ETV Bharat / city

ಆ್ಯಂಬುಲೆನ್ಸ್ ಟೈಯರ್​ ಸಮಸ್ಯೆ : ರೋಗಿ ಜೀವ ಉಳಿಸಲು ಮೆಕ್ಯಾನಿಕ್ ಆದ ಪೊಲೀಸ್​ ಕಾನ್ಸ್​ಟೇಬಲ್​..

author img

By

Published : Feb 2, 2022, 1:19 PM IST

Updated : Feb 2, 2022, 1:40 PM IST

ಒಬ್ಬನೇ ಟೈರ್ ಚೇಂಜ್ ಮಾಡಲು ಒದ್ದಾಡುತ್ತಿದ್ದ ಚಾಲಕನನ್ನು ಕಂಡು ಸ್ಥಳಕ್ಕೆ ಬಂದ ಕಾನ್ಸ್​ಟೇಬಲ್​ ಕಾಸಪ್ಪ ಕಲ್ಲೂರು ತಾನೇ ಸ್ಪ್ಯಾನರ್ ಹಿಡಿದು ಟೈಯರ್ ಬಿಚ್ಚಿ ಬೇರೆ ಟೈಯರ್ ಅನ್ನು ಹಾಕಿ ಆ್ಯಂಬುಲೆನ್ಸ್ ತೆರಳಲು ಅನುವು ಮಾಡಿಕೊಟ್ಟಿದ್ದಾರೆ. ಕಷ್ಟ ಕಾಲದಲ್ಲಿ ಸಹಾಯಕ್ಕೆ ಬಂದ ಕಾನ್ಸ್​​ಟೇಬಲ್​ಗೆ, ರೋಗಿ ಕುಟುಂಬಸ್ಥರು ಹೃದಯಪೂರ್ವಕವಾಗಿ ಧನ್ಯವಾದ ಸಲ್ಲಿಸಿದ್ದಾರೆ..

police constables humanity work
ಮಾನವೀಯತೆ ಮೆರೆದ ಪೊಲೀಸ್​ ಕಾನ್ಸ್​ಟೇಬಲ್

ಬೆಂಗಳೂರು : ಒಂದೆಡೆ ಟ್ರಾಫಿಕ್ ಪೊಲೀಸರ ಟೋಯಿಂಗ್ ವ್ಯವಸ್ಥೆ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ನಿಷ್ಠಾವಂತ ಪೊಲೀಸರು ಮಾನವೀಯತೆ ಮೆರೆಯುವ ಘಟನೆಗಳೂ ನಡೆಯುತ್ತಿವೆ. ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್ ಕಾಸಪ್ಪ ಕಲ್ಲೂರು ಅವರ ಸಮಯಪ್ರಜ್ಞೆಯಿಂದ ಒಂದು ಅಮೂಲ್ಯ ಜೀವ ಉಳಿದಿದೆ.

ಗ್ಲೋಬಲ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ರೋಗಿಯನ್ನು ಹೊತ್ತ ಆ್ಯಂಬುಲೆನ್ಸ್ ನಿನ್ನೆ ಮಧ್ಯಾಹ್ನ ಚಾಲುಕ್ಯ ಸರ್ಕಲ್ ಬಳಿ ಇರುವ ಸಿಐಡಿ ಕಚೇರಿ ಬಳಿ ಬರುವಾಗ ಟೈರ್ ಪಂಕ್ಚರ್ ಆಗಿದೆ. ಎಮರ್ಜೆನ್ಸಿ ಎಂಬ ಕಾರಣಕ್ಕೆ ರೋಗಿಯ ಪತ್ನಿ ಮತ್ತು ಮಗಳು ಸತತ 10 ಬಾರಿ ಆ್ಯಂಬುಲೆನ್ಸ್​​ಗೆ ಕರೆ ಮಾಡಿದ್ದರು.

ರೋಗಿ ಜೀವ ಉಳಿಸಲು ಮೆಕ್ಯಾನಿಕ್ ಆದ ಪೊಲೀಸ್​ ಕಾನ್ಸ್​ಟೇಬಲ್

ಆದ್ರೆ, ಯಾವುದೇ ವಾಹನಗಳು ಬರಲಿಲ್ಲ. ಒಳಗೆ ರೋಗಿಯ‌ ನರಳಾಟ ಹೆಚ್ಚಾಗಿತ್ತು. ದುಃಖದಲ್ಲಿದ್ದ ಮಹಿಳೆಯರು ಕಣ್ಣೀರಿಡುತ್ತಿದ್ದರು. ಸಹಾಯಕ್ಕೆ ಯಾರೂ ಕೂಡ ಬಂದಿರಲಿಲ್ಲ. ಆ್ಯಂಬುಲೆನ್ಸ್​​ನಲ್ಲಿ ಆಕ್ಸಿಜನ್ ಲೆವೆಲ್ ಕೂಡ ಕಡಿಮೆಯಾಗುತ್ತಿತ್ತು.

ಇದನ್ನೂ ಓದಿ: ರಾಜ್ಯ ಬಜೆಟ್ ಸಿದ್ಧತೆ: ಫೆ. 7ರಿಂದ ಸಿಎಂ ಬೊಮ್ಮಾಯಿ ಸರಣಿ ಸಭೆ

ಈ ವೇಳೆ ಒಬ್ಬನೇ ಟೈರ್ ಚೇಂಜ್ ಮಾಡಲು ಒದ್ದಾಡುತ್ತಿದ್ದ ಚಾಲಕನನ್ನು ಕಂಡು ಸ್ಥಳಕ್ಕೆ ಬಂದ ಕಾನ್ಸ್​ಟೇಬಲ್​ ಕಾಸಪ್ಪ ಕಲ್ಲೂರು ತಾನೇ ಸ್ಪ್ಯಾನರ್ ಹಿಡಿದು ಟೈಯರ್ ಬಿಚ್ಚಿ ಬೇರೆ ಟೈಯರ್ ಅನ್ನು ಹಾಕಿ ಆ್ಯಂಬುಲೆನ್ಸ್ ತೆರಳಲು ಅನುವು ಮಾಡಿಕೊಟ್ಟಿದ್ದಾರೆ. ಕಷ್ಟ ಕಾಲದಲ್ಲಿ ಸಹಾಯಕ್ಕೆ ಬಂದ ಕಾನ್ಸ್​​ಟೇಬಲ್​ಗೆ, ರೋಗಿ ಕುಟುಂಬಸ್ಥರು ಹೃದಯಪೂರ್ವಕವಾಗಿ ಧನ್ಯವಾದ ಸಲ್ಲಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಆ್ಯಂಬುಲೆನ್ಸ್​ಗೆ ಬೇರೆ ಟೈಯರ್ ಹಾಕಿ ಹೊರಡುವಾಗ ಮತ್ತೊಂದು ಆ್ಯಂಬುಲೆನ್ಸ್ ಬಂದಿದೆ. ಆದ್ರೆ, ಪೊಲೀಸ್​ ಕಾನ್ಸ್​​ಟೇಬಲ್​ ಸಹಾಯದಿಂದ ಕೊನೆಗೂ ಅದೇ ಆ್ಯಂಬುಲೆನ್ಸ್ ಸರಿಯಾಗಿ ಆಸ್ಪತ್ರೆ ತಲುಪಿದೆ.

Last Updated : Feb 2, 2022, 1:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.