ETV Bharat / city

ಶಿವಾಜಿನಗರ ಕ್ಷೇತ್ರದಲ್ಲಿ 'ಕೈ'ಹಿಡಿದ ಪರಂಪರಾಗತ ಮತಗಳು

2014 ಮತ್ತು 2019 ರಲ್ಲಿ ಎರಡು ಬಾರಿ ಸಂಸತ್ ಚುನಾವಣೆಯಲ್ಲಿ ಸೋಲಿನ ಬಳಿಕ ಉಪಚುನಾವಣೆ ಕಣಕ್ಕಿಳಿದಿದ್ದ ರಿಜ್ವಾನ್ ಅರ್ಷದ್ ಈಗ ಗೆದ್ದು ಬೀಗಿದ್ದಾರೆ. ಈ ಮೂಲಕ ಅವರ ಗೆಲುವಿನಲ್ಲಿ ಪರಂಪರಾಗತ ಮತಗಳ ಜೊತೆಗೆ ಒಂದಿಷ್ಟು ಅನುಕಂಪವೂ ಗೋಚರಿಸಿದೆ.

rizwan arshad
ರಿಜ್ವಾನ್ ಅರ್ಷದ್
author img

By

Published : Dec 9, 2019, 11:46 PM IST

ಬೆಂಗಳೂರು: ರಾಜ್ಯದೆಲ್ಲೆಡೆ ಸೋಲಾದರೂ ಶಿವಾಜಿನಗರದಲ್ಲಿ ಕಾಂಗ್ರೆಸ್ ಗೆಲುವಿಗೆ ಮತ್ತೊಮ್ಮೆ ಪರಂಪರಾಗತ ಮತಗಳು ಕಾರಣವಾಗಿವೆ. ಕಾಂಗ್ರೆಸ್ ಕೈ ಹಿಡಿದ ಪರಂಪರಾಗತ ಮತಗಳು ರಿಜ್ವಾನ್ ಅರ್ಷದ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ.

2014 ಮತ್ತು 2019 ರಲ್ಲಿ ಎರಡು ಬಾರಿ ಸಂಸತ್ ಚುನಾವಣೆಯಲ್ಲಿ ಸೋಲಿನ ಬಳಿಕ ಉಪಚುನಾವಣೆ ಕಣಕ್ಕಿಳಿದಿದ್ದ ರಿಜ್ವಾನ್ ಅರ್ಷದ್ ಗೆದ್ದು ಬೀಗಿದ್ದಾರೆ. ಕಳೆದೆರಡು ಲೋಕಸಭೆ ಚುನಾವಣೆಯಲ್ಲಿ ತಮಿಳು ಮತದಾರರನ್ನು ನಂಬಿ ಯಶಸ್ಸು ಕಂಡಿದ್ದ ಪಿ ಸಿ ಮೋಹನ್ ವಿರುದ್ಧ ಸೋಲುಂಡಿದ್ದ ರಿಜ್ವಾನ್, ಕಾಕತಾಳೀಯ ಎಂಬಂತೆ ಈ ಮಿನಿ ಮಹಾಸಮರದಲ್ಲಿ ತಮಿಳು ಮತದಾರರನ್ನು ನೆಚ್ಚಿಕೊಂಡಿದ್ದ ಸರವಣ ಅವರ ವಿರುದ್ಧ ಗೆದ್ದಿದ್ದಾರೆ. ಈ ಮೂಲಕ ಕಾಂಗ್ರೆಸ್​ ಗೆಲುವಿನಲ್ಲಿ ಪರಂಪರಾಗತ ಮತಗಳ ಜೊತೆಗೆ ಒಂದಿಷ್ಟು ಅನುಕಂಪವೂ ಗೋಚರಿಸಿದೆ.

ಅಸಹಕಾರ ನಗಣ್ಯ

ಕೆಲ ಹಿರಿಯ ನಾಯಕರ ಗೈರು, ಸ್ಥಳೀಯ ಮುಖಂಡರ ಅಸಹಕಾರದ ನಡುವೆಯೂ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಸಮರ್ಥವಾಗಿ ರಿಜ್ವಾನ್ ಪರ ಪ್ರಚಾರ ಮಾಡದಿದ್ದರೂ ಕೂಡ, ಅನರ್ಹ ಶಾಸಕ ರೋಷನ್ ಬೇಗ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರೂ ಸಹ, ಕಾಂಗ್ರೆಸ್ ಪಾಲಿಕೆ ಸದಸ್ಯರೇ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾಗಿಯೂ ರಿಜ್ವಾನ್ ಗೆಲುವು ಸಾಧಿಸಿದ್ದಾರೆ.

ಏಕಾಂಗಿಯಾಗಿ ಪ್ರಚಾರ ನಡೆಸಿದ್ದ ರಿಜ್ವಾನ್ ಅವರನ್ನ ಶಿವಾಜಿನಗರ ಮತದಾರರು ಬಿಟ್ಟಿಲ್ಲ. ಐಎಂಎ ಹಗರಣದಲ್ಲಿ ಗುರುತಿಸಿಕೊಂಡಿರುವ ಹಿನ್ನೆಲೆ ರೋಷನ್ ಬೇಗ್ ನೇರವಾಗಿ ಪ್ರಚಾರಕ್ಕೆ ಇಳಿಯಲಿಲ್ಲ. ಸಿಎಂ ಬಿ ಎಸ್ ಯಡಿಯೂರಪ್ಪ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟರೂ, ಕಾಂಗ್ರೆಸ್​ ಭದ್ರಕೋಟೆ ಆಗಿರುವ ಶಿವಾಜಿನಗರ ಕೋಟೆಯನ್ನು ಭೇದಿಸಲು ಸಾಧ್ಯವಾಗಿಲ್ಲ.

ಆರಂಭದಿಂದಲೂ ಯಾವ ಸುತ್ತಿನಲ್ಲಿಯೂ ಕಾಣದ ರಿಜ್ವಾನ್ ಸಾಂಪ್ರದಾಯಿಕ ಮತಗಳ ಬೇಟೆಯ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಗೆಲುವಿನ ನಂತರ ರಿಜ್ವಾನ್ ಅರ್ಷದ್ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.

Intro:newsBody:ಶಿವಾಜಿನಗರ ಕ್ಷೇತ್ರದಲ್ಲಿ 'ಕೈ'ಹಿಡಿದ ಪರಂಪರಾಗತ ಮತಗಳು

ಬೆಂಗಳೂರು: ರಾಜ್ಯದಲ್ಲೆಡೆ ಸೋಲಾದರೂ ಶಿವಾಜಿನಗರದಲ್ಲಿ ಕಾಂಗ್ರೆಸ್ ಗೆಲುವಿಗೆ ಮತ್ತೊಮ್ಮೆ ಪರಂಪರಾಗತ ಮತಗಳು ಕಾರಣವಾಗಿವೆ.
ಕಾಂಗ್ರೆಸ್ ಕೈ ಹಿಡಿದ ಪರಂಪರಾಗತ ಮತಗಳು ರಿಜ್ವಾನ್ ಅರ್ಷದ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿವೆ.
2014 ಮತ್ತು 2019 ರಲ್ಲಿ ಎರಡು ಬಾರಿ ಸಂಸತ್ ಚುನಾವಣೆಯಲ್ಲಿ ಸೋಲಿನ ಬಳಿಕ ಉಪಚುನಾವಣೆಗೆ ಕಣಕ್ಕಿಳಿದಿದ್ದ ರಿಜ್ವಾನ್ ಅರ್ಷದ್ ಗೆದ್ದು ಬೀಗಿದ್ದಾರೆ. ಕಳೆದೆರಡು ಲೋಕಸಭೆ ಚುನಾವಣೆಯಲ್ಲಿ ತಮಿಳು ಮತದಾರರನ್ನು ನಂಬಿ ಯಶಸ್ಸು ಕಂಡಿದ್ದ ಪಿಸಿ ಮೋಹನ್ ವಿರುದ್ಧ ಸೋಲುಂಡಿದ್ದ ರಿಜ್ವಾನ್ ಅರ್ಷದ್, ಕಾಕತಾಳೀಯ ಎಂಬಂತೆ ಈ ಶಾಲೆಯ ಮಿನಿ ಮಹಾಸಮರದಲ್ಲಿ ತಮಿಳು ಮತದಾರರನ್ನು ನೆಚ್ಚಿಕೊಂಡಿದ್ದ ಸರವಣ ಅವರ ವಿರುದ್ಧ ಗೆದ್ದಿದ್ದಾರೆ. ಈ ಮೂಲಕ ಅವರ ಗೆಲುವಿನಲ್ಲಿ ಪರಂಪರಾಗತ ಮತಗಳ ಜೊತೆಗೆ ಒಂದಿಷ್ಟು ಅನುಕಂಪವೂ ಗೋಚರಿಸಿದೆ.
ಅಸಹಕಾರ ನಗಣ್ಯ
ಕೆಲ ಹಿರಿಯ ನಾಯಕರ ಗೈರು, ಸ್ಥಳೀಯ ಮುಖಂಡರ ಅಸಹಕಾರದ ನಡುವೆಯೂ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಸಮರ್ಥವಾಗಿ ರಿಜ್ವಾನ್ ಪರ ಪ್ರಚಾರ ಮಾಡದಿದ್ದರೂ ಕೂಡ, ಅನರ್ಹ ಶಾಸಕ ರೋಷನ್ ಬೇಗ್ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರೂ ಸಹ, ಕಾಂಗ್ರೆಸ್ ಪಾಲಿಕೆ ಸದಸ್ಯರೇ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾಗಿಯೂ ರಿಜ್ವಾನ್ ಗೆಲವು ಸಾಧಿಸಿದ್ದಾರೆ.
ಏಕಾಂಗಿಯಾಗಿ ಪ್ರಚಾರ ನಡೆಸಿದ್ದ ರಿಜ್ವಾನ್ ಅರ್ಷದ್ ಅವರನ್ನ ಶಿವಾಜಿನಗರ ಮತದಾರರು ಬಿಟ್ಟಿಲ್ಲ. ಐಎಂಎ ಹಗರಣದಲ್ಲಿ ಗುರುತಿಸಿಕೊಂಡಿರುವ ಹಿನ್ನೆಲೆ ರೋಷನ್ ಬೇಗ್ ನೇರವಾಗಿ ಪ್ರಚಾರಕ್ಕೆ ಇಳಿಯಲಿಲ್ಲ. ಅಂತೆಯೇ ತಮಿಳು ಮತದಾರರು ಹೆಚ್ಚಿರುವ ಹಿನ್ನೆಲೆ ಅವರನ್ನು ನೆಚ್ಚಿಕೊಂಡು ಬಿಜೆಪಿ ಸರವಣ ಅವರನ್ನು ಕಣಕ್ಕಿಳಿಸಿದ್ದು ಇಲ್ಲಿ ಫಲ ಕೊಟ್ಟಿಲ್ಲ. ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟರೂ, ಕಾಂಗ್ರೆಸ್ನ ಭದ್ರಕೋಟೆ ಯಾಗಿರುವ ಶಿವಾಜಿನಗರ ವನ್ನ ಭೇದಿಸಲು ಸಾಧ್ಯವಾಗಿಲ್ಲ. ಕಡೆಯ ಮೂರು ಗಂಟೆಗಳ ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಅಲ್ಪಸಂಖ್ಯಾತ ಮತದಾರರು ರಿಜ್ವಾನ್ ಗೆ ನೀಡಿದ ಮತ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಆರಂಭದಿಂದಲೂ ಯಾವ ಸುತ್ತಿನಲ್ಲಿ ಯು ಕಾಣದೆ ರಿಜ್ವಾನ್ ಹರ್ಷದ್ ಸಾಂಪ್ರದಾಯಿಕ ಮತಗಳ ಬೇಟೆಯ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
ಗೆಲುವಿನ ಅಂತರ ರಿಜ್ವಾನ್ ಅರ್ಷದ್ ವಿವಿಧ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.Conclusion:news

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.