ಬೆಂಗಳೂರು: ನಗರದ ಶಾಲೆಯೊಂದು ಪೂರ್ತಿ ಫೀಸ್ ಕಟ್ಟುವಂತೆ, ಇಲ್ಲದಿದ್ದರೆ ಮಕ್ಕಳನ್ನು ಫೇಲ್ ಮಾಡುವುದಾಗಿ ಪೋಷಕರಿಗೆ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿ ಬಂದಿದೆ.
ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದರಿಂದ ಶಾಲೆಗಳನ್ನು ಮುಚ್ಚಲಾಗಿದೆ. ಅಲ್ಲದೆ, ಮಕ್ಕಳನ್ನು ನೇರ ತೇರ್ಗಡೆ ಮಾಡಲು ಸರ್ಕಾರ ತಿಳಿಸಿದೆ. ಆದ್ರೆ ನಗರದ ಶಾಲೆಯೊಂದು ಪೂರ್ತಿಯಾಗಿ ಫೀ ಕಟ್ಟುವಂತೆ ಪೋಷಕರಿಗೆ ಬೆದರಿಕೆ ಹಾಕುತ್ತಿದೆ ಎಂದು ಹೇಳಲಾಗಿದೆ.
ಒಂದು ವರ್ಷಕ್ಕೆ ಮಕ್ಕಳ ಶಾಲಾ ಶುಲ್ಕ 35000 ರೂ. ಇದೆ. ಅದನ್ನು ಪೂರ್ತಿಯಾಗಿ ಕಟ್ಟುವುದರ ಜೊತೆಗೆ ಡೋನೆಷನ್ ಕೂಡ ನೀಡಬೇಕು ಎಂದು ಶಾಲಾ ಆಡಳಿತ ಮಂಡಳಿ ಪೋಷಕರ ಮೇಲೆ ಒತ್ತಡ ಹಾಕುತ್ತಿದೆ ಎಂದು ಆರೋಪಿಸಲಾಗಿದೆ.