪ್ರಾಯ ಇಲ್ಲ. ಸಿಎಂ ಭೇಟಿ ಮಾಡಿ ಅಭಿವೃದ್ಧಿ ಕುರಿತು ಮಾತಾಡಿದ್ದೇವೆ. ಕ್ಷೇತ್ರದ ಶಾಸಕನಾಗಿ ಭೇಟಿ ಮಾಡೋದು ನನ್ನ ಕರ್ತವ್ಯ ಎಂದರು. ಕಾಂಗ್ರೆಸ್ ಮಹಾದಾಯಿ ಹೋರಾಟ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ, ಮೊದಲು ಕೃಷ್ಣ ನಡಿಗೆ ಏನಾಯ್ತು ಅದರ ಬಗ್ಗೆ ಕಾಂಗ್ರೆಸ್ ಉತ್ತರ ನೀಡಲಿ ಎಂದರು.

ಇದನ್ನೂ ಓದಿ: ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲ: ಸಚಿವ ಹಾಲಪ್ಪ ಆಚಾರ್

ನಂತರ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ರಮೇಶ ಜಾರಕಿಹೊಳಿ ಊಟಕ್ಕೆ ಸೇರಿದ್ದೆವು. ಸಂಪುಟ ಪುನಾರಚನೆ ಶೀಘ್ರವಾಗಿ ಆಗಬೇಕು. ವಾರದೊಳಗೆ ಮಾಡಿದರೆ ಒಳ್ಳೆಯದು. ನಂತರ ಪುನಾರಚನೆಯಾದರೆ ಉಪಯೋಗ ಇಲ್ಲ. ಯಾಕೆಂದರೆ, ಉತ್ತರಪ್ರದೇಶದಲ್ಲಿ ಆದಂತೆ ಅಧಿಕಾರ ಅನುಭವಿಸಿದ ನಂತರ ಹೋಗುತ್ತಾರೆ. ಮೌರ್ಯ ರೀತಿ ಪಕ್ಷ ಬಿಟ್ಟು ಹೋಗುತ್ತಾರೆ. ಜಾತ್ರೆ ಮಾಡ್ಕೊಂಡು ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.

ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಮಾಧ್ಯಮದವರೊಂದಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿರುವುದು..

ಡಿಕೆಶಿ ಜೊತೆಗೆ ಸೀಟ್ ಬಗ್ಗೆ ಮಾತಾಡ್ಕೊಂಡಿದ್ದಾರೆ : ಡಿಕೆ ಶಿವಕುಮಾರ್ ಜೊತೆಗೆ ಸೀಟ್ ಬಗ್ಗೆ ಮಾತಾಡ್ಕೊಂಡಿದ್ದಾರೆ. ಅದರ ಬಗ್ಗೆ ನಮಗೆ ಮಾಹಿತಿ ಇದೆ. ಚುನಾವಣೆ ಘೋಷಣೆ ಆದ ಬಳಿಕ ಸಚಿವ ಸ್ಥಾನ ಮತ್ತು ಬಿಜೆಪಿಗೆ ರಾಜೀನಾಮೆ ಕೊಟ್ಟು ಹೋಗುತ್ತಾರೆ. ನಂತರ ಯತ್ನಾಳ್​ ಬೇಕು, ಜಾರಕಿಹೊಳಿ‌ ಬೇಕು ಅಂತಾ ಹುಡುಕಿದರೆ ಆಗಲ್ಲ. ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ ಆಗಲಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕು. ಸಂಪುಟ ಪುನಾರಚನೆ ಬೇಗ ಆಗಬೇಕು ಎಂದರು.

ಕೆಲವರಿಗೆ 10 ವೋಟ್​ ತರೋ ಯೋಗ್ಯತೆ ಇಲ್ಲ. ಅಧಿಕಾರಕ್ಕೆ ಮಠ ಕಟ್ತಾ ಇದ್ದಾರೆ. ಅಂತಹವರನ್ನು ಮಂತ್ರಿ ಮಾಡಿದ್ದಾರೆ. ಇವರಿಂದ ಉಪಯೋಗ ಇಲ್ಲ. 3ನೇ ಮಠ ಮಾಡೋಕೆ ಹೊರಟಿದ್ದಾರೆ ಎಂದು ಪರೋಕ್ಷವಾಗಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್‌ ವಾಗ್ದಾಳಿ ನಡೆಸಿದರು.

ಮೊನ್ನೆ ರೇಣುಕಾಚಾರ್ಯ ಭೇಟಿ ಮಾಡಿದ್ದರಲ್ಲಿ ತಪ್ಪೇನಿದೆ? ನಾನೇನು ಡಿಕೆಶಿ, ಸಿದ್ದರಾಮಯ್ಯರನ್ನು ಭೇಟಿ ಮಾಡಿಲ್ಲ. ನಾನು ಜಮೀರ್ ಅಹಮದ್ ಭೇಟಿ ಮಾಡಿದ್ದೇನಾ..? ನಮ್ಮ ಪಕ್ಷದ ಶಾಸಕ ರೇಣುಕಾಚಾರ್ಯ ಅವರನ್ನು ಭೇಟಿ ಮಾಡಿದ್ದೇನೆ. ಅದರಲ್ಲಿ ತಪ್ಪೇನಿದೆ..? ನಾವು ಭೇಟಿ ಮಾಡಿದರೆ ಪಕ್ಷಕ್ಕೆ ಏನು ತೊಂದರೆ ಆಗಲ್ಲ. ಅದು ಸಭೆಯಲ್ಲ. ಚಹಾ ಕುಡಿಯಲು ಕರೆದಿದ್ದರು. ಗೃಹ ಸಚಿವರ ಭೇಟಿಗೆ ಹೋದವನು, ಅಲ್ಲಿಂದ ರೇಣುಕಾಚಾರ್ಯ ಅವರ ಕಚೇರಿಗೆ ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದರು.

ನಾನು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರೋಧಿ. ರೇಣುಕಾಚಾರ್ಯ ನನ್ನ ಮೇಲೆ ಮಾತಾಡಿದರೂ, ನಾನು ಯಾವತ್ತೂ ರೇಣುಕಾಚಾರ್ಯ ಮೇಲೆ ಮಾತಾಡಿಲ್ಲ. ನಾನು ರೇಣುಕಾಚಾರ್ಯ ಮೇಲೆ ಮಾತಾಡಿದರೆ ನಮ್ಮ ಟಾರ್ಗೆಟ್ ಆಗಿರುವ ಯಡಿಯೂರಪ್ಪ ಮತ್ತು ವಿಜಯೇಂದ್ರ ಮೇಲಿನ ಫೋಕಸ್ ಬದಲಾಗುತ್ತಿತ್ತು ಎಂದು ರೇಣುಕಾಚಾರ್ಯ ಜೊತಗಿನ ದೋಸ್ತಿಯನ್ನು ಯತ್ನಾಳ್ ಸಮರ್ಥಿಸಿಕೊಂಡರು.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.